ನೀವು ಕಾರುಗಳನ್ನು ಕೊಳ್ಳಲು ಯೋಜನೆ ಹಾಕಿಕೊಂಡಿದ್ದೀರಾ ಹಾಗಾದರೆ ನೀವು ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು

ಹೊಸದಿಲ್ಲಿ : ನೀವು ಕಾರುಗಳನ್ನು ಕೊಳ್ಳಲು ಯೋಜನೆ ಹಾಕಿಕೊಂಡಿದ್ದೀರಾ ಹಾಗಾದರೆ ನೀವು ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು. ಯಾಕೆಂದರೆ ಮುಂದಿನ ತಿಂಗಳಿನಿಂದ ಟಾಟಾ ಮೋಟಾರ್ಸ್, ಹಾಗೂ ನಿಸಾನ್ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಏರಿಕೆ ಮಾಡಲು ನಿರ್ಧಾರ ಮಾಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಯಾರಿಕ ವೆಚ್ಚ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಇರಿಸಲಾಗಿದೆ. ಏಪ್ರಿಲ್ 1 ರಿಂದ ಸುಮಾರು 60 ಸಾವಿರದವರೆಗೂ ಕೂಡ ದರ ಏರಿಕೆಯಾಗಬಹುದು ಎನ್ನಲಾಗಿದೆ.

ಆರ್ಥಿಕ ವಿಚಾರಧಾರೆಗಳು, ಮಾರುಕಟ್ಟೆಯ ಸ್ಥಿತಿಗತಿಗಳು ಬೆಲೆ ಏರಿಕೆ ಮೇಲೆ ಸಾಕಷ್ಟು ಪ್ರಭಾವ ಬೀರಿವೆ ಎಂದು ಟಾಟಾ ಮೋಟಾರ್ಸ್ ಸಂಸ್ಥೆಯ ಅಧ್ಯಕ್ಷರಾದ ಮಯಾಂಕ್ ಪರೀಕ್ ಹೇಳಿದ್ದಾರೆ.