ಈ ಕಾರಿನ ಬೆಲೆ 211 ಕೋಟಿ-ಇದು ವಿಶ್ವದ ಅತ್ಯಂತ ದುಬಾರಿ ಕಾರು!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 24, Jul 2018, 6:13 PM IST
This One-Off Pagani Zonda HP Barchetta Is The World's Most Expensive Car
Highlights

ವಿಶ್ವದ ಅತ್ಯಂತ ದುಬಾರಿ ಕಾರಿನ ಬೆಲೆ ಬರೋಬ್ಬರಿ 211 ಕೋಟಿ. ಇಟಲಿ ಮೂಲದ ಈ ಕಾರಿನ ವಿಶೇಷತೆ ಏನು? ಇತರ ಲಕ್ಸುರಿ ಕಾರುಗಳಿಗೂ ಈ ಕಾರಿಗೂ ಇರೋ ವತ್ಯಾಸವೇನು? ಇಲ್ಲಿದೆ ವಿವರ.

ಇಟಲಿ(ಜು.24): ಕೋಟಿ ಕೋಟಿ ರೂಪಾಯಿ ಕಾರುಗಳು ಭಾರತೀಯರಿಗೆ ಹೊಸದೇನಲ್ಲ. ಭಾರತದಲ್ಲಿ ಕೋಟಿ ರೂಪಾಯಿಗಳ ಹಲವವು ಕಾರುಗಳಿವೆ. ಆದರೆ ನಾವೀಗ ಹೇಳ್ತಿರೋ ಕಾರಿನ ಬೆಲೆ ಬರೋಬ್ಬರಿ 211 ಕೋಟಿ ರೂಪಾಯಿ. 

ಇಟಲಿ ಮೂಲದ ಪಗಾನಿ ಜೊಂಡಾ ಕಾರು ಕಂಪೆನಿಯ ಈ ಕಾರು ವಿಶ್ವದ ಅತ್ಯಂತ ದುಬಾರಿ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಗಾನಿ ಜೊಂಡಾ ಹೆಚ್‌ಪಿ ಬರ್ಚೆಟ್ಟಾ ಕಾರು ದುಬಾರಿ ಕಾರಿನ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಪಗಾನಿ ಜೊಂಡಾ ಕಾರು ಸಂಸ್ಥೆಯ ಸಂಸ್ಥಾಪಕ ಹೊರ್ಯಾಸಿಯೋ ಪಗಾನಿಯ 60ನೇ ವರ್ಷದ ಹುಟ್ಟುಹಬ್ಬ ಹಾಗೂ ಸಂಸ್ಥೆ 18ನೇ ವರ್ಷಾಚರಣೆಗಾಗಿ ಈ ದುಬಾರಿ ಕಾರನ್ನ ತಯಾರಿಸಲಾಗಿದೆ. 2017ರಲ್ಲಿ ಬಿಡುಗಡೆಯಾದ ಪಗಾನಿ ಜೊಂಡಾ ಹೆಚ್‌ಪಿ ಬರ್ಚೆಟ್ಟಾ ಕಾರು ಬೆಲೆಯಲ್ಲಿ ಇತರ ದಾಖಲೆಗಳನ್ನ ಪುಡಿಗಟ್ಟಿದೆ.

ಪಗಾನಿ ಜೊಂಡಾ ಹೆಚ್‌ಪಿ ಬರ್ಚೆಟ್ಟಾ ಕಾರು AMG V12 ಇಂಜಿನ್, 789 ಬಿಹೆಚ್‌ಪಿ ಪವರ್ ಹೊಂದಿದೆ. 6 ಸ್ವೀಡ್ ಗೇರ್ ಹೊಂದಿದೆ. ಈ ಕಾರಿನ ಗರಿಷ್ಠ ವೇಗ 338 ಕೀಮಿ ಪ್ರತಿ ಗಂಟೆಗೆ. ವಿಶೇಷ ಅಂದರೆ ಕೇವಲ 3 ಕಾರುಗಳನ್ನ ಕಂಪೆನಿ ತಯಾರಿಸಿದೆ. ಇದರಲ್ಲಿ ಒಂದು ಸಂಸ್ಥಾಪಕ ಹೊರ್ಯಾಸಿಯೋ ಪಗಾನಿ ಅವರೇ ಇಟ್ಟುಕೊಂಡಿದ್ದಾರೆ. ಇನ್ನೆರಡು ಕಾರು ಈಗಾಗಲೇ ಮಾರಾಟ ವಾಗಿದೆ.

loader