ಮುಂಬೈ-ದುಬೈ ನಡುವೆ ಸಾಗರಾಳದ ತೇಲುವ ರೈಲು!

ಇನ್ಮುಂದೆ ದುಬೈ ಪ್ರಯಾಣಕ್ಕೆ ಸಾಗರಾಳದ ತೇಲುವ ರೈಲು! ಭಾರತದ ಮುಂಬೈದಿಂದ ದುಬೈಗೆ ಜಲಗರ್ಭ ತೇಲುವ ರೈಲು! ಯುಎಇಯ ನ್ಯಾಷನಲ್ ಅಡ್ವೆಸರ್ ಬ್ಯೂರೋ ಸಂಸ್ಥೆ ಮಹತ್ವಾಕಾಂಕ್ಷಿ ಯೋಜನೆ! ಯುಎಇನ ಫುಜೈರಾದಿಂದ ಭಾರತದ ಮುಂಬೈಗೆ ಸಾಗರಾಳದಲ್ಲಿ ರೈಲು ಜಾಲ! ವಾಣಿಜ್ಯ ಬಾಂಧವ್ಯ ಮತ್ತು ಪ್ರವಾಸೋದ್ಯ ಅಭಿವೃದ್ಧಿಯ ಉದ್ದೇಶ! ಪೈಪ್‌ಲೈನ್ ಮೂಲಕ ಭಾರತಕ್ಕೆ ತೈಲ ರಫ್ತು, ನರ್ಮದಾ ನದಿಯಿಂದ ನೀರು ಆಮದು!

UAE Plans For Underwater High-Speed Train To Mumbai

ನವದೆಹಲಿ(ಡಿ.01): ಈಗಾಗಲೇ ಭಾರತಕ್ಕೆ ಜಪಾನ್‌ನಿಂದ ಬುಲೆಟ್ ರೈಲು ಬರುವುದು ನಿಶ್ಚಯವಾಗಿದೆ. 2020ರ ವೇಳೆಗೆ ಜಪಾನ್ ತಂತ್ರಜ್ಞಾನದ ಬುಲೆಟ್ ರೈಲು ಭಾರತದಲ್ಲಿ ಸಂಚರಿಸುವುದು ಬಹುತೇಕ ನಿಶ್ಚಯವಾಗಿದೆ.

ಈ ಮಧ್ಯೆ ಭಾರತೀಯರಿಗೆ ಮತ್ತೊಂದು ಸಿಹಿ ಸುದ್ದಿ ಕಾದಿದ್ದು, ಶೀಘ್ರದಲ್ಲೇ ಮುಂಬೈದಿಂದ ದುಬೈಗೆ ಜಲಗರ್ಭ ತೇಲುವ ರೈಲು (Floating Train) ಸಂಚಾರ ಆರಂಭವಾಗಲಿದೆ.

ಹೌದು, ಯುಎಇಯ ನ್ಯಾಷನಲ್ ಅಡ್ವೆಸರ್ ಬ್ಯೂರೋ ಸಂಸ್ಥೆ ಈ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದ್ದು, ಯುಎಇನ ಫುಜೈರಾದಿಂದ ಭಾರತದ ಮುಂಬೈಗೆ ಸಾಗರಾಳದಲ್ಲಿ ರೈಲು ಜಾಲ ನಿರ್ಮಾಣ ಮಾಡುವ ಗುರಿ ಹೊಂದಿದೆ. 

ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಸಂಸ್ಥೆ, ಸದ್ಯ ಇಂದೊಂದು ಕೇವಲ ಪರಿಕಲ್ಪನೆಯಾಗಿದ್ದು, ಭಾರತದ ವಾಣಿಜ್ಯ ನಗರಿ ಮುಂಬೈದಿಂದ ಫುಜೈರಾಗೆ ಅಲ್ಟ್ರಾ-ವೇಗದ ತೇಲುವ ರೈಲು ಸಂಚಾರ ಸಾಧ್ಯತೆಯನ್ನು ಪರಿಗಣಿಸುತ್ತಿದ್ದೇವೆ ಎಂದು ಹೇಳಿದೆ.

UAE Plans For Underwater High-Speed Train To Mumbai

ವಾಣಿಜ್ಯ ಬಾಂಧವ್ಯ ಮತ್ತು ಪ್ರವಾಸೋದ್ಯ ಅಭಿವೃದ್ಧಿ ಹಾಗೂ ಪೈಪ್‌ಲೈನ್ ಮೂಲಕ ಭಾರತಕ್ಕೆ ತೈಲ ರಫ್ತು ಮಾಡುವ ಉದ್ದೇಶದಿಂದ ಈ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ನ್ಯಾಷನಲ್ ಅಡ್ವೆಸರ್ ಬ್ಯೂರೋ ಸಂಸ್ಥೆ ತಿಳಿಸಿದೆ. 

ಒಟ್ಟು 2000 ಕೀ.ಮೀ. ಒಟ್ಟು ರೈಲು ಜಾಲ ಯೋಜನೆಯಾದ ಇದರಲ್ಲಿ, ಉತ್ತರ ಮುಂಬೈನ ನರ್ಮದಾ ನದಿಯಿಂದ ಯುಎಇಗೆ ನೀರು ಆಮದು ಮಾಡಿಕೊಳ್ಳುವ ಮಹತ್ತರವಾದ ಯೋಜನೆ ಕೂಡ ಸೇರಿದೆ. 

ಅಂದಹಾಗೆ ತೇಲುವ ರೈಲು ಅಥವಾ ಮ್ಯಾಗ್ಲೆವ್ ರೈಲುಗಳು ಮ್ಯಾಗ್ನೆಟ್ ವಿಕರ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಘರ್ಷಣಾ ರಹಿತವಾಗಿದ್ದರಿಂದ ಹೆಚ್ಚು ವೇಗದಲ್ಲಿ ಸಂಚರಿಸಲು ನೆರವಾಗುತ್ತದೆ. ಪ್ರಸ್ತುತ ಹೈ-ಸ್ಪೀಡ್ ಮ್ಯಾಗ್ಲೆವ್ ರೈಲುಗಳು ಚೀನಾ ಹಾಗೂ ಜಪಾನ್‌ನಲ್ಲಿದೆ.

Latest Videos
Follow Us:
Download App:
  • android
  • ios