ಭಾರತೀಯ ಸಂಶೋಧಕರನ್ನು ಒಳಗೊಂಡ ವಾಷಿಂಗ್ಟನ್ ವಿಶ್ವವಿದ್ಯಾಲಯದ ವಿಜ್ಞಾನಗಳ ತಂಡ ಈ ನೂತನ ಸ್ಮಾರ್ಟ್‌ ಫೋನ್ ಅನ್ನು ಅಭಿವೃದ್ಧಿಪಡಿಸಿದೆ.
ವಾಷಿಂಗ್ಟನ್(ಜು.08): ಸ್ಮಾರ್ಟ್ ಫೋನ್ಗಳಲ್ಲಿ ಬ್ಯಾಟರಿಗಳು ಹೆಚ್ಚು ಹೊತ್ತು ಬಾಳಿಕೆ ಬರುವುದೇ ಇಲ್ಲ. ಹೀಗಾಗಿ ಆಗಾಗ ಚಾರ್ಚ್ ಮಾಡಬೇಕಾಗುತ್ತದೆ. ಆದರೆ, ಇನ್ನು ಆ ಸಮಸ್ಯೆಗೆ ಪೂರ್ಣ ವಿರಾಮ ಬೀಳಲಿದೆ. ಏಕೆಂದರೆ ವಿಜ್ಞಾನಿಗಳು ಬ್ಯಾಟರಿ ರಹಿತ ಸ್ಮಾರ್ಟ್ ಫೋನ್ವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ.
ಈ ಸ್ಮಾರ್ಟ್ ಫೋನ್ ರೇಡಿಯೋ ಸಿಗ್ನಲ್ಗಳು ಅಥವಾ ಸೂರ್ಯಶಕ್ತಿಯನ್ನು ಬಳಕೆ ಮಾಡಿಕೊಂಡು ಬಹತೇಕ ಶೂನ್ಯ ವಿದ್ಯುತ್ ಶಕ್ತಿಯ ಮೂಲಕ ಕಾರ್ಯನಿರ್ವಹಿಸಲಿದೆ. ಭಾರತೀಯ ಸಂಶೋಧಕರನ್ನು ಒಳಗೊಂಡ ವಾಷಿಂಗ್ಟನ್ ವಿಶ್ವವಿದ್ಯಾಲಯದ ವಿಜ್ಞಾನಗಳ ತಂಡ ಈ ನೂತನ ಸ್ಮಾರ್ಟ್ ಫೋನ್ ಅನ್ನು ಅಭಿವೃದ್ಧಿಪಡಿಸಿದೆ.
ಬ್ಯಾಟರಿ ರಹಿತ ಮೊಬೈಲ್ ಬಳಸಿಕೊಂಡು ಸ್ಕೈಪಿ ಕರೆಗಳನ್ನು ವಿಜ್ಞಾನಿಗಳು ಮಾಡಿದ್ದಾರೆ. ಮೊಬೈಲ್ಗಳಲ್ಲಿ ಹೆಚ್ಚು ವಿದ್ಯುತ್ ಶಕ್ತಿ ಬಳಕೆಗೆ ಕಾರಣವಾಗುತ್ತಿದ್ದ ಆಧುನಿಕ ಸೆಲ್ಯುಲರ್ ಟ್ರಾನ್ಸ್ಮಿಷನ್ಗಳನ್ನು ವಿಜ್ಞಾನಿಗಳು ತೆಗೆದುಹಾಕಿದ್ದಾರೆ. ಅದರ ಬದಲು ಪರ್ಯಾಯ ವಿಧಾನಗಳನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಕಡಿಮೆ ಶಕ್ತಿಯಿಂದಲೇ ಫೋನ್ ಕಾರ್ಯನಿರ್ವಹಿಸಲಿದೆ.
