ಭಾರತದ ಟಾಟಾ ಸಂಸ್ಥೆಯ ಟಿಯಾಗೋ ಕಾರು ಆಗಸ್ಟ್ ತಿಂಗಳಲ್ಲಿ ದಾಖಲೆ ಬರೆದಿದೆ. ಭಾರತದ ಮಾರುಕಟ್ಟೆಯಲ್ಲಿ ಇತರ ಕಾರುಗಳಿಗೆ ಪೈಪೋಟಿ ನೀಡುತ್ತಿರುವ ಟಾಟಾ ಇದೀಗ ನಿರ್ಮಿಸಿರೋ ಹೊಸ ದಾಖಲೆ ಯಾವುದು?ಇಲ್ಲಿದೆ ವಿವರ.

ಬೆಂಗಳೂರು(ಸೆ.20): ಟಾಟಾ ಮೋಟಾರು ಸಂಸ್ಥೆ ಇದೀಗ ಭಾರತದ ಕಾರು ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದೆ. ಈ ಮೂಲಕ ಇತರ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ಇದರ ಬೆನ್ನಲ್ಲೇ ಟಾಟಾ ಟಿಯಾಗೋ ಕಾರು ಭಾರತದ ಮಾರುಕಟ್ಟೆಯಲ್ಲಿ ದಾಖಲೆ ಬರೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2016ರಲ್ಲಿ ಟಾಟಾ ಸಂಸ್ಥೆ ಟಿಯಾಗೋ ಹ್ಯಾಚ್‌ಬ್ಯಾಕ್ ಕಾರು ಪರಿಚಯಿಸಿತು. ಟಿಯಾಗೋ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ಗರಿಷ್ಠ ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ. ಆಗಸ್ಟ್ ತಿಂಗಳಲ್ಲಿ ಟಿಯಾಗೋ ಕಾರು 9,277 ಕಾರುಗಳು ಭಾರತದಲ್ಲಿ ಮಾರಾಟವಾಗಿದೆ.

ಚಂಡಿಘಡ, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದಲ್ಲಿ ಟಿಯಾಗೋ ಕಾರು ಹೆಚ್ಚು ಮಾರಾಟವಾಗಿದೆ. ಈ ಮೂಲಕ ಈ ಹಿಂದಿನ ದಾಖಲೆಗಳನ್ನ ಟಿಯಾಗೋ ಅಳಿಸಿಹಾಕಿದೆ.

ಟಿಯಾಗೋ ಬೆಲೆ 3.35 ಲಕ್ಷ ರೂಪಾಯಿಗಳಿಂದ(ಎಕ್ಸ್ ಶೋ ರೂಂ) ಆರಂಭವಾಗಲಿದೆ. ವಿಶೇಷ ಅಂದರೆ ಡೀಸೆಲ್ ಇಂಜಿನ್ ಕಾರು ಪ್ರತಿ ಲೀಟರ್‌ಗೆ 27.28 ಕೀಲೋ ಮೀಟರ್ ಮೈಲೇಜ್ ನೀಡಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.