ಟ್ವಿಟ್ಟರ್ ಮಾಡೊ ಅವಾಂತರ ಒಂದೇ, ಎರಡೇ?| ಚಿನಾರ್ ಕಾರ್ಪ್ಸ್ ಅಧಿಕೃತ ಖಾತೆ ಡಿಲೀಟ್ ಮಾಡಿದ್ದ ಟ್ವಿಟ್ಟರ್| ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಚಿನಾರ್ ಕಾರ್ಪ್ಸ್| ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಅಧಿಕೃತ ಖಾತೆ ಡೀಲಿಟ್ ಮಾಡಿದ್ದ ಟ್ವಿಟ್ಟರ್| ಟ್ವಿಟ್ಟರ್ ನಡೆ ಖಂಡಿಸಿದ್ದ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್| ಚಿನಾರ್ ಕಾರ್ಪ್ಸ್ ಖಾತೆ ರಿಸ್ಟೋರ್ ಮಾಡಿ ವಿವಾದಕ್ಕೆ ಇತಿಶ್ರೀ ಹಾಡಿದ ಟ್ವಿಟ್ಟರ್| 

ನವದೆಹಲಿ(ಜೂ.07): ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಸೇನೆಯ 15ನೇ ಡಿವಿಜನ್ ಚಿನಾರ್ ಕಾರ್ಪ್ಸ್‌ನ ಅಧಿಕೃತ ಖಾತೆಯನ್ನು ಟ್ವಿಟ್ಟರ್ ಡಿಲೀಟ್ ಮಾಡಿ ವಿವಾದ ಸೃಷ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಚಿನಾರ್ ಕಾರ್ಪ್ಸ್ ನ ಅಧಿಕೃತ ಖಾತೆಯನ್ನು ಡೀಲಿಟ್ ಮಾಡಿದ್ದ ಟ್ವಿಟ್ಟರ್ ಇದಕ್ಕೆ ಕಾರಣವನ್ನೂ ಕೂಡ ನೀಡಿರಲಿಲ್ಲ. ಆದರೆ ಟ್ವಿಟ್ಟರ್ ನಡೆಗೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾದ ಬಳಿಕ ಚಿನಾರ್ ಕಾರ್ಪ್ಸ್ ನ ಖಾತೆಯನ್ನು ಮತ್ತೆ ಟ್ವಿಟ್ಟರ್ ರಿಸ್ಟೋರ್ ಮಾಡಿದೆ.

ಟ್ವಿಟ್ಟರ್ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಟ್ವಿಟ್ಟರ್ ನ ಈ ನಡೆ ಒಪ್ಪತಕ್ಕದಲ್ಲ ಎಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದರು.

Scroll to load tweet…

ಇದೀಗ ಚಿನಾರ್ ಕಾರ್ಪ್ಸ್ ಅಧಿಕೃತ ಖಾತೆಯನ್ನು ರಿಸ್ಟೋರ್ ಮಾಡಿರುವ ಟ್ವಿಟ್ಟರ್, ವಿವಾದವನ್ನು ಸುಖಾಂತ್ಯಗೊಳಿಸಿದೆ.