ಕೊಲಂಬೋ[ಜೂ.20]: ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾದ ಉಪಗ್ರಹವೊಂದು ಉಡಾವಣೆಯಾಗಿದೆ. ಈ ಉಪಗ1’ ಎಂಬ ಹೆಸರಿಡಲಾಗಿದೆ

ಅಂದಹಾಗೆ ಈ ಉಪಗ್ರಹ ಅಭಿವೃದ್ಧಿಪಡಿಸಿ, ಉಡಾವಣೆ ಮಾಡಿರುವುದು ಶ್ರೀಲಂಕಾ ಸರ್ಕಾರದ ಅಧಿಕೃತ ಸಂಸ್ಥೆಯಲ್ಲ. ಜಪಾನ್‌ನ ಕ್ಯೂಶು ತಾಂತ್ರಿಕ ಸಂಸ್ಥೆಯಲ್ಲಿ ಬಾಹ್ಯಾಕಾಶ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಲಂಕಾ ಮೂಲದ ಎಂಜಿನಿಯರ್‌ಗಳಾದ ಥರಿಂದು ದಯಾರತ್ನೆ ಹಾಗೂ ದುಲಾನಿ ಚಮಿಕಾ.

1.05 ಕೆ.ಜಿ. ತೂಕದ ‘ರಾವಣ-1’ ಉಪಗ್ರಹವನ್ನು ಈ ವಿದ್ಯಾರ್ಥಿಗಳು ಜಪಾನ್ ನ ಬಾಹ್ಯಾಕಾಶ ಸಂಸ್ಥೆಗೆ ಫೆ.18ರಂದು ಹಸ್ತಾಂತರಿಸಿದ್ದರು. ಏ.17ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಲಾಗಿತ್ತು. ಸೋಮವಾರ ಈ ಉಪಗ್ರಹವನ್ನು ಬಾಹ್ಯಾಕಾಶ ನಿಲ್ದಾಣದಿಂದಲೇ ಉಡಾವಣೆ ಮಾಡಲಾಗಿದೆ. ಈ ಉಪಗ್ರಹ ಕಕ್ಷೆಗೆ ಸೇರಿದೆ ಎಂದು ಲಂಕಾ ಪತ್ರಿಕೆ ವರದಿ ಮಾಡಿದೆ.