ಭಾರತದ ಮೊತ್ತ ಮೊದಲ ಎಲೆಕ್ಟ್ರಿಕಲ್ ಹೈಪರ್ ಕಾರು ಹೇಗಿದೆ? ಬೆಲೆ ಎಷ್ಟು?

First Published 14, Jul 2018, 5:36 PM IST
Vazirani shul indias first electric hypercar
Highlights

ಹ್ಯುಂಡೈ ಭಾರತದ ಮೊತ್ತ ಮೊದಲ ಎಲೆಕ್ಟ್ರಿಕಲ್ ಕಾರು ಬಿಡುಗಡೆಗೆ ಸಜ್ಜಾಗಿದ್ದರೆ, ಇದೀಗ ವಝಿರಾನಿ ಅಟೋಮೇಟಿವ್ ಹೈಪರ್ ಕಾರು ಬಿಡುಗಡೆಗೆ ಮೂಹೂರ್ತ ಫಿಕ್ಸ್ ಮಾಡಿದೆ. ಈ ಕಾರಿನ ವಿಶೇಷ  ಏನು? ಇಲ್ಲಿದೆ ಮಾಹಿತಿ.
 

ಬೆಂಗಳೂರು(ಜು.14): ವಿಶ್ವದಲ್ಲೀಗ ಎಲೆಕ್ಟ್ರಿಕಲ್ ಕಾರು ಉತ್ಪಾದನೆಗೆ ಆಯಾ ದೇಶದ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಭವಿಷ್ಯದ ಕಾರು ಎಂದೇ ಗುರುತಿಸಿಕೊಂಡಿರುವ ಎಲೆಕ್ಟ್ರಿಕಲ್ ಕಾರಿನಲ್ಲಿ ಇದೀಗ ಪೈಪೋಟಿ ಆರಂಭವಾಗಿದೆ.

ಭಾರತದಲ್ಲಿ ಹಲವು ಕಾರು ತಯಾರಿಕಾ ಸಂಸ್ಥೆಗುಲ ಎಲೆಕ್ಟ್ರಿಕಲ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಇದೀಗ ವಝಿರಾನಿ ಅಟೋಮೇಟಿವ್ ಕಂಪನಿ ಭಾರತದಲ್ಲಿ ಮೊತ್ತ ಮೊದಲ ಎಲೆಕ್ಟ್ರಿಕಲ್ ಹೈಪರ್ ಕಾರು ಬಿಡುಗಡೆಗೆ ಸಜ್ಜಾಗಿದೆ.

ನೂತನ ಎಲೆಕ್ಟ್ರಿಕಲ್ ಕಾರು ವಝಿರಾನಿ ಶೂಲ್ ಹೆಸರಿನಲ್ಲಿ ಎಲೆಕ್ಟ್ರಿಕಲ್ ಹೈಪರ್ ಕಾರು ಹೊರತಂದಿದೆ. ಗುಡ್‌ವುಡ್ ಕಾರ್ ಫೆಸ್ಟಿವಲ್‌ನಲ್ಲಿ ಈ ನೂತನ ಕಾರನ್ನ ಪರಿಚಯಿಸಲಾಗಿದೆ. ಕಡಿಮೆ ತೂಕಕದ ಬ್ಯಾಟರಿ ಅಳವಡಿಸಲಾಗಿದೆ. ಹೀಗಾಗಿಶೀಘ್ರದಲ್ಲೇ ಚಾರ್ಜ್ ಮಾಡಿಕೊಳ್ಳೋ ಸೌಲಭ್ಯವಿದೆ.

ಈ ಕಾರು ಫೋರ್ ವೀಲ್ ಡ್ರೈವಿಂಗ್. ಭಾರತದ ರಸ್ತೆಗೆ ಅನುಗುಣವಾಗಿ ಈ ಕಾರನ್ನ ತಯಾರಿಸಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ನಿರ್ಮಾಣವಾಗಿರೋ ಈ ಕಾರು ಶೀಘ್ರದಲ್ಲೇ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲಿದೆ.

ಗುಡ್‌ವುಡ್ ಕಾರು ಫೆಸ್ಟಿವಲ್‌ನಲ್ಲಿ ಲಾಂಚ್ ಆಗಿರೋ ಈ ಕಾರು ಇನ್ನೆರಡು ವರ್ಷದಲ್ಲಿ ಭಾರತದ ರಸ್ತೆಗಿಳಿಯಲಿದೆ. ಆದರೆ ಇದರ ಬೆಲೆ, ಹಾಗೂ ಇತರ ಮಾಹಿತಿಯನ್ನ ಸಂಸ್ಥೆ ಬಹಿರಂಗ ಪಡಿಸಿಲ್ಲ. 


 

loader