ಕಿಯಾ ಎಲೆಕ್ಟ್ರಿಕಲ್ ಕಾರು-ಒಂದು ಬಾರಿ ಚಾರ್ಜ್‌ಗೆ 481 ಕಿ.ಮೀ ಪ್ರಯಾಣ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Oct 2018, 12:37 PM IST
The Kia e-Niro electric SUV has a 481km range
Highlights

ಎಲೆಕ್ಟ್ರಿಕಲ್ ಕಾರು ಉತ್ವಾದನೆಗೆ ಹೆಚ್ಚಿನ ಒತ್ತು ಸಿಗುತ್ತಿದ್ದಂತೆ, ಇದೀಗ ಪೈಪೋಟಿ ಶುರುವಾಗಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕಲ್ ಕಾರಿಗೆ ಪೈಪೋಟಿ ನೀಡಲು ಇದೀಗ ಕಿಯಾ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ.
 

ಸೌತ್‌ ಕೊರಿಯಾ(ಅ.08): ಹ್ಯುಂಡೈ ಕೋನಾ ಎಲೆಕ್ಟ್ರಿಕಲ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್ ಇ -ನಿರೋ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಪ್ಯಾರಿಸ್ ಮೋಟಾರ್ಸ್ ಶೋನಲ್ಲಿ ಪ್ರದರ್ಶಿಸಲಾದ ಕಿಯಾ ಇ ನಿರೋ ಕಾರು ಇದೀಗ ಭವಿಷ್ಯ ಕಾರು ಎಂದೇ ಬಿಂಬಿತವಾಗಿದೆ.

ಹ್ಯುಂಡೈ ಕೋನಾ ಕಾರಿಗೆ ಹೋಲಿಸಿದರೆ, ಕಿಯಾ ಇ ನಿರೋ ಕಾರು ಪ್ರಯಾಣಿಕರಿಗೆ ಅನೂಕೂಲಕರ ವಾತಾವರಣವಿದೆ. ಕಾರಣ ಕಿಯಾ ಕಾರಿನಲ್ಲಿ ಹೆಚ್ಚಿನ ಬೂಟ್ ಸ್ಪೇಸ್ ನೀಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 481 ಕೀಮಿ ಪ್ರಯಾಣ ಮಾಡಬಹುದಾಗಿದೆ.

ಬಲಿಷ್ಠ ಇಂಜಿನ್ ಹೊಂದಿರುವ ಕಿಯಾ ಇ-ನಿರೋ ಎಲೆಕ್ಟ್ರಿಕಲ್ ಕಾರು 0-100 ಕೀಮಿ ಕೇವಲ 7.8  ಸೆಕುಂಡ್‌ಗಳಲ್ಲಿ ತಲುಪಲಿದೆ.  204ಬಿಹೆಚ್‌ಪಿ ಎಲೆಕ್ಟ್ರಿಕಲ್ ಮೋಟಾರ್ ಇಂಜಿನ್ ಹೆಚ್ಚಿನ ಸಾಮರ್ಥ್ಯ ನೀಡಲಿದೆ. 2019ರ ಮಾರ್ಚ್‌ನಲ್ಲಿ ಕಿಯಾ ಎಲೆಕ್ಟ್ರಿಕಲ್ ಕಾರು ಬಿಡುಗಡೆಯಾಗಲಿದೆ. ಆದರೆ ಇದರ ಬೆಲೆ ಹಾಗೂ ಇತರ ಮಾಹಿತಿಯನ್ನ ಕಂಪೆನಿ ಬಹಿರಂಗ ಪಡಿಸಿಲ್ಲ. 

loader