Asianet Suvarna News Asianet Suvarna News

ಬಾಹ್ಯಾಕಾಶದಲ್ಲೂ ಟಿಕ್‌ಟಾಕ್ ಹಾವಳಿ: ಸ್ಪೇಸ್‌ಎಕ್ಸ್ ಗಗನಯಾತ್ರಿ ಶೇರ್‌ ಮಾಡಿದ ಈ ವಿಡಿಯೋ ನೋಡಿ

ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ ಅವರು ಇತ್ತೀಚೆಗೆ ಬಾಹ್ಯಾಕಾಶದಿಂದ ಕುತೂಹಲಕಾರಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ.

SpaceX Astronaut Samantha Cristoforetti TikTok Video from space watch mnj
Author
Bengaluru, First Published May 9, 2022, 5:12 PM IST

ನವದೆಹಲಿ (ಮೇ. 09): ಪ್ರತಿದಿನವೂ ಹೊಸ ಟ್ರೆಂಡ್‌ಗಳು ಹೊರಹೊಮ್ಮುವ ಯುಗದಲ್ಲಿ ನಾವು ಸಾಮಾಜಿಕ ಮಾಧ್ಯಮ (Social Media) ಮತ್ತು ಇಂಟರ್ನೆಟ್‌ನಲ್ಲಿ ಹಲವಾರು‌ ಇಂಟರಸ್ಟಿಂಗ್‌ ಮತ್ತು ಫನ್ನಿ ವೀಡಿಯೊಗಳನ್ನು ನೋಡುತ್ತೇವೆ. ಪ್ರಪಂಚದ ವಿವಿಧ ಭಾಗಗಳಿಂದ ಜನರು ಪ್ರಪಂಚದಾದ್ಯಂತದ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಹೀಗೆ ವಿಡಿಯೋಗಳನ್ನು ಪೋಸ್ಟ್‌ ಮಾಡುವುದು ಸಹಜ. ಆದರೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ (Samantha Cristoforetti) ಅವರು ಇತ್ತೀಚೆಗೆ ಬಾಹ್ಯಾಕಾಶದಿಂದ ಒಂದು ಕುತೂಹಲಕಾರಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. 

ಸ್ಪೇಸ್‌ಎಕ್ಸ್ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ ಅವರು ಮೇ 5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಟಿಕ್‌ಟಾಕ್ (TikTok) ವೀಡಿಯೊವನ್ನು ಪೋಸ್ಟ್ ಮಾಡಿ ಬಾಹ್ಯಾಕಾಶದಲ್ಲಿ ಮೊದಲ ಟಿಕ್‌ಟೋಕರ್ ಆಗಿದ್ದಾರೆ. ಏಪ್ರಿಲ್ 27 ರಂದು, ಗಗನಯಾತ್ರಿ ಕ್ರಿಸ್ಟೋಫೊರೆಟ್ಟಿ ಆರು ತಿಂಗಳ ವಾಸ್ತವ್ಯಕ್ಕಾಗಿ ಪ್ರಯೋಗಾಲಯಕ್ಕೆ ಬಂದಿಳಿದ್ದಾರೆ. 

ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ತಾಂಜಾನಿಯಾದ ಕಿಲಿ, ನೀಮಾ ಪೌಲ್ ಸೃಜನಶೀಲತೆಗೆ ಮೋದಿ ಶಹಬ್ಬಾಸ್!

ಈ ವೀಡಿಯೊ ಸುಮಾರು 88 ಸೆಕೆಂಡುಗಳಷ್ಟು ಉದ್ದವಾಗಿದ್ದು ಕ್ರ್ಯೂ-4 (Crew-4 Misiion)ನ ಲಾಂಚ್‌ ಬಗ್ಗೆ ಹಾಗೂ ಈ ಯೋಜನೆಯ ಇತರ ವಿವರಗಳೊಂದಿಗೆ  ಎಟ್ಟಾ ಹೆಸರಿನ ಆಟಿಕೆ ಕೋತಿಯನ್ನು ಗಗನಯಾತ್ರಿ ಸಮಂತಾ ವೀಕ್ಷಕರಿಗೆ ಪರಿಚಯಿಸಿದ್ದಾರೆ.  ಚಿಕ್ಕ ಮಂಗಗಳಿಗೆ ಇಟಾಲಿಯನ್ ಭಾಷೆಯಲ್ಲಿ ಕರೆಯುವ 'ಸ್ಕಿಮ್ಮಿಟ್ಟಾ' ಎಂಬುದರ ಬದಲಾಗಿ,  ಸಮಂತಾ ಚಿಕ್ಕದಾಗಿ ಎಟ್ಟಾ ಎನ್ನುವ ಮೂಲಕ ಆಟಿಕೆ ಕೋತಿಯ ಬಗ್ಗೆ ವಿವರಿಸಿದ್ದಾರೆ. 

 

 

ಕ್ರಿಸ್ಟೋಫೊರೆಟ್ಟಿ ಅವರು ಬಾಹ್ಯಾಕಾಶ ನಿಲ್ದಾಣದಿಂದ ಒಂದು ನೋಟವನ್ನೂ ತೋರಿಸಿದ್ದಾರೆ. ಅಲ್ಲದೇ ಕ್ರ್ಯೂ-4 ಸದಸ್ಯರು ಸಾಧ್ಯವಾದಷ್ಟು ಬೇಗ ಕ್ರ್ಯೂ-3 ತಂಡದಿಂದ ಮಾಹಿತಿಯನ್ನು ಕಲಿಯಬೇಕಾಗಿದ್ದರಿಂದ  ಸ್ಪೇಸ್‌ಎಕ್ಸ್‌ನ ಕ್ರ್ಯೂ-4 ಮಿಷನ್‌ನ ಮೊದಲ ಕೆಲವು ದಿನಗಳು ಹೇಗೆ ಅತ್ಯಂತ ಅವಿಶ್ರಾಂತವಾಗಿದ್ದವು ಎಂದು ಅವರು ಹೇಳಿದ್ದಾರೆ. 

ಇಲ್ಲಿಯವರೆಗೆ, ವೀಡಿಯೊವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು 8,500 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಸಮಂತಾ ತಮ್ಮ ಎರಡನೇ ಬಾಹ್ಯಾಕಾಶ ಪ್ರವೇಶಿಸಿದ್ದು, ನವೆಂಬರ್ 2014 ರಿಂದ ಜೂನ್ 2015 ರವರೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊದಲು ಬಾರಿಗೆ ಸಮಯವನ್ನು ಕಳೆದಿದ್ದರು. ಆಗ, ಕ್ರಿಸ್ಟೋಫೊರೆಟ್ಟಿ ಸೇರಿದಂತೆ ಅನೇಕ ಗಗನಯಾತ್ರಿಗಳು ತಮ್ಮ ಬಾಹ್ಯಾಕಾಶ ವಿಹಾರಗಳನ್ನು ಹಂಚಿಕೊಳ್ಳಲು  ಟ್ವೀಟರನ್ನು ಬಳಸಿದ್ದರು. 

Follow Us:
Download App:
  • android
  • ios