ಭಾರತದಲ್ಲಿ ಜನಪ್ರೀಯವಾಗಿರೋ ಬೈಕ್ ಅಥವೂ ಸ್ಕೂಟರ್ ಯಾವುದು?ಅತೀ ಹೆಚ್ಚು ಜನರು ಆಯ್ಕೆ ಮಾಡೋ ಬೈಕ್ ಯಾವುದು ? ಈ ಕುತೂಹಲಗಳಿಗೆ ಇಲ್ಲಿದೆ ಉತ್ತರ. ಕಳೆದ ಜೂನ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಬೈಕ್ ವಿವರ ಇಲ್ಲಿದೆ.

ಬೆಂಗಳೂರು(ಜು.23): ಭಾರತದ ಬೈಕ್ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ಇದೆ. ಈ ಪೈಪೋಟಿಯಲ್ಲಿ ಮಾರಾಟದಲ್ಲಿ ಅಗ್ರಸ್ಥಾನ ಪಡೆದುಕೊಳ್ಳಲು ಅಷ್ಟೇ ಕಸರತ್ತು ಕೂಡ ನಡೆಯುತ್ತದೆ. 2018ರ ಜೂನ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಬೈಕ್‌ಗಳ ಪೈಕಿ ಹೊಂಡಾ ಆಕ್ಟೀವಾ ಮೊದಲ ಸ್ಥಾನ ಪಡೆದುಕೊಂಡಿದೆ.

ಕಳೆದ ಎರಡು ವರ್ಷಗಳಿಂದ ಗರಿಷ್ಠ ಮಾರಾಟ ಮೋಟರ್‌ಸೈಕಲ್ ಪೈಕಿ ಹೊಂಡಾ ಆಕ್ಟೀವಾ ಮೊದಲ ಸ್ಥಾನದಲ್ಲಿದೆ. ಆದರೆ ಮೇ ತಿಂಗಳಲ್ಲಿ ಆಕ್ಟೀವಾ ಸ್ಕೂಟರ್ ಕೆಳಮುಖವಾಗಿತ್ತು. ಆದರೆ ಇದೀಗ ಮತ್ತೆ ಹೊಂಡಾ ಆಕ್ಟೀವಾ ಮೊದಲ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಜೂನ್ ತಿಂಗಳಲ್ಲಿ ಹೊಂಡಾ ಆಕ್ಟೀವಾ ಓಟ್ಟು 2.92 ಲಕ್ಷ ಸ್ಕೂಟರ್ ಭಾರತದಲ್ಲಿ ಮಾರಾಟವಾಗಿದೆ. ಇನ್ನು 2ನೇ ಸ್ಥಾನವನ್ನ ಹೀರೋ ಸ್ಪ್ಲೆಂಡರ್ ಬೈಕ್ ಅಲಂಕರಿಸಿದೆ. ಕಳೆದ ಜೂನ್ ತಿಂಗಳಲ್ಲಿ ಹೀರೋ ಸ್ಪ್ಲೆಂಡರ್ 2.78 ಲಕ್ಷ ಬೈಕ್ ಮಾರಾಟವಾಗಿದೆ.

ಜೂನ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಬೈಕ್:

ಹೊಂಡಾ ಆಕ್ವೀವಾ292294
ಹೀರೋ ಸ್ಪ್ಲೆಂಡರ್278169
ಹೀರೋ HF ಡಿಲಕ್ಸ್182883
ಹೀರೋ ಪ್ಯಾಶನ್97715
ಹೊಂಡಾ ಸಿಬಿ ಶೈನ್96505