ಟಾಟಾ ನೆಕ್ಸಾನ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ
ಕಡಿಮೆ ಬೆಲೆಗೆ ಗ್ರಾಹಕರಿಗೆ ಕಾರು ತಲುಪಿಸಲು ಪೈಪೋಟಿಗೆ ಬೀಳೋ ಮೋಟಾರು ಕಂಪೆನಿಗಳು ಸುರಕ್ಷತಾ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರಲಿಲ್ಲ. ಆದರೆ ಇದೀಗ ಸುರಕ್ಷತೆಯಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನ ಪಾಲಿಸಲೇಬೇಕಿದೆ. ಇದೀಗ ಟಾಟಾ ಮೋಟಾರ್ ಸಂಸ್ಥೆಯ ನೆಕ್ಸಾನ್ ಕಾರಿನ ಸುರಕ್ಷತಾ ಫಲಿತಾಂಶ ಹೊರಬಿದ್ದಿದೆ. ಇಲ್ಲಿದೆ ರಿಸಲ್ಟ್.
ಜರ್ಮನಿ(ಆ.07): ಭಾರತದ ಟಾಟಾ ನೆಕ್ಸಾನ್ ಎಸ್‌ಯುವಿ ಕಾರು ಅತ್ಯಲ್ವ ಅವಧಿಯಲ್ಲಿ ಭಾರಿ ಜನಪ್ರೀಯತೆಗಳಿಸಿದೆ. ಮಾರಾಟದಲ್ಲೂ ನೆಕ್ಸಾನ್ ಕಾರು ದಾಖಲೆ ಬರೆದಿದೆ. ಇದೀಗ ಜರ್ಮನಿ ಮ್ಯೂನಿಚ್‌ನಲ್ಲಿ ನಡೆದ ವಿಶ್ವದ ಹೊಸ ಕಾರು ಸುರಕ್ಷತಾ ಪರೀಕ್ಷೆ(NCAP)ಪಳಿತಾಂಶ ಪ್ರಕಟಗೊಂಡಿದೆ.
5 ಸ್ಟಾರ್ ಪರೀಕ್ಷೆಯಲ್ಲಿ ಟಾಟಾ ನೆಕ್ಸಾನ್ ಕಾರು 4 ಸ್ಟಾರ್ ಗಳಿಸೋ ಮೂಲಕ ಸುರಕ್ಷತಾ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಈ ಮೂಲಕ ಭಾರತದ ನೆಕ್ಸಾನ್ ಎಸ್‌ಯುವಿ ಕಾರು ಗರಿಷ್ಠ ಸುರಕ್ಷತೆ ಹೊಂದಿದ ಕಾರು ಎಂಬು ಹೆಗ್ಗಳಿಕೆಗೆ ಪಾತ್ರವಾಗಿದೆ.
ವಯಸ್ಕರ ಪ್ರಯಾಣ ಸುರಕ್ಷತೆಗೆ 4 ಸ್ಟಾರ್ ಹಾಗೂ ಮಕ್ಕಳ ಪ್ರಯಾಣ ಸುರಕ್ಷತೆಯಲ್ಲಿ 3 ಸ್ಟಾರ್ ಪಡೆದುಕೊಂಡಿದೆ. ಟಾಟಾ ನೆಕ್ಸಾನ್ ಕಾರು ಡ್ಯುಯೆಲ್ ಏರ್‌ಬ್ಯಾಗ್, ಎಬಿಎಸ್, ಚೈಲ್ಡ್ ಸೀಟ್ ಸೇರಿದಂತೆ ಎಲ್ಲಾ ಸುರಕ್ಷತೆಯನ್ನ ಈ ಕಾರಿನಲ್ಲಿ ಅಳವಡಿಸಲಾಗಿದೆ. ಹೀಗಾಗಿ ನೆಕ್ಸಾನ್ ಕಾರು ಸುರಕ್ಷತೆಯಲ್ಲಿ 4 ಸ್ಟಾರ್ ಪಡೆದಿದೆ ಎಂದು ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನ ಘಟಕ ಅಧ್ಯಕ್ಷ ಮಯಾಂಕ್ ಪರೀಕ್ ಹೇಳಿದ್ದಾರೆ.
ಸುರಕ್ಷತಾ ಫಲಿತಾಂಶ ಟಾಟಾ ಗ್ರಾಹಕರು ಹಾಗೂ ಕಂಪೆನಿ ನಡುವಿನ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸಿದೆ. ಟಾಟಾ ಎಲ್ಲಾ ಕಾರುಗಳು ಗ್ರಾಹಕರಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದೆ ಎಂದು ಮಯಾಂಕ್ ಪರೀಕ್ ಹೇಳಿದ್ದಾರೆ.