ಮುಂಬೈ(ಅ.07): ಟಾಟಾ ಮೋಟಾರ್ಸ್ ಶೀಘ್ರದಲ್ಲೇ ನೂತನ ಟಾಟಾ ಟಿಗೋರ್ ಸೆಡಾನ್ ಕಾರು ಬಿಡುಗಡೆ ಮಾಡಲಿದೆ. ಈಗಾಗಲೇ ಹಲವು ಕುತೂಹಲ ಸೃಷ್ಟಿಸಿರುವ ಟಿಗೋರ್ ಇದೀಗ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ನೂತನ ಟಾಟಾ ಟಿಗೋರ್ ಕಾರಿನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟ ಹೃತಿಕ್ ರೋಶನ್ ನೇಮಕ ಮಾಡಲಾಗಿದೆ. ಇಷ್ಟೇ ಅಲ್ಲ ಹೃತಿಕ್ ಟಿಗೋರ್ ಕುರಿತು ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ. ಟಾಟಾ ಟಿಗೋರ್ ರಾಯಭಾರಿಯಾಗಿ ಆಯ್ಕೆಯಾಗಿರುವ ಹೃತಿಕ್ ಸಂಸತ ವ್ಯಕ್ತಪಡಿಸಿದ್ದಾರೆ. 

 

 

ನೂತನ ಟಾಟಾ ಟಿಗೋರ್ ಹಲವು ವಿಶೇಷತೆಗಳನ್ನೊಳಗೊಂಡಿದೆ. ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6.5 ಡಿಸ್‌ಪ್ಲೇ (ಟಾಟಾ ನೆಕ್ಸಾನ್ ಡಿಸ್‌ಪ್ಲೇ ಗಾತ್ರ) ಹೊಂಜಿದೆ. ಇದು ಆಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗೆ ಸಪೂರ್ಟ್ ಮಾಡಲಿದೆ. 

ನೂತನ ಟಿಗೋರ್ ಕಾರಿನ ಹೊರವಿನ್ಯಾಸದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಆದರೆ ಹೆಚ್ಚಿನ ವಿವರವನ್ನ ಬಹಿರಂಗ ಪಡಿಸಿಲ್ಲ. ಟ್ವೀಕೆಡ್ ಹೆಡ್‌ಲ್ಯಾಂಪ್ಸ್ , ಮುಂಭಾಗದ ಬಂಪರ್ ಹಾಗೂ ಗ್ರಿಲ್‌ ಬದಲಾವಣೆ ಮಾಡೋ ಸಾಧ್ಯತೆ ಇದೆ. ಇಷ್ಟೇ ಅಲ್ಲ ಸುರಕ್ಷತಾ ದೃಷ್ಟಿಯಿಂದ ಬೇಸ್ ವೆರಿಯೆಂಟ್‌ಗಳಲ್ಲೂ ಏರ್‌ಬ್ಯಾಗ್ ಹಾಗೂ ಎಬಿಎಸ್ ಅಳವಡಿಸೋ ಸಾಧ್ಯತೆ ಹೆಚ್ಚಿದೆ.

ಕಾರಿನ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 1.2 ಪೆಟ್ರೋಲ್ ಇಂಜಿನ್, 83 ಬಿಹೆಚ್‌ಪಿ ಪವರ್ ಹಾಗೂ 1.5 ಲೀಟರ್ ಡೀಸೆಲ್ ಇಂಜಿನ್ 98 ಬಿಹೆಚ್‌ಪಿ ಪವರ್ ಹೊಂದಿದೆ. 5 ಸ್ವೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಪೆಟ್ರೋಲ್ ಇಂಜಿನ್‌ನಲ್ಲಿ ಆಟೋ ಟ್ರಾನ್ಸ್‌ಮಿಶನ್(AMT) ಹೊಂದಿದೆ.