ಮಾರುಕಟ್ಟೆ ಪ್ರವೇಶಿಸಿದೆ ಟಿವಿಎಸ್ ರೆಡಿಯೊನ್ ಬೈಕ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Aug 2018, 5:24 PM IST
TVS launched low budget bike Radeon 110
Highlights

ಟಿವಿಎಸ್ ಮೋಟಾರು ಸಂಸ್ಥೆ ಇದೀಗ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಬೈಕ್ ಮಾರುಕಟ್ಟೆಗೆ ಬಿಟ್ಟಿದೆ. ಟಿವಿಎಸ್ ನೂತನ ಬೈಕ್ ಅಕರ್ಷಕ ವಿನ್ಯಾಸ ಹಾಗೂ ತಂತ್ರಜ್ಞಾನ ಬೈಕ್ ಪ್ರೀಯರ ಮೋಡಿ ಮಾಡಲಿದೆ.

ಚೆನ್ನೈ(ಆ.23): ಟಿವಿಎಸ್ ಮೋಟಾರು ಸಂಸ್ಥೆ ನೂತನ ಬೈಕ್ ಬಿಡುಗಡೆ ಮಾಡಿದೆ. ಟಿವಿಎಸ್ ರೆಡಿಯೊನ್ ಬೈಕ್ ಇದೀಗ ಹೀರೋ ಮೋಟರ್ ಸೇರಿದಂತೆ ಕಡಿಮೆ ಬೆಲೆಯ ಬೈಕ್‌ಗಳಿಗೆ ಭಾರಿ ಪೈಪೋಟಿ ನೀಡಲಿದೆ.

ನೂತನ ಟಿವಿಎಸ್ ರೆಡಿಯೊನ್ ಬೈಕ್ ಬೆಲೆ 48,400 ರೂಪಾಯಿ ಮಾತ್ರ. 110 ಸಿಸಿ ಬೈಕ್ ಹೊಸ ವಿನ್ಯಾಸ, ಆಕರ್ಷ ಬಣ್ಣ ಹಾಗೂ ಹೊಸ ತಂತ್ರಜ್ಞಾನಗಳೊಂದಿಗೆ ಟಿವಿಎಸ್ ರೆಡಿಯೊನ್ ಬಿಡುಗಡೆಯಾಗಿದೆ.

ನೂತನ ಟಿವಿಎಸ್ ರೆಡಿಯೊನ್ ಬೈಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ 69.3 ಕೀಮಿ ಮೈಲೇಜ್ ನೀಡಲಿದೆ ಎಂದು ಸಂಸ್ಥೆ ಹೇಳಿದೆ.  4 ಸ್ಪೀಡ್ ಗೇರ್ ಬಾಕ್ಸ್,  8 ಬಿಹೆಚ್‌ಪಿ ಹಾಗೂ 9.7 ಎನಎಂ ಟಾರ್ಕ್ಯೂ ಉತ್ಪಾದಿಸಲಿದೆ. 

18 ಇಂಚು ಅಲೋಯ್ ವೀಲ್ಸ್, ಸಿಂಕ್ರೋನೈಸಡ್ ಬ್ರೇಕಿಂಗ್ ಟೆಕ್ನೋಲಜಿ, ಟ್ವಿನ್ ಶಾಕಾಬ್ಸರ್ ಹಾಗೂ ಟೆಲಿಸ್ಕೋಪಿಕ್ ಫೋರ್ಕ್ಸ್ ಹೊಂದಿರುವ ರೆಡಿಯೊನ್ ಬೈಕ್ ಪ್ರೀಯರನ್ನ ಮೋಡಿ ಮಾಡಲಿದೆ.

loader