ಬೆಂಗಳೂರು(ಜು.14): ವಿಶ್ವದಲ್ಲೀಗ ಎಲೆಕ್ಟ್ರಿಕಲ್ ಕಾರು ಉತ್ಪಾದನೆಗೆ ಆಯಾ ದೇಶದ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಭವಿಷ್ಯದ ಕಾರು ಎಂದೇ ಗುರುತಿಸಿಕೊಂಡಿರುವ ಎಲೆಕ್ಟ್ರಿಕಲ್ ಕಾರಿನಲ್ಲಿ ಇದೀಗ ಪೈಪೋಟಿ ಆರಂಭವಾಗಿದೆ.

ಭಾರತದಲ್ಲಿ ಹಲವು ಕಾರು ತಯಾರಿಕಾ ಸಂಸ್ಥೆಗಳು ಎಲೆಕ್ಟ್ರಿಕಲ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಇದೀಗ ವಝಿರಾನಿ  ಅಟೋಮೇಟಿವ್ ಕಂಪನಿ ಭಾರತದಲ್ಲಿ ಮೊತ್ತ ಮೊದಲ ಎಲೆಕ್ಟ್ರಿಕಲ್ ಹೈಪರ್ ಕಾರು ಬಿಡುಗಡೆಗೆ ಮಾಡಿದೆ.

ನೂತನ ಎಲೆಕ್ಟ್ರಿಕಲ್ ಕಾರು ವಝಿರಾನಿ ಶಲ್ ಹೆಸರಿನಲ್ಲಿ ಎಲೆಕ್ಟ್ರಿಕಲ್ ಹೈಪರ್ ಕಾರು ಹೊರತಂದಿದೆ. ಗುಡ್‌ವುಡ್ ಕಾರ್ ಫೆಸ್ಟಿವಲ್‌ನಲ್ಲಿ ಈ ನೂತನ ಕಾರನ್ನ ಪರಿಚಯಿಸಲಾಗಿತ್ತು. ಇದೀಗ ಭಾರತದ ಮಾರುಕಟ್ಟೆ ಪ್ರವೇಶಿಸಿದೆ.  ಕಡಿಮೆ ತೂಕದ ಬ್ಯಾಟರಿ ಅಳವಡಿಸಲಾಗಿದೆ. ಹೀಗಾಗಿ ಶೀಘ್ರದಲ್ಲೇ ಚಾರ್ಜ್ ಮಾಡಿಕೊಳ್ಳೋ ಸೌಲಭ್ಯವಿದೆ.

ಈ ಕಾರು ಫೋರ್ ವೀಲ್ ಡ್ರೈವಿಂಗ್. ಭಾರತದ ರಸ್ತೆಗೆ ಅನುಗುಣವಾಗಿ ಈ ಕಾರನ್ನ ತಯಾರಿಸಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ನಿರ್ಮಾಣವಾಗಿರೋ ಈ ಕಾರು ಶೀಘ್ರದಲ್ಲೇ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲಿದೆ.

ವಝಿರಾನಿ ಶಲ್ ಕಾರಿನ ಬೆಲೆ, ಹಾಗೂ ಇತರ ಮಾಹಿತಿ ಕುರಿತು ಕಂಪೆನಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಆಕರ್ಷ ವಿನ್ಯಾಸ ಮಾತ್ರ ಎಲ್ಲರ ಕಣ್ಣು ಕುಕ್ಕುತ್ತಿದೆ.