ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಎಲ್ಲಾ ಟೆಲಿಕಾಂ ಸಂಸ್ಥೆಗಳೂ ಕೂಡ ಪೈಪೋಟಿಗೆ ಬಿದ್ದಂತೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡುತ್ತಿವೆ. ರಿಲಾಯನ್ಸ್ ಜಿಯೋಗೆ ಸಡ್ಡು ಹೊಡೆಯಲು ಹೀಗೆ ಮಾಡುತ್ತಿವೆ. ಇದೀಗ ಈ ಸರದಿ ವೊಡಾ ಫೊನ್’ನದ್ದಾಗಿದೆ.
ನವದೆಹಲಿ : ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಎಲ್ಲಾ ಟೆಲಿಕಾಂ ಸಂಸ್ಥೆಗಳೂ ಕೂಡ ಪೈಪೋಟಿಗೆ ಬಿದ್ದಂತೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡುತ್ತಿವೆ. ರಿಲಾಯನ್ಸ್ ಜಿಯೋಗೆ ಸಡ್ಡು ಹೊಡೆಯಲು ಹೀಗೆ ಮಾಡುತ್ತಿವೆ. ಇದೀಗ ಈ ಸರದಿ ವೊಡಾ ಫೊನ್’ನದ್ದಾಗಿದೆ.
ವೊಡಾಫೋನ್ ಇದೀಗ 2 ರೀತಿಯಾದ ಹೊಸ ಆಫರ್’ಗಳನ್ನು ನೀಡುತ್ತಿದೆ. ಅದರಲ್ಲಿ 151 ಮತ್ತು 158 ರು.ಗಳ 2 ಆಫರ್’ಗಳನ್ನು ನೀಡುತ್ತಿದೆ. 151 ರು.ನ ಪ್ಲಾನ್’ನಲ್ಲಿ ಅನಿಯಮಿತ ಕರೆ ಸೌಲಭ್ಯವು 18 ದಿನಗಳ ಕಾಲ ಲಭ್ಯವಾಗಲಿದೆ. ಇದು ಸದ್ಯ ಕೇರಳ ಟೆಲಿಕಾಂ ಸರ್ವೀಸ್’ನಲ್ಲಿ ಲಭ್ಯವಿದೆ.
ಇನ್ನೊಂದು 158 ರು.ಗಳ ಪ್ಲಾನ್’ನಲ್ಲಿ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯವಿದೆ. ಆದರೆ ಇದರಲ್ಲಿ ವಾರಕ್ಕೆ 1000 ನಿಮಿಷಗಳಷ್ಟು ಮಾತ್ರವೇ ಉಚಿತವಾಗಿ ಮಾತನಾಡಬಹುದಾಗಿದೆ. ಅಂದರೆ ದಿನಕ್ಕೆ 250 ನಿಮಿಷ ಉಚಿತ ಕರೆ ಸೌಲಭ್ಯವಿರಲಿದೆ. ಅಲ್ಲದೇ ಹೆಚ್ಚುವರಿಯಾಗಿ ದಿನಕ್ಕೆ 1ಜಿಬಿ 4ಜಿ,3ಜಿ ಡಾಟಾ ಸೌಲಭ್ಯವು ದೊರಕುತ್ತಿದೆ. ಈ ಪ್ಲಾನ್ ರಿಸ್ಟ್ರಿಕ್ಟೆಡ್ ಆಗಿದ್ದು, ಕೇರಳ ಟೆಲಿಕಾಂ ಕ್ಷೇತ್ರದಲ್ಲಿ ಲಭ್ಯವಿರಲಿದೆ.
