Asianet Suvarna News Asianet Suvarna News

ಏರ್‌ಕ್ರಾಫ್ಟ್ ಇಂಜಿನ್, ಡಿಫರೆಂಟ್ ಲುಕ್-ಇದು ವಿಶ್ವದ ಸ್ಪೆಷಲ್ ಬೈಕ್!

ಬೈಕ್ ಕ್ಷೇತ್ರದಲ್ಲಿ ಪ್ರತಿ ದಿನ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತೆ. ಇದೀಗ ಏರ್‌ಕ್ರಾಫ್ಟ್ ರೋಲ್ಸ್ ರಾಯ್ ಇಂಜಿನ್ ಮೂಲಕ ವಿಶೇಷ ಬೈಕ್ ನಿರ್ಮಿಸಲಾಗಿದೆ. ಇಲ್ಲಿದೆ ಈ ನೂತನ ಬೈಕ್ ವಿವರ.

Special Motorcycle Powered By A Rolls Royce Aircraft Engine
Author
Bengaluru, First Published Sep 17, 2018, 5:50 PM IST

ಲಂಡನ್(ಸೆ.17): ಏರ್‌ಕ್ರಾಫ್ಟ್ ಇಂಜಿನ್, 6 ಸಿಲಿಂಡರ್ ರೋಲ್ಸ್ ರಾಯ್ ಇಂಜಿನ್ ,  ಡಿಫರೆಂಟ್ ಲುಕ್,  ಚಕ್ರಗಳಂತೂ ಇನ್ನೂ ವಿಶೇಷ. ಇದು  ವಿಶೇಷವಾಗಿ ಹೊರತಂದ ಟಿಎಂಸಿ ಡ್ಯುಮೌಂಟ್ ಮೋಟಾರ್ ಸೈಕಲ್.

ಬ್ರೆಝಿಲ್‌ನ ಬೈಕ್ ರೇಸರ್ ಟರಾಸೋ ಮಾರ್ಕ್ಯೂಸ್ ಈ ಬೈಕ್ ಹಿಂದಿನ ಸೂತ್ರಧಾರಿ. ಈ ಬೈಕ್‌ಗೆ ಏರ್‌ಕ್ರಾಫ್ಟ್ ರೋಲ್ಸ್ ರಾಯ್ ಇಂಜಿನ್ ಬಳಸಲಾಗಿದೆ. ಇನ್ನು ದೊಡ್ಡ ಎರಡು ಚಕ್ರಗಳು ಇದರ ಅಂದ ಹೆಚ್ಚಿಸಿದೆ.  ಈ ಬೈಕ್‌ಗೆ ಗೇರ್ ಇಲ್ಲ, ಕ್ಲಚ್ ಇಲ್ಲ. 6 ಸಿಲಿಂಡರ್ ಇಂಜಿನ ಅಂದರೆ 300 ಹಾರ್ಸ್‌ಪವರ್ ಹೊಂದಿದೆ.

36 ಇಂಚಿನ ಹಬಲ್ಸ್ ವೀಲ್ಸ್ ಈ ಬೈಕ್‌ಗೆ ಬಳಸಲಾಗಿದೆ. ಹಿಂಬದಿ ಚಕ್ರದ ಸನಿಗದಲ್ಲೇ ಸವಾರನಿಗೆ ಕುಳಿತುಕೊಳ್ಳಲು ಜಾಗ. ಇದು ಸ್ವಲ್ಪ ಅಪಾಯಕಾರಿ. ಇನ್ನು ಗ್ರೌಂಡ್ ಕ್ಲಿಯರೆನ್ಸ್ ಕಡಿಮೆ.

ಈ ವಿಶೇಷ ಬೈಕ್ ಮಾರಾಟಕ್ಕಲ್ಲ. ಏರ್‌ಕ್ರಾಫ್ಟ್ ಇಂಜಿನ್ ಬಳಸಿ ವಿಶಿಷ್ಠ ಪ್ರಯೋಗ ಮಾಡಲಾಗಿದೆ. ಆದರೆ ಈ ಬೈಕ್ ನಿರ್ಮಾಣಕ್ಕೆ ತಗುಲಿದೆ ವೆಚ್ಚದ ಕುರಿತು ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

Special Motorcycle Powered By A Rolls Royce Aircraft Engine

Follow Us:
Download App:
  • android
  • ios