ಟಾಟಾ ನೆಕ್ಸಾನ್ ಎಎಮ್‌ಟಿ ಕಾರು ಈಗ ಮಿಡ್ ವೆರಿಯೆಂಟ್‌ನಲ್ಲೂ ಲಭ್ಯ-ಬೆಲೆ ಎಷ್ಟು?

Tata Nexon AMT Introduced With Mid-Level XM Variant
Highlights

ಟಾಟಾ ನೆಕ್ಸಾನ್ ಟಾಪ್ ಲೆವೆಲ್ ಕಾರುಗಳಲ್ಲಿ ಲಭ್ಯವಿದೆ ಎಎಂಟಿ ಇದೀಗ ವಿಡ್ ಲೆವೆಲ್ ಕಾರುಗಳಲ್ಲಿ ಲಭ್ಯವಿದೆ. ವಿಶೇಷ ಅಂದರೆ ಕಾರಿನ ಬೆಲೆ ಟಾಪ್ ವೆರಿಯೆಂಟ್‌ಗಿಂತ 2 ಲಕ್ಷ ರೂಪಾಯಿ ಕಡಿಮೆ ಬೆಲೆಯಲ್ಲಿ ಗ್ರಾಹಕರ ಕೈಗೆ ಸಿಗಲಿದೆ. ಇಲ್ಲಿದೆ ಇದರ ಕಂಪ್ಲೀಟ್ ಡಿಟೇಲ್ಸ್.

ಬೆಂಗಳೂರು(ಜು.17):  ಟಾಟಾ ಕಾರು ಬಿಡುಗಡೆ ಮಾಡಿರುವ ನೆಕ್ಸಾನ್ ಎಸ್‌ಯುವಿ ಕಾರು, ಭಾರತದಲ್ಲಿ ಅತ್ಯಂತ ಜನಪ್ರೀಯ ಕಾರಾಗಿ ಮಾರ್ಪಟ್ಟಿದೆ. ನೆಕ್ಸಾನ್ ಟಾಪ್ ವೆರಿಯೆಂಟ್ ಕಾರುಗಳಲ್ಲಿ ಎಎಂಟಿ (ಅಟೋಮ್ಯಾಟಿಕ್ ಮ್ಯಾನ್ಯುಯೆಲ್ ಟ್ಸಾನ್ಸ್‌ಮಿಶನ್) ಸೌಲಭ್ಯವಿತ್ತು. ಆದರೆ ಇದೀಗ ಮಿಡ್ ವೇರಿಯೆಂಟ್ ಕಾರುಗಳಲ್ಲಿಯೂ ಎಎಂಟಿ ಸೌಲಭ್ಯ ಲಭ್ಯವಿದೆ.

ಟಾಟಾ ಬಿಡುಗಡೆಗೊಳಿಸಿರುವ ನೂತನ ನೆಕ್ಸಾನ್ ಮಿಡ್ ಲೆವೆಲ್ ಕಾರಿನಲ್ಲಿ ಎಎಂಟಿ ಸೌಲಭ್ಯ ನೀಡಲಾಗಿದೆ. ಇಷ್ಟೇ ಅಲ್ಲ ಪೆಟ್ರೋಲ್ ಕಾರಿನ ಬೆಲೆ 7.50 ಲಕ್ಷ(ಎಕ್ಸ್ ಶೂರೂಂ) ರೂಪಾಯಿಯಿಂದ ಪ್ರಾರಂಭವಾಗಲಿದೆ. ಇನ್ನು ಡಿಸೆಲ್ ಕಾರಿನ ಬೆಲೆ 8.53 ಲಕ್ಷ(ಎಕ್ಸ್ ಶೂರೂಂ) ರೂಪಾಯಿಯಿಂದ ಪ್ರಾರಂಭವಾಗಲಿದೆ. 

ಈ ಕಾರಿನಲ್ಲಿ ಮೂರು ಬಗೆಯ ಡ್ರೈವಿಂಗ್'ಗೆ ಅವಕಾಶವಿದೆ. ಸಿಟಿ, ಸ್ಪೋರ್ಟ್ ಹಾಗೂ ಇಕೋ. ಇದರ ಜೊತೆಗೆ ಕ್ಲಚ್ ಫ್ರೀ ಡ್ರೈವಿಂಗ್  ಅನ್ನು ಎಂಜಾಯ್ ಮಾಡಬಹುದು. ಹೈಪರ್ ಡ್ರೖವ್ ಸ್ವಯಂಚಾಲಿತ ಗೇರ್ ಗಳು ಈ ಕಾರಿನ ಇನ್ನೊಂ ದು ವಿಶೇಷ. ಈ ಮೂಲಕ ಒತ್ತಡ ಕಡಿಮೆಯಾಗಿ ಡ್ರೈವಿಂಗ್ ಸರಳ ಹಾಗೂ ಆರಾಮ ದಾಯವಾಗಬಲ್ಲದು. ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಿವೆ. ಸ್ಮಾರ್ಟ್ ಹಿಲ್ ಅಸಿಸ್ಟ್ ಎಂಬ ಆಯ್ಕೆ ಇದ್ದು ಇದು, ಕಾರನ್ನು ನಿಲ್ಲಿಸಲು ಹಾಗೂ ಮುಂದಕ್ಕೆ ಚಲಿಸಲು ಸೂಚನೆ  ನೀಡುತ್ತದೆ.

ಸಿಟಿ ಟ್ರಾಫಿಕ್'ನಲ್ಲಿ ಈ ವ್ಯವಸ್ಥೆ ಹೆಚ್ಚು ಅನುಕೂಲಕರ.  ನಿಧಾನವಾಗಿ ಚಲಿಸುವ ಟ್ರಾಫಿಕ್'ನಲ್ಲಿ ಎಕ್ಸಿಲೇಟರ್ ತುಳಿಯದೇ ಕಾರನ್ನು ಮುಂದೆ ಚಲಿಸುವ ಆಯ್ಕೆಯೂ ಇದರಲ್ಲಿದೆ. ಜೊತೆಗೆ ಇತರ ಕಾರುಗಳಿಗೆ ಹೊಲಿಸಿದರೆ ಕಡಿಮೆ ಬೆಲೆ ಕೂಡ ಗ್ರಾಹಕರನ್ನ ಆಕರ್ಷಿಸಲಿದೆ.

ಟಾಪ್ ವೆರಿಯೆಂಟ್ ಕಾರಿಗಿಂತ ಇದೀಗ ಪೆಟ್ರೋಲ್ ಕಾರು 2 ಲಕ್ಷ ರೂಪಾಯಿ ಹಾಗೂ ಡಿಸೆಲ್ ಕಾರು 1.77 ಲಕ್ಷ ರೂಪಾಯಿ ಕಡಿಮೆ ಬೆಲೆಯಲ್ಲಿ ಎಎಂಟಿ ಕಾರು ಗ್ರಾಹಕರ ಕೈಗೆ ಸಿಗಲಿದೆ. ಈ ಮೂಲಕ ಟಾಟಾ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ.

loader