ಜಿಯೋ ಸಿಮ್ ನೀಡುತ್ತಿರುವ ಈ ಸೇವೆಯನ್ನು ಪಡೆದುಕೊಳ್ಳಲು ಗ್ರಾಹಕರ ಬಳಿ 4ಜಿ ಮೊಬೈಲ್ ಇರಬೇಕಾಗಿತ್ತು. ಬಹುತೇಕ ಜನರು ಇನ್ನೂ 3ಜಿ ಮೊಬೈಲ್ ಬಳಸುತ್ತಿದ್ದು, ಜಿಯೋ ಸಿಮ್ ಇದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗದೆ ಪೆಚ್ಚು ಮೋರೆ ಹಾಕಿಕೊಂಡಿದ್ದಾರೆ. ಹಾಗಾದರೆ 3ಜಿ ಮೊಬೈಲ್ ಇದ್ದವರು ಜಿಯೋ ಬಳಸಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಇನ್ಮುಂದೆ 3ಜಿ ಫೋನ್ ಇರುವವರು ಜಿಯೋ ಬಳಸಲು ಸಾಧ್ಯವಿಲ್ಲ ಎಂದು ಚಿಂತೆ ಮಾಡುವುದು ಬೇಡ!. ಯಾಕೆಂದರೆ ಈಗ 3ಜಿ ಫೋನ್ ಇರುವವರು ಈ ಕೆಳಗೆ ನೀಡಿದ ಟ್ರಿಕ್ಸ್ ಬಳಿಸಿ ಜಿಯೋ ಸಿಮ್ ನಿಮ್ಮ ಫೋನ್'ನಲ್ಲಿ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು.
ಈಗ ಭಾರತದ ಯಾವ ಮೂಲೆಗೆ ಹೋದರೂ ಜಿಯೋದ್ದೇ ಸುದ್ದಿ, ಜಿಯೋ ಕುರಿತಾಗಿ ತಿಳಿಯದವರಿಲ್ಲ. ವೆಲ್ ಕಂ ಆಫರ್, ಫ್ರೀ ಇಂಟರ್'ನೆಟ್ ಸೌಲಭ್ಯ ಹಾಗೂ ಉಚಿತ ಕರೆ ಮಾಡುವ ಸೇವೆ ಕಲ್ಪಿಸಿ ಜಯೋ ಜನರ ಮನೆ ಮಾತಾಗಿತ್ತು. ಬಳಿಕ ತನ್ನ ಈ ಸೇವೆಯನ್ನು ಮಾರ್ಚ್ 31ರವರೆಗೆ ವಿಸ್ತರಿಸಿ ಬಳಕೆದಾರರ ಮುಖದಲ್ಲಿ ನಗು ಮೂಡಿಸಿತ್ತು.
ಆದರೆ ಜಿಯೋ ಸಿಮ್ ನೀಡುತ್ತಿರುವ ಈ ಸೇವೆಯನ್ನು ಪಡೆದುಕೊಳ್ಳಲು ಗ್ರಾಹಕರ ಬಳಿ 4ಜಿ ಮೊಬೈಲ್ ಇರಬೇಕಾಗಿತ್ತು. ಬಹುತೇಕ ಜನರು ಇನ್ನೂ 3ಜಿ ಮೊಬೈಲ್ ಬಳಸುತ್ತಿದ್ದು, ಜಿಯೋ ಸಿಮ್ ಇದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗದೆ ಪೆಚ್ಚು ಮೋರೆ ಹಾಕಿಕೊಂಡಿದ್ದಾರೆ. ಹಾಗಾದರೆ 3ಜಿ ಮೊಬೈಲ್ ಇದ್ದವರು ಜಿಯೋ ಬಳಸಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಇನ್ಮುಂದೆ 3ಜಿ ಫೋನ್ ಇರುವವರು ಜಿಯೋ ಬಳಸಲು ಸಾಧ್ಯವಿಲ್ಲ ಎಂದು ಚಿಂತೆ ಮಾಡುವುದು ಬೇಡ!. ಯಾಕೆಂದರೆ ಈಗ 3ಜಿ ಫೋನ್ ಇರುವವರು ಈ ಕೆಳಗೆ ನೀಡಿದ ಟ್ರಿಕ್ಸ್ ಬಳಿಸಿ ಜಿಯೋ ಸಿಮ್ ನಿಮ್ಮ ಫೋನ್'ನಲ್ಲಿ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು.
3ಜಿ ಫೋನ್'ಗೆ ಸಿಮ್ ಪಡೆದುಕೊಂಡು ಆ್ಯಕ್ಟಿವೇಟ್ ಮಾಡುವ ವಿಧಾನ:
1. ಎಲ್ಲಕ್ಕೂ ಮೊದಲು ನಿಮ್ಮ ಮೊಬೈಲ್'ನಿಂದ 1800-200-200-2 ನಂಬರ್'ಗೆ ಕರೆ ಮಾಡಿ
2. ಈ ನಂಬರ್'ಗೆ ಕರೆ ಮಾಡಿದ ಬಳಿಕ ನಿಮ್ಮ ಮೊಬೈಲ್'ಗೆ ಲಿಂಕ್ ಹೊಂದಿರುವ ಸಂದೇಶವೊಂದು ಬರುತ್ತದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಪ್ಲೇ ಸ್ಟೋರ್ ಆ್ಯಪ್'ಗೆ ರೀ ಡೈರೆಕ್ಟ್ ಆಗುತ್ತದೆ.
3. ಇಲ್ಲಿ ನೀವು 'ಮೈ ಜಿಯೋ ಆ್ಯಪ್' ಡೌನ್'ಲೋಡ್ ಮಾಡಿ ಮೊಬೈಲ್'ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.
4. ಈ ಆ್ಯಪ್ ಇನ್ಸ್ಟಾಲ್ ಆದ ಬಳಿಕ ಓಪನ್ ಮಾಡಿ 'ಗೆಟ್ ಜಿಯೋ ಸಿಮ್'(Get Jio Sim) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಳಿಕ 'ಅಗ್ರಿ'(agree) ಎಂಬ ಆಯ್ಕೆ ಒತ್ತಿ. ತದ ನಂತರ 'ಗೆಟ್ ಜಿಯೋ ಸಿಮ್ ಆಫರ್'(Get Jio Sim Offer) ಎಂಬುವುದನ್ನು ಕ್ಲಿಕ್ ಮಾಡಿ.
5. ಬಳಿಕ ನೀವು ನಿಮ್ಮ 'ಲೊಕೇಷನ್'(Location) ಸೆಟ್ ಮಾಡಿಕೊಂಡು, 'ನೆಕ್ಸ್ಟ್'(Next) ಎಂಬುವುದನ್ನು ಆಯ್ಕೆ ಮಾಡಿಕೊಳ್ಳಿ.
6. ಈ ಪ್ರಕ್ರಿಯೆಯ ಬಳಿಕ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಒಂದು ಕೋಟ್ ಕಾಣಿಸಿಕೊಳ್ಳುತ್ತದೆ. ಈ ಆಫರ್ ಕೋಡ್'ನ್ನು ಬರೆದಿಟ್ಟುಕೊಳ್ಳಿ.
ಆಫರ್ ಕೋಡ್ ಪಡೆದ ಬಳಿಕ ಏನು ಮಾಡಬೇಕು? 3ಜಿ ಫೋನ್'ನಲ್ಲಿ, 4ಜಿ ಬಳಸುವುದು ಹೇಗೆ?
3ಜಿ ಫೋನ್'ನಲ್ಲಿ ಜಿಯೋ ಸಿಮ್ ಬಳಸುವುದಕ್ಕೂ ಮೊದಲು ಇದನ್ನು ಆ್ಯಕ್ಟಿವೇಟ್ ಮಾಡಿಕೊಳ್ಳುವುದು ಅತ್ಯವಶ್ಯಕ. ನಿಮ್ಮ ಸಿಮ್ ಆ್ಯಕ್ಟಿವೇಟ್ ಆಗಿಲ್ಲವೆಂದಾದರೆ ';ಜಿಯೋ ಸಿಮ್' ಆ್ಯಕ್ಟಿವೇಟ್ ಮಾಡುವ ವಿಧಾನ ಹಾಗೂ ಕನ್ಫರ್ಮೇಷನ್ ಮಾಹಿತಿ ವಿಧಾನವನ್ನು ಓದಿಕೊಳ್ಳಿ. ಈ-KYC ಸೇವೆ ಮೂಲಕವೂ ನೀವು ಜಿಯೋ ಸಿಮ್'ನ್ನು ಕೆಲವೇ ಗಂಟೆಗಳಲ್ಲಿ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು.
ಒಂದು ಬಾರಿ ನಿಮ್ಮ ಜಿಯೋ ಸಿಮ್ ಆ್ಯಕ್ಟಿವೇಟ್ ಮಾಡಿಕೊಂಡ ಬಳಿಕ ನಿಮ್ಮ 3ಜಿ ಮೊಬೈಲ್'ನಲ್ಲಿ 4ಜಿ ಸಿಮ್ ಉಪಯೋಗಿಸಲು ಈ ಕ್ರಮಗಳನ್ನು ನೀವು ಅನುಸರಿಸಬಹುದು. ಆದರೆ ಈ ವಿಧಾನ ಪ್ರತಿಯೊಂದು 3ಜಿ ಫೋನ್'ಗಳಿಗೆ ಅನ್ವಯಿಸುವುದಿಲ್ಲ. ಒಂದು ವೇಳೆ ಈ ಕೆಳಗೆ ನೀಡಿದ ವಿಧಾನ ಬಳಸಿಯೂ ನಿಮ್ಮ ಫೋನ್'ನಲ್ಲಿ ಜಿಯೋ ಕಾರ್ಯ ನಿರ್ವಹಿಸುತ್ತಿಲ್ಲವೆಂದಾದಲ್ಲಿ ನೀವು ಹೊಸ Volte ನ ಮೊಬೈಲ್ ಖರೀದಿಸಬೇಕಾಗುತ್ತದೆ.
ಮೊದಲ ವಿಧಾನ: MTK Engineering App
1. ಫ್ಲೇ ಸ್ಟೋರ್'ನಲ್ಲಿ ಲಭ್ಯವಿರುವ MTK Engineering App ನ್ನು ಡೌನ್'ಲೋಡ್ ಮಾಡಿಕೊಳ್ಳಿ.
2. ಬಳಿಕ ಇದನ್ನು ಓಪನ್ ಮಾಡಿ ನಿಮ್ಮ ಮೊಬೈಲ್'ನ ಕೋಡ್ ನಮೂದಿಸಿ.
3. ಬಳಿಕ MTK ಸೆಟ್ಟಿಂಗ್ಸ್ ಓಪನ್ ಮಾಡಿ, Preffered Network select ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ನೆಟ್ವರ್ಕ್ ಮೋಡ್ LTE , WCDMA ಇಲ್ಲವೇ GSM ಮೋಡ್ ಆಯ್ಕೆ ಮಾಡಿ ಸೆಟ್ಟಿಂಗ್'ನ್ನು ಸೇವ್ ಮಾಡಿ.
5. ಇದಾದ ಬಳಿಕ ಕೊನೆಯದಾಗಿ ನಿಮ್ಮ ಮೊಬೈಲ್'ನ್ನು ರೀಸ್ಟಾರ್ಟ್ ಮಾಡಿಕೊಳ್ಳಿ.
ಇದನ್ನು ಅನುಸರಿಸುವುದರಿಂದ ನೀವು 4ಜಿ ಸಿಮ್ ಬಳಸಬಹುದಾಗಿದೆ.
ಎರಡನೇ ವಿಧಾನ: Xorware 2G/3g/4g App
1. ಮೊದಲ ಹಂತವಾಗಿ ನೀವು ಇಲ್ಲಿ ನೀಡಿದ ಆ್ಯಪ್ ಲಿಂಕ್ ಕ್ಲಿಕ್ ಮಾಡಿ ಡೌನ್'ಲೋಡ್ ಮಾಡಿಕೊಳ್ಳಿ. ಮೊದಲ ಲಿಂಕ್ ಡೌನ್'ಲೋಡ್ ಮಾಡಲು ಸಾಧ್ಯವಿಲ್ಲವೆಂದಾದಲ್ಲಿ ಎರಡನೇ ಲಿಂಕ್ ಮಾಡಲು ಪ್ರಯತ್ನಿಸಿ.
https://play.google.com/store/apps/details?id=com.xorware.network.s2g3g.xposed.switcher&pageId=111263776649969870001
https://play.google.com/store/apps/details?id=com.xorware.network.s2g3g.settings&pageId=111263776649969870001
2. ಈ ಮೇಲಿನ ಯಾವುದಾದರೂ ಲಿಂಕ್'ನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಬಳಿಕ Network Mode Selection ಲ್ಲಿ 4ಜಿ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿ.
3. ಈ ಸೆಟ್ಟಿಂಗ್ಸ್'ನ್ನು ಸೇವ್ ಮಾಡಿಕೊಂಡ ಬಳಿಕ ಮೊಬೈಲ್'ನ್ನು ರೀಬೂಟ್ ಮಾಡಿ 10 ನಿಮಿಷ ಕಾಯಿರಿ.
4. ಬಳಿಕ ನಿಮ್ಮ ಫೋನ್'ಗೆ ಜಿಯೋ ಸಿಮ್ ಅಳವಡಿಸಿ 10-20 ನಿಮಿಷ ಕಾಯಿರಿ. ಬಳಿಕ ನಿಮ್ಮ ಫೋನ್'ನಿಂದ ಜಿಯೋ ಬಳಸಬಹುದಾಗಿದೆ.
ಈ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ 3ಜಿ ಫೋನ್'ನಲ್ಲಿ ಕೇವಲ ಜಿಯೋ ಡೇಟಾವನ್ನಷ್ಟೇ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ಕರೆಯನ್ನಲ್ಲ. ಉಚಿತ ಕರೆಯ ಸೇವೆಯನ್ನು ಪಡೆದುಕೊಳ್ಳಲು Jio 4G Voice Appಡೌನ್'ಲೋಡ್ ಮಾಡಿಕೊಂಡು ಪ್ರಯತ್ನಿಸಬಹುದು.
ಕೃಪೆ: ಲೈವ್ ಇಂಡಿಯಾ
