‘ಆಧಾರ್‌’ ಮೂಲಕ ಮನುಷ್ಯರ ‘ಜಾತಕ’ ಸಂಗ್ರಹಿಸುವಂತೆ ಹಸುಗಳ ಮಾಹಿತಿಯನ್ನೂ ಸಂಗ್ರಹಿಸುವ ತಂತ್ರಜ್ಞಾನ ತಮಿಳುನಾಡಿನ ಚೆನ್ನೈನ ‘ದ್ವಾರ ಸುರಭಿ’ ಸಾಫ್ಟ್‌ವೇರ್‌ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಗಮನ ಸೆಳೆಯಿತು.

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ನ.17): ‘ಆಧಾರ್‌’ ಮೂಲಕ ಮನುಷ್ಯರ ‘ಜಾತಕ’ ಸಂಗ್ರಹಿಸುವಂತೆ ಹಸುಗಳ ಮಾಹಿತಿಯನ್ನೂ ಸಂಗ್ರಹಿಸುವ ತಂತ್ರಜ್ಞಾನ ತಮಿಳುನಾಡಿನ ಚೆನ್ನೈನ ‘ದ್ವಾರ ಸುರಭಿ’ ಸಾಫ್ಟ್‌ವೇರ್‌ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಗಮನ ಸೆಳೆಯಿತು.

ಆಧಾರ್‌ನಲ್ಲಿ ಬೆರಳಚ್ಚು ತೆಗೆದುಕೊಂಡರೆ ಇಲ್ಲಿ ಹಸುಗಳ ಬಾಯಿಯನ್ನೂ ಸ್ಕ್ಯಾನ್‌ ಮಾಡಿ ಸಾಫ್ಟ್‌ವೇರ್‌ನಲ್ಲಿ ದಾಖಲೆಯನ್ನು ಸಂಗ್ರಹಿಸಿದರೆ ಸಾಕು, ಹಸುವಿನ ಸಂಪೂರ್ಣ ಮಾಹಿತಿಯನ್ನು ಯಾವಾಗ ಬೇಕಾದರೂ ವೀಕ್ಷಿಸಬಹುದಾಗಿದೆ. ಹಸುವೊಂದಕ್ಕೆ ವಿಮೆ ಮಾಡಿಸಿದಾಗ, ಕಿವಿಗೆ ಟ್ಯಾಗ್‌ ಹಾಕಿ ಮಾಹಿತಿ ಪಡೆಯುವುದು ಪ್ರಸಕ್ತ ಪ್ರಚಲಿತದಲ್ಲಿದೆ. ವಿಮೆ ಮಾಡಿಸದ ಹಸು ಮೃತಪಟ್ಟಾಗ ಕೆಲ ರೈತರು ವಿಮೆ ಮಾಡಿಸಿದ ಹಸುವಿನ ಹಣಕ್ಕೆ ವಿಮಾ ಕಂಪನಿಗಳಿಂದ ಹಣ ಪಡೆಯುವುದನ್ನು ತಪ್ಪಿಸಲು ಈ ಸಾಫ್ಟ್‌ವೇರ್‌ ವಿಮಾ ಕಂಪನಿಗಳಿಗೆ ಸಹಾಯ ಮಾಡಲಿದೆ.

ಹೈಕಮಾಂಡ್‌ ಹೇಳಿದರೆ ದೇವನಹಳ್ಳಿಯಿಂದ ಸ್ಪರ್ಧೆ: ಮುನಿಯಪ್ಪ

ಹಸುಗಳ ಆರೋಗ್ಯದ ಬಗ್ಗೆಯೂ ಪಶು ವೈದ್ಯರೊಂದಿಗೆ ಚಾಟ್‌ ಬಾಟ್‌ ಮಾಡಬಹುದು. ಬೃಹತ್‌ ಸಂಖ್ಯೆಯಲ್ಲಿ ರಾಸುಗಳನ್ನು ಸಾಕಿರುವ ಫಾಮ್‌ರ್‍ನವರು, ಹಾಲಿನ ಕಂಪನಿಗಳು ಸದ್ಯ ಈ ತಂತ್ರಜ್ಞಾನ ಬಳಸುತ್ತಿವೆ. ಆಂಧ್ರಪ್ರದೇಶ, ರಾಜಸ್ಥಾನ, ಗುಜರಾತ್‌ ರಾಜ್ಯಗಳ ಕೆಲ ಫಾಮ್‌ರ್‍ಗಳು ಈಗಾಗಲೇ ಈ ತಂತ್ರಜ್ಞಾನ ಅಳವಡಿಸಿಕೊಂಡು ಯಶಸ್ವಿಯಾಗಿವೆ. ರಾಜ್ಯದ ಮಂಡ್ಯ, ಶಿವಮೊಗ್ಗ, ಹಾವೇರಿಯ ಕೆಲ ಡೈರಿ ಫಾರ್ಮ್‌ಗಳ ರಾಸುಗಳಿಗೂ ಅಳವಡಿಸಲಾಗಿದೆ ಎನ್ನುತ್ತಾರೆ ‘ದ್ವಾರ ಸುರಭಿ’ಯ ಪಶು ವೈದ್ಯಾಧಿಕಾರಿ ಭವಾನಿ ಶಂಕರ ರೆಡ್ಡಿ.

ರಾಸುಗಳ ಮಾಹಿತಿಯನ್ನು ಸಂಗ್ರಹಿಸುವುದರಿಂದ ಅನಾರೋಗ್ಯ ಉಂಟಾದರೆ ಅದನ್ನು ಪತ್ತೆ ಹಚ್ಚಬಹುದು. ಎಷ್ಟು ಕರುಗಳನ್ನು ಹಾಕಿದೆ. ಇಲ್ಲಿಯವರೆಗೂ ಯಾವ್ಯಾವ ವ್ಯಾಕ್ಸಿನ್‌ ಹಾಕಲಾಗಿದೆ. ಎಷ್ಟು ಲೀಟರ್‌ ಹಾಲು ನೀಡಲಿದೆ. ಇಲ್ಲಿಯವರೆಗೆ ಯಾವ ರೋಗದಿಂದ ನರಳಿದೆ ಮುಂತಾದ ವಿಷಯಗಳನ್ನೂ ತಿಳಿದುಕೊಳ್ಳಬಹುದು. ಸಾವಿರಾರು ಸಂಖ್ಯೆಯಲ್ಲಿ ರಾಸುಗಳನ್ನು ಸಾಕುವ ಹಾಲು ಕಂಪನಿಗಳು ಮತ್ತು ರೈತರಿಗೂ ಇದರಿಂದ ಬಹಳಷ್ಟುಪ್ರಯೋಜನವಾಗಲಿದೆ ಎನ್ನುತ್ತಾರೆ ಭವಾನಿಶಂಕರ ರೆಡ್ಡಿ.

ನೀರಲ್ಲಿ ಮುಳುಗುವವರ ರಕ್ಷಿಸುವ ‘ಮೈ ಬಾಯ್‌’: ನೀರಿನಲ್ಲಿ ಮುಳುಗುತ್ತಿರುವವರನ್ನು ರಕ್ಷಿಸಲೆಂದೇ ಮಂಗಳೂರಿನ ಡ್ರೋನ್‌ಲೆಕ್‌ ಎಂಟರ್‌ಪ್ರೈಸಸ್‌ ‘ಮೈ ಬಾಯ್‌’ ಎಂಬ ರಿಮೋಟ್‌ ಮೂಲಕ ನಿಯಂತ್ರಿಸುವ ಸಾಧನವನ್ನು ಅನ್ವೇಷಿಸಿದೆ. ಅರ್ಧ ಕಿ.ಮೀ. ದೂರದವರೆಗೂ ನೀರಿನಲ್ಲಿ ಸ್ವಯಂಚಾಲಿತವಾಗಿ ಇದು ಸಂಚರಿಸಲಿದ್ದು, ಮುಳುಗುತ್ತಿರುವ ನಾಲ್ವರನ್ನೂ ಏಕಕಾಲದಲ್ಲಿ ರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ.

ಪ್ರೇಯಸಿ ಜತೆಗಿದ್ದಾಗ ಬಂದ ಪತಿ: ಎಚ್‌ಎಎಲ್‌ಗೆ ನುಗ್ಗಿದ ಪ್ರಿಯಕರ

ಈ ಸಾಧನ ಗಾಳಿಯನ್ನು ಒಳಗೊಂಡಿದ್ದು ಈಗಾಗಲೇ ಪಶ್ಚಿಮ ಬಂಗಾಳ, ರಾಜಸ್ಥಾನ, ಗುಜರಾತ್‌ ರಾಜ್ಯ ಪ್ರಕೃತಿ ಪರಿಹಾರ ತಂಡಗಳು ಖರೀದಿಸಿವೆ. 25 ಕೆ.ಜಿ. ತೂಕದ ಈ ಸಾಧನದ ಬೆಲೆ 6 ಲಕ್ಷ. ಸಮುದ್ರ ದಡದಲ್ಲಿ ಈ ಸಾಧನ ಇದ್ದರೆ ಅಕಸ್ಮಾತ್‌ ಯಾರಾದರೂ ನೀರಿನಲ್ಲಿ ಮುಳುಗುತ್ತಿರುವುದು ಕಂಡ ತಕ್ಷಣ ರಕ್ಷಿಸಬಹುದು. ಪ್ರಾಣ ಹಾನಿ ತಡೆಗಟ್ಟಲು ಬಹಳಷ್ಟುಸಹಕಾರಿಯಾಗಿದೆ ಎನ್ನುತ್ತಾರೆ ಕಂಪನಿಯ ಪವನ್‌.