ಪ್ರತೀ ವಾಟ್ಸಾಪ್ ಬಳಕೆದಾರರು ತಿಳಿದುಕೊಳ್ಳಲೇಬೇಕಾದ ಸೀಕ್ರೇಟ್ಸ್’ಗಳಿವು..!

technology | 3/12/2018 | 8:37:00 AM
sujatha A
Suvarna Web Desk
Highlights

ದಿನದಿನಕ್ಕೂ ಯೂಸರ್ ಫ್ರೆಂಡ್ಲಿ ಆಗುತ್ತಿರುವ ವಾಟ್ಸಾಪ್  ಹೊಸ ಹೊಸ ಫೀಚರ್’ಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಅದು ಪ್ರಮುಖವಾಗಿ ತನ್ನ ಬಳಕೆದಾರರಿಗೆ ನೀಡಿರುವಂತಹ ಆಪ್ಶನ್’ಗಳು ಜನರಲ್ಲಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

ನವದೆಹಲಿ : ದಿನದಿನಕ್ಕೂ ಯೂಸರ್ ಫ್ರೆಂಡ್ಲಿ ಆಗುತ್ತಿರುವ ವಾಟ್ಸಾಪ್  ಹೊಸ ಹೊಸ ಫೀಚರ್’ಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಅದು ಪ್ರಮುಖವಾಗಿ ತನ್ನ ಬಳಕೆದಾರರಿಗೆ ನೀಡಿರುವಂತಹ ಆಪ್ಶನ್’ಗಳು ಜನರಲ್ಲಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಅಲ್ಲದೇ ದಿನದಿನಕ್ಕೆ ವಾಟ್ಸಾಪ್ ಬಳಕೆದಾರರ ಸಂಖ್ಯೆಯಲ್ಲಿಯೂ ಕೂಡ ಏರಿಕೆ ಕಂಡು ಬರುತ್ತಿದೆ. ಸದ್ಯ 1.5 ಬಿಲಿಯನ್ ವಾಟ್ಸಾಪ್ ಸಕ್ರೀಯ ಬಳಕೆದಾರರಿದ್ದಾರೆ ಎಂದು ಘೋಷಣೆ ಮಾಡಿದೆ.

ಮಿಲಿಯನ್ ಗಟ್ಟಲೆ ಡಿವೈಸ್’ಗಳಲ್ಲಿ ವಾಡ್ಸಾಪ್ ಇನ್’ಸ್ಟಾಲ್ ಆಗುತ್ತಿದೆ. ಪ್ರತೀ ದಿನ 60 ಬಿಲಿಯನ್’ಗೂ ಅಧಿಕ ಮೆಸೇಜ್’ಗಳು ವಾಟ್ಸಾಪ್ ಮೂಲಕ ಸೆಂಡ್ ಆಗುತ್ತಿವೆ. ಹೊಸ ವರ್ಷದಂದು ಒಂದೇ ದಿನ 75 ಬಿಲಿಯನ್ ಮೆಸೇಜ್ ಸೆಂಡ್ ಆಗಿದ್ದಾಗಿ ವಾಟ್ಸಾಪ್ ಹೇಳಿಕೊಂಡಿದೆ.

ಇದೀಗ ವಾಟ್ಸಾಪ್ ಬಳಕೆದಾರರು ತಿಳಿದುಕೊಂಡಿರಲೇಬೇಕಾದ 5 ಸೀಕ್ರೇಟ್’ಗಳ ಬಗ್ಗೆ ತಿಳಿಯೋಣ

*ನಿಮಗೆ ಗೊತ್ತಾ ,  ವಾಟ್ಸಾಪ್’ನಲ್ಲಿ ನೀವು ಯೂ ಟ್ಯೂಬ್ ವಿಡಿಯೋಗಳನ್ನು ನೋಡಬಹುದು.

*ವಿಡಿಯೋ ಹಾಗೂ ಫೊಟೊಗಳ ಮೇಲೆ ಸ್ಟಿಕರ್’ಗಳನ್ನು ಹಾಕಬಹುದು

*ಸ್ನೇಹಿತರಿಗೆ ವಾಟ್ಸಾಪ್ ಮೂಲಕ ಹಣವನ್ನು ಕಳುಹಿಸಬಹುದು

*ನೀವು ಕಳಿಸಿದ ಮೆಸೇಜ್’ಗಳನ್ನು ಡಿಲೀಟ್ ಮಾಡಲೂ ಬಹುದು

*ನೀವು ಯಾವಾಗ  ಕೊನೆಯ ಬಾರಿ ನೋಡಿದ್ದೀರಿ ಎನ್ನುವುದನ್ನು ಹೈಡ್ ಮಾಡಬಹುದು.

Comments 0
Add Comment