ರಷ್ಯಾ ಸ್ಟಾರ್ಟಪ್ ಕಂಪನಿಗಳು ಇದೀಗ ಹೊಸದಾದ ರೊಬೋಟ್ ಒಂದನ್ನು ತಯಾರು ಮಾಡಿವೆ.

ರಷ್ಯಾ : ರಷ್ಯಾ ಸ್ಟಾರ್ಟಪ್ ಕಂಪನಿಗಳು ಇದೀಗ ಹೊಸದಾದ ರೊಬೋಟ್ ಒಂದನ್ನು ತಯಾರು ಮಾಡಿವೆ. ಇದು ಅನೇಕ ಉದ್ಯೋಗಗಳನ್ನು ನಿರ್ವಹಣೆ ಮಾಡುವ ಕೌಶಲ್ಯವನ್ನು ಹೊಂದಿರುವ ರೀತಿಯಲ್ಲಿ ಇದನ್ನು ತಯಾರು ಮಾಡಲಾಗಿದೆ. ಇದಕ್ಕೆ ವೆರಾ ಎಂದು ಹೆಸರನ್ನು ಇಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ರೋಬೋಟ್’ಗೆ ಕೃತಕ ಬುದ್ದಿಮತ್ತೆಯ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಅನೇಕ ರೀತಿಯ ಉದ್ಯೋಗದ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯವು ಈ ರೋಬೋಟ್’ಗೆ ಇದೆ. ವೆರಾ ರೋಬೋಟ್’ನ್ನು ಸೇಂಟ್ ಪೀಟರ್ಸ್ ಬರ್ಗ್ ಮೂಲದ ಸ್ಟಾರ್ಟಪ್ ಕಂಪನಿಯು ತಯಾರು ಮಾಡಿದೆ.