ಬೆಂಗಳೂರು(ಆ.09): ಭಾರತದಲ್ಲಿ ಕಾರು ಮಾರಾಟ ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿದೆ. ಕಳೆದ ಜುಲೈ ತಿಂಗಳಿನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಮೊದಲ ಸ್ಥಾನ ಅಲಂಕರಿಸಿದೆ. ಮಾರುತಿ ಸುಜುಕಿ ಸಂಸ್ಥೆಯ 6 ಕಾರುಗಳು ಮಾರಾಟದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಜುಲೈನಲ್ಲಿ ಗರಿಷ್ಠ ಮಾರಾಟವಾದದ ಕಾರುಗಳ ಪೈಕಿ ಮಾರುತಿ ಸುಜುಕಿ ಡಿಸೈರ್ ಮೊದಲ ಸ್ಥಾನದಲ್ಲಿದೆ. ಜುಲೈ ತಿಂಗಳಲ್ಲಿ ಡಿಸೈರ್ ಕಾರು 25647 ಕಾರುಗಳು ಮಾರಾಟವಾಗಿದೆ. ಇನ್ನು 2ನೇ ಸ್ಥಾನವನ್ನ ಮಾರುತಿ ಸುಜುಕಿ ಆಲ್ಟೋ ಅಲಂಕರಿಸಿದೆ. ಆಲ್ಟೋ 23371 ಕಾರುಗಳು ಮಾರಾಟವಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್, ಮಾರುತಿ ಬಲೆನೋ, ಮಾರುತಿ ವ್ಯಾಗ್ನರ್, ಮಾರುತಿ ವಿಟಾರ ಬ್ರೀಜಾ ನಂತರದ ಸ್ಥಾನ ಅಲಂಕರಿಸಿದೆ. ಈ ಮೂಲಕ ಆರಂಭಿಕ  6 ಸ್ಥಾನಗಲ್ಲಿ ಮಾರುತಿ ಸುಜುಕಿ ಕಾರುಗಳು ವಿರಾಜಮಾನವಾಗಿದೆ. 7ನೇ ಸ್ಥಾನವನ್ನ ಹ್ಯುಂಡೈ ಎಲೈಟ್ ಐ20 ಪಡೆದಿದೆ.

ಜುಲೈನಲ್ಲಿ ಗರಿಷ್ಠ ಮಾರಾಟವಾದ ಕಾರು

ಮಾರುತಿ ಡಿಸೈರ್ 25647
ಮಾರುತಿ ಅಲ್ಟೋ 23371
ಮಾರುತಿ ಸ್ಪಿಫ್ಟ್ 19993
ಮಾರುತಿ ಬಲೆನೋ 17960
ಮಾರುತಿ ವ್ಯಾಗ್ನರ್ 14339
ಮಾರುತಿ ವಿಟಾರ ಬ್ರೀಜಾ 14181
ಹ್ಯುಂಡೈ ಎಲೈಟ್ ಐ20 10822
ಹ್ಯುಂಡೈ ಗ್ರ್ಯಾಂಡ್ ಐ10 10775
ಹ್ಯುಂಡೈ ಕ್ರೆಟಾ 10423
ಹೊಂಡಾ ಅಮೇಜ್ 10180