ಪ್ರಯಾಣ ಸುಲಭಗೊಳಿಸುವ ಟ್ರಾವೆಲ್ ಯಾರಿ ಆ್ಯಪ್

First Published 2, Mar 2018, 3:56 PM IST
Travelyaari offers cashless ticket food bookings for bus travellers
Highlights

ಬಸ್ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಚಟುವಟಿಕಗೆಳನ್ನು ಈ ಆಪ್‌ನ ಮೂಲಕ ನಿಯಂತ್ರಿಸಬಹುದಾಗಿದ್ದು, ಹಣಪಾವತಿ ಮತ್ತು ಬಿಲ್ಲಿಂಗ್ ಕುರಿತ ಮಾಹಿತಿಗಳನ್ನೂ ತಿಳಿಯಬಹುದಾಗಿದೆ.

ಬಸ್ ಸಾರಿಗೆ ಉದ್ಯಮದಲ್ಲಿ ಭಾರತದಲ್ಲಿ ಮಂಚೂಣಿಯಲ್ಲಿರುವ ಟ್ರಾವೆಲ್‌ಯಾರಿ ಈಗ ರಿಯಲ್ ಟೈಮ್ ಟಿಕೆಟ್ ಬುಕಿಂಗ್ ಮತ್ತು ಜಿಪಿಎಸ್ ಟ್ರಾಕಿಂಗ್ ಸೌಲಭ್ಯಗಳುಳ್ಳ ಮವೆನ್ ಆಪ್ ಬಿಡುಗಡೆ ಮಾಡಿದೆ. ಪ್ರಯಾಣದ ಕೊನೆಯ ಘಳಿಗೆಯಲ್ಲಿ ಬುಕ್ ಮಾಡಿದ ಮತ್ತು ಕ್ಯಾನ್ಸಲ್ ಮಾಡಿದ ಟಿಕೆಟ್‌ಗಳ ಮಾಹಿತಿಯನ್ನೂ ಈ ಆಪ್‌ನ ಮೂಲಕ ಪಡೆಯಬಹುದಾಗಿದೆ.

ಬಸ್ ಕಂಡಕ್ಟರ್‌ಗಳು ಅಂದಂದಿನ ಪ್ರಯಾಣಿಕರ ಪಟ್ಟಿಯನ್ನು ಆಪ್ ಮೂಲಕವೇ ಪಡೆಯ ಬಹುದಾಗಿದೆ. ಬಸ್ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಚಟುವಟಿಕಗೆಳನ್ನು ಈ ಆಪ್‌ನ ಮೂಲಕ ನಿಯಂತ್ರಿಸಬಹುದಾಗಿದ್ದು, ಹಣಪಾವತಿ ಮತ್ತು ಬಿಲ್ಲಿಂಗ್ ಕುರಿತ ಮಾಹಿತಿಗಳನ್ನೂ ತಿಳಿಯಬಹುದಾಗಿದೆ. ಇದರ ಜೊತೆಗೆ ಸರಕು ಸಾಗಣೆ ಮಾಹಿತಿಯನ್ನೂ ಈ ಆಪ್ ಒದಗಿಸಲಿದೆ. ನಾವು ಕಳುಹಿಸಿದ ಲಗೇಜ್ ಸೂಕ್ತ ಸಮಯಕ್ಕೆ ಸೂಕ್ತ ಸ್ಥಳವನ್ನು ತಲುಪಿದೆಯೇ ಎನ್ನುವುದನ್ನು ತಿಳಿಯಲು ಸಹಾಯವಾಗುತ್ತದೆ.

loader