ವೊಡಾಫೋನ್’ನಿಂದ ಗ್ರಾಹಕರಿಗೆ ಭರ್ಜರಿ ಆಫರ್

Vodafone revamps Rs 349 prepaid plan; now offers 3GB daily data
Highlights

ಟೆಲಿಕಾಂ ಮಾರುಕಟ್ಟೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಂಚಲನವನ್ನು ಉಂಟು ಮಾಡಿದ್ದ ರಿಲಾಯನ್ಸ್ ಜಿಯೋಗೆ ಸ್ಪರ್ಧೆ ಒಡ್ಡಲು ಹಲವು ಟೆಲಿಕಾಂ ಕಂಪನಿಗಳು ನಿರಂತರವಾಗಿ ಯತ್ನಿಸುತ್ತಲೇ ಇವೆ. ಇದೀಗ ಈ ಸಾಲಿಗೆ ವೊಡಾಫೋನ್ ಸೇರಿದ್ದು ಮತ್ತಷ್ಟು ಭರ್ಜರಿ ಆಫರ್’ಗಳನ್ನು ನೀಡುವ ಮೂಲಕ ಗ್ರಾಹಕರ ಸೆಳೆಯುವ ಯತ್ನ ಮಾಡಿದೆ.

ಬೆಂಗಳೂರು : ಟೆಲಿಕಾಂ ಮಾರುಕಟ್ಟೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಂಚಲನವನ್ನು ಉಂಟು ಮಾಡಿದ್ದ ರಿಲಾಯನ್ಸ್ ಜಿಯೋಗೆ ಸ್ಪರ್ಧೆ ಒಡ್ಡಲು ಹಲವು ಟೆಲಿಕಾಂ ಕಂಪನಿಗಳು ನಿರಂತರವಾಗಿ ಯತ್ನಿಸುತ್ತಲೇ ಇವೆ. ಇದೀಗ ವೊಡಾಫೋನ್ ಕೂಡ ಭರ್ಜರಿ ಆಫರ್’ಗಳನ್ನು ಪರಿಚಯಿಸುತ್ತಿದೆ.

ವೊಡಾಫೋನ್ ತನ್ನ ಹಳೆಯ  349 ರು.ಗೆ ಪ್ರೀಪೇಯ್ಡ್ ಫ್ಲಾನ್’ನ್ನು ಪರಿಷ್ಕರಣೆ ಮಾಡಿದೆ. ಈ ಪ್ಲಾನ್’ನಲ್ಲಿ ಮೊದಲು ಸಿಗುತ್ತಿರುವುದಕ್ಕಿಂದ ಈಗ ಹೆಚ್ಚುವರಿಯಾಗಿ ಪ್ರತಿದಿನ 500 ಎಂಬಿ ಡೇಟಾವನ್ನು ನೀಡಲಾಗುತ್ತಿದೆ. ಈ ಮೊದಲು ಪ್ರತಿದಿನ 2.5 ಜಿಬಿ 3ಜಿ/4ಜಿ ಡೇಟಾವನ್ನು ನೀಡಲಾಗುತ್ತಿತ್ತು. ಇದೀಗ ಇದಕ್ಕೆ ಮತ್ತೆ ಹೆಚ್ಚುವರಿಯಾಗಿ ಎಂಬಿಯನ್ನು ಸೇರಿಸಲಾಗಿದೆ.

ಒಟ್ಟು 28 ದಿನಗಳ ಕಾಲ ಈ ಪ್ಲಾನ್ ಅವಧಿಯಾಗಿದ್ದು, ಒಟ್ಟು 84 ಜಿಬಿ ಡೇಟಾ ಸೌಲಭ್ಯ ಒದಗಿಸಲಾಗುತ್ತಿದೆ. ಅಲ್ಲದೇ ಪ್ರತಿದಿನ ಗ್ರಾಹಕರು 100 ಉಚಿತ ಎಸ್ ಎಂಎಸ್ ಮಾಡುವ ಅವಕಾಶವನ್ನೂ ಕೂಡ ಒದಗಿಸಿದೆ.

ಈ ಮೂಲಕ ವೊಡಾಫೋನ್ ಗ್ರಾಹಕರು ತಮ್ಮ ಹೊಸ ಆಫರ್’ನೊಂದಿಗೆ ಎಂಜಾಯ್ ಮಾಡಬಹುದಾಗಿದೆ. 

loader