ಮುಂಬೈ(ಅ.08): ಟಾಟಾ ಮೋಟಾರ್ಸ್ ನೂತನ ಹೆಕ್ಸಾ XM+ ಬಿಡುಗಡೆ ಮಾಡಿದೆ. ಈಗಾಗಲೇ ಹೆಕ್ಸಾ SUV ಕಾರು ಪ್ರಿಯರನ್ನ ಮೋಡಿ ಮಾಡಿತ್ತು. ಇದೀಗ ನೂತನ ಹೆಕ್ಸಾ XM+ ಬರೋಬ್ಬರಿ 16 ಹೆಚ್ಚುವರಿ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

 

 

ನೂತನ ಟಾಟಾ ಹೆಕ್ಸಾ XM+ ಬೆಲೆ 15.27 ಲಕ್ಷ (ಎಕ್ಸ್ ಶೋ ರೂಂ). ಸನ್‌ರೂಫ್, 16 ಇಂಚಿನ ಚಾರ್ಕೋಲ್ ಗ್ರೇ ಆಲೋಯ್ ವ್ಹೀಲ್ಸ್,  ಸಾಫ್ಟ್ ಟಚ್ ಡ್ಯಾಶ್‌ಬೋರ್ಡ್, ಲೆದರ್ ಕವರ್ ಸ್ಟೀರಿಂಗ್ ವ್ಹೀಲ್ಸ್, ಅಟೋಮ್ಯಾಟಿಕೆ ಟೆಂಪರೇಚರ್ ಕಂಟ್ರೋಲ್,  ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪರ್ಸ್, ಎಲೆಕ್ಟ್ರಿಕಲ್ ಮಿರರ್ ಸೇರಿದಂತೆ 16 ಫೀಚರ್ಸ್ ಹೊಂದಿದೆ.

ವಿಶೇಷ ಎಲೆಕ್ಟ್ರಿಕಲ್ ಸನ್‌ರೂಫ್‌ಗೆ 2 ವರ್ಷ ವಾರೆಂಟಿ ಕೂಡ ನೀಡಲಾಗಿದೆ. ಇನ್ನುಳಿದಂತೆ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 2179 ಸಿಸಿ ಡೀಸೆಲ್ ಇಂಜಿನ್ ಹೊಂದಿದೆ. ಪ್ರತಿ ಲೀಟರ್ ಡೀಸೆಲ್‌ಗೆ 17.6 ಕೀಮಿ ಮೈಲೇಜ್ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.