ಕಾರು, ಬೈಕ್‌ ದರ ಏರಿಕೆ : ಕಾರಣವೇನು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Aug 2018, 2:07 PM IST
Third Party Insurance Rates To Rise Cars And Bikes
Highlights

  ಕಾರು ಮತ್ತು ದ್ವಿಚಕ್ರ ವಾಹನಗಳ ಖರೀದಿದಾರರಿಗೆ 3ನೇ ವ್ಯಕ್ತಿಗೆ ವಿಮೆ ಸೌಲಭ್ಯ ನೀಡಬೇಕೆಂಬ ಕಡ್ಡಾಯ ನಿಯಮ ಮಾಡಿದ್ದರಿಂದ ಸೆಪ್ಟೆಂಬರ್ 1 ರಿಂದ ಇವುಗಳು ದುಬಾರಿಯಾಗಲಿವೆ. 

ನವದೆಹಲಿ: ಕಾರು ಮತ್ತು ದ್ವಿಚಕ್ರ ವಾಹನಗಳ ಖರೀದಿದಾರರಿಗೆ 3ನೇ ವ್ಯಕ್ತಿಗೆ ವಿಮೆ (ಥರ್ಡ್‌ ಪಾರ್ಟಿ ಇನ್ಷೂರನ್ಸ್‌) ಸೌಲಭ್ಯ ನೀಡಬೇಕೆಂಬ ಕಡ್ಡಾಯ ನಿಯಮ ಸೆ.1ರಿಂದಲೇ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಶನಿವಾರದಿಂದಲೇ ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಬೆಲೆ ದುಬಾರಿಯಾಗಲಿವೆ.

ಇದರ ಪ್ರಕಾರ 1000 ಸಿಸಿಗಿಂತ ಕಡಿಮೆ ಇಂಜಿನ್‌ ಹೊಂದಿರುವ ಕಾರುಗಳ ಖರೀದಿಗೆ ಮೂರನೇ ವ್ಯಕ್ತಿಯ 3 ವರ್ಷಗಳ ವಿಮಾ ಸೌಲಭ್ಯಕ್ಕೆ 5286 ರು. ತಗುಲಲಿದೆ. 1000-1500 ಸಿಸಿ ಇಂಜಿನ್‌ ಸಾಮರ್ಥ್ಯದ ವಾಹನಗಳಿಗೆ 9534 ರು., 1500ಕ್ಕಿಂತ ಹೆಚ್ಚುವರಿ ಇಂಜಿನ್‌ ಸಾಮರ್ಥ್ಯದ ವಾಹನಗಳಿಗೆ 24,305 ರು. ಆಗಲಿದೆ.

ಇದೇ ರೀತಿ 75 ಸಿಸಿ ಇಂಜಿನ್‌ ಸಾಮರ್ಥ್ಯ ದ್ವಿಚಕ್ರ ವಾಹನಗಳ 3ನೇ ವ್ಯಕ್ತಿಯ 5 ವರ್ಷಗಳ ವಿಮೆಗಾಗಿ 1045 ರು., 75-150 ಸಿಸಿಯ ಬೈಕ್‌ಗಳ ಖರೀದಿಗೆ ಹೆಚ್ಚುವರಿ 3285, 150-350 ಸಿಸಿ ಇಂಜಿನ್‌ ಸಾಮರ್ಥ್ಯದ ಬೈಕ್‌ಗೆ 5453 ರು. ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿ ಬೈಕ್‌ಗಳಿಗೆ 13,034 ರು. ಪಾವತಿಸಬೇಕಿದೆ.

ನೂತನವಾಗಿ ಖರೀದಿಸಲಾಗುವ ಕಾರುಗಳಿಗೆ 3 ವರ್ಷದ 3ನೇ ವ್ಯಕ್ತಿಯ ವಿಮೆ ಹಾಗೂ ಬೈಕ್‌ಗಳ ಖರೀದಿಗೆ 5 ವರ್ಷದ 3ನೇ ವ್ಯಕ್ತಿಯ ವಿಮೆ ಸೌಲಭ್ಯವನ್ನು ವಿಮಾ ಕಂಪನಿಗಳು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

loader