ಬೆಂಗಳೂರು (ನ.25): ನೇರ, ದಿಟ್ಟ, ನಿರಂತರ ಸುದ್ದಿಗಳಿಗಾಗಿ ಕರ್ನಾಟಕ ರಾಜ್ಯಾದ್ಯಂತ ಮನೆಮಾತಾಗಿರುವ ನಿಮ್ಮ ನೆಚ್ಚಿನ ಸುವರ್ಣನ್ಯೂಸ್ ಚಾನೆಲ್ ಡಿಜಿಟಲ್ ಲೋಕದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಡಿಜಿಟಲ್ ಮಾಧ್ಯಮ ಲೋಕದಲ್ಲಿ ನಂ.1 ಸುದ್ದಿತಾಣವಾಗಿ ತನ್ನದೇ ಛಾಪು ಮೂಡಿಸಿರುವ www.suvarnanews.com, ಈಗ ಮತ್ತೊಂದು ಸಾಧನೆಯನ್ನು ಮಾಡಿದೆ. ಹೌದು, ಸುವರ್ಣ ನ್ಯೂಸ್ ಯ್ಯೂಟ್ಯೂಬ್ ಚಾನೆಲ್ ಈಗ 20 ಲಕ್ಷ [2 ಮಿಲಿಯನ್] ಬಳಕೆದಾರರನ್ನು ಹೊಂದುವ ಮೂಲಕ ಕನ್ನಡ ಸುದ್ದಿ ಮಾಧ್ಯಮದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. 

ಇಂಗ್ಲಿಷ್‌ಮಯ ಮತ್ತು ಹಿಂದಿ ಹೇರಿಕೆಯಾಗುತ್ತಿರುವ ಸಂಕೀರ್ಣ ಕಾಲಘಟ್ಟದಲ್ಲಿ ಕನ್ನಡ ಚಾನೆಲ್‌ವೊಂದು ಇಂಥ ಸಾಧನೆ ಮಾಡುವುದು ಸುಲಭ ಸಾಧ್ಯವಲ್ಲ. ಇದು ಸಾಧ್ಯವಾಗಿದ್ದು ಕನ್ನಡಿಗರ ಪ್ರೀತಿ, ವೀಕ್ಷಕರ ಬೆಂಬಲದ ಮೂಲಕ ಎಂದು ಹೇಳಲು ನಮಗೆ ಸಂತೋಷವಾಗುತ್ತಿದೆ.

ಕನ್ನಡ ರಾಜ್ಯೋತ್ಸವದ ಸಡಗರದ ಸಂದರ್ಭದಲ್ಲೇ ಈ ಸಾಧನೆ ಸಾಧ್ಯವಾಗಿರೋದು ಇನ್ನೊಂದು  ಖುಷಿಯ ವಿಚಾರ. ಈ ಹಿಂದೆ ಹತ್ತು ಲಕ್ಷ ಬಳಕೆದಾರರನ್ನು ಹೊಂದಿದಾಗ Youtubeನಿಂದ ಗೋಲ್ಡನ್ ಅವಾರ್ಡ್‌ಗೂ ಕೂಡಾ ಸುವರ್ಣನ್ಯೂಸ್ ಭಾಜನವಾಗಿತ್ತು.

2011ರಲ್ಲಿ ಡಿಜಿಟಲ್ ಲೋಕದಲ್ಲಿ ಸುವರ್ಣ ನ್ಯೂಸ್ ಕಣ್ಣು ತೆರೆದಾಗ, ಅದರ ಮುಂದೆ ಬೃಹತ್ ಸವಾಲುಗಳಿದ್ದವು. ಅದ್ಯಾವುದಕ್ಕೂ ಧೃತಿಗೆಡದ ಸುವರ್ಣನ್ಯೂಸ್ ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ, ಬರೇ 8 ವರ್ಷಗಳಲ್ಲಿ 20 ಲಕ್ಷ ಬಳಕೆದಾರರನ್ನು ಪಡೆದಿರುವುದು ಅದರ ಜನಪ್ರಿಯತೆಗೆ ಸಾಕ್ಷಿ.

ಈ 8 ವರ್ಷಗಳಲ್ಲಿ ಸುವರ್ಣನ್ಯೂಸನ್ನು ಬೆಳೆಸಿ ಪ್ರೋತ್ಸಾಹಿಸಿದ್ದು ಕನ್ನಡನಾಡಿನ ಮಹಾಜನತೆ. ತಮ್ಮ ಅಮೂಲ್ಯವಾದ ಸಲಹೆ,  ಕಟುವಾದ ಟೀಕೆ, ಎಡವಿದಾಗ ಬುದ್ಧಿವಾದ,  ಅವಶ್ಯಕತೆ ಬಿದ್ದಾಗ ತಿದ್ದಿ ತೀಡಿ  ನಮ್ಮನ್ನು ನೀವು ಬೆಳೆಸಿದ್ದೀರಿ. ಅದಕ್ಕೆ ನಾವು ಚಿರಋಣಿ.

ಸುವರ್ಣನ್ಯೂಸ್‌ನಲ್ಲಿ ಏನೇನಿದೆ?

ಲೈವ್ ಟೀವಿ: ಸುವರ್ಣ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ನೀವು 24X7 ಲೈವ್ ಟೀವಿಯನ್ನು ವೀಕ್ಷಿಸಬಹುದು. 
ಸದಾ ಸಿದ್ಧ: ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ಸುದ್ದಿಗಳನ್ನು ಯಾವಾಗ ಬೇಕಾದರೂ ವೀಕ್ಷಿಸಬಹುದು.
ಪ್ಲೇ ಲಿಸ್ಟ್: ಸುದ್ದಿಗಳನ್ನು ವಿಷಯಾಧಾರಿತವಾಗಿ ಹುಡುಕಲು ಸುಲಭವಾಗುವಂತೆ  ಪ್ಲೇಲಿಸ್ಟ್‌ಗಳು
ವೈವಿಧ್ಯಮಯ: ಸುದ್ದಿಗಳ ಹೊರತಾಗಿ ಮನರಂಜನೆ, ಜೀವನಶೈಲಿ, ತಂತ್ರಜ್ಞಾನ, ಆರೋಗ್ಯ ಇತ್ಯಾದಿ ಬಗ್ಗೆ ವಿಡಿಯೋಗಳು 

ರಾಜ್ಯ,ದೇಶ-ವಿದೇಶದ ಆಗುಹೋಗುಗಳು, ರಾಜಕೀಯ ವಿದ್ಯಮಾನಗಳು, ಕ್ರೀಡಾಲೋಕದ ರೋಚಕ ಸುದ್ದಿಗಳು, ಸಿನಿಲೋಕದ ಮನರಂಜಿಸುವ ನ್ಯೂಸ್ ಜೊತೆಗೆ, ವೀಕ್ಷಕರಿಗೆ ಹೊಸತನ್ನು ಕೊಡುವ ನಿರಂತರ ಪ್ರಯತ್ನ ಸುವರ್ಣನ್ಯೂಸ್‌ನದ್ದು. ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ, ವಿಡಿಯೋಗಳನ್ನು ವೀಕ್ಷಿಸಿ, ಲೈಕ್ ಮಾಡಿ, ಇತರರೊಂದಿಗೂ ಹಂಚಿಕೊಳ್ಳಿ.... ಎಂದಿನಂತೆ ಮುಂದೆಯೂ ನಿಮ್ಮ ಸಲಹೆ, ಮಾರ್ಗದರ್ಶನವನ್ನು ಬಯಸುತ್ತಾ.... 

ಇಮೇಲ್ ವಿಳಾಸ: suvarnanewsindia@gmail.com

ಧನ್ಯವಾದ ಡಿಜಿಟಲ್ ಕರ್ನಾಟಕ!