ಪೆಟ್ರೋಲ್ ಬೆಲೆ ದುಬಾರಿಯಾಗುತ್ತಿದ್ದಂತೆ, ಇದೀಗ ಪರ್ಯಾಯ ಇಂಧನದ ಮೊರೆ ಹೋಗಲಾಗುತ್ತಿದೆ. ಇದೀಗ ಪೆಟ್ರೋಲ್-ಡೀಸೆಲ್ ಬದಲು ಪ್ಲಾಸ್ಟಿಕ್‌ನಿಂದ ಇಂಧನ ತಯಾರಿಸಲು ಸಂಶೋಧನೆ ನಡೆದಿದೆ. ವಿನೂನತ ಪ್ರಯೋಗದ ವಿವರ ಇಲ್ಲಿದೆ.
ಲಂಡನ್(ಸೆ.05): ಪೆಟ್ರೋಲ್-ಡೇಸೆಲ್ ಬೆಲೆ ಗಗನಕ್ಕೇರುತ್ತಿದೆ. ಇಂಧನಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕಲ್ ಕಾರು, ಬೈಕ್‌ಗಳು ಇದೀಗ ಮಾರುಕಟ್ಟೆ ಪ್ರವೇಶಿಸುತ್ತಿದೆ. ಆದರೆ ಈಗಾಗಲೇ ವಾಹನ ಖರೀದಿಸಿದವರು ಪಾಡೇನು? ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣ ವೆಚ್ಚ ದುಪ್ಪಟ್ಟಾಗಿದೆ. ಇದಕ್ಕೆಲ್ಲ ಶೀಘ್ರದಲ್ಲೇ ಪರಿಹಾರ ಸಿಗಲಿದೆ.
ಲಂಡನ್‌ನ ಸ್ವಾನ್ಸಿ ಯುನಿವರ್ಸಿಟಿಯಲ್ಲಿ ನಡೆಸಿದ ಸಂಶೋಧನೆಯಲ್ಲಿ ಪೆಟ್ರೋಲ್ -ಡೀಸೆಲ್‌ಗೆ ಪರ್ಯಾಯ ಇಂಧನ ಕಂಡುಹಿಡಿಯಲಾಗಿದೆ. ತ್ಯಾಜ್ಯ ಪ್ಲಾಸ್ಟಿಕ್‌ನಿಂದ ಇದೀಗ ಹೈಡ್ರೋಜನ್ ಇಂಧನ ತಯಾರಿಸಬುದು ಎಂದು ಸಂಶೋಧಕರು ಹೇಳಿದ್ದಾರೆ. ಈ ಹೈಡ್ರೋಜನ್ ಇಂಧನವನ್ನ ವಾಹನಗಳಿಗೆ ಬಳಸಬಹುದು ಎಂದಿದ್ದಾರೆ.
ತ್ಯಾಜ್ಯ ಪ್ಲಾಸ್ಟಿಕ್ ಮರುಬಳಕೆ ಮಾಡಿ, ಇದನ್ನ ಪರಿಷ್ಕರಿಸಿ ಹೈಡ್ರೋಜನ್ ಇಂಧನ ತಯಾರಿಸುವುದು ಸುಲಭ ಎಂದಿದ್ದಾರೆ. ಇಷ್ಟೇ ಅಲ್ಲ ಇದರ ಬೆಲೆಯೂ ಹೆಚ್ಚಿಲ್ಲ ಎಂದಿದ್ದಾರೆ. ಹೀಗೆ ತಯಾರಿಸಲಾದ ಹೈಡ್ರೋಜನ್ ಇಂಧನವನ್ನ ವಾಹನಗಳಿಗೆ ಉಪಯೋಗಿಸಬಹುದು ಎಂದಿದ್ದಾರೆ.
ಇಂಧನವಾಗಿ ಉಪಯೋಗಿಸಲ್ಪಡುವ ತ್ಯಾಜ್ಯ ಪ್ಲಾಸ್ಟಿಕ್‌ಗಳನ್ನ ತೊಳೆದು ಶುದ್ದಿ ಮಾಡುವ ಅಗತ್ಯವೂ ಇಲ್ಲ. ಇಷ್ಟೇ ಅಲ್ಲ ಯಾವುದೇ ಪ್ಲಾಸ್ಟಿಕ್ ಪರಿಷ್ಕರಿಸಿ ಹೈಡ್ರೋಜನ್ ಇಂಧನ ತಯಾರಿಸಲು ಸಾಧ್ಯವಿದೆ ಎಂದು ಸ್ವಾನ್ಸಿ ಯುನಿವರ್ಸಿಟಿ ಸಂಶೋಧಕ ಮೊರಿಟ್ಜ್ ಕ್ಯುಹೆನೆಲ್ ಹೇಳಿದ್ದಾರೆ.
ಪ್ಲಾಸ್ಟಿಕ್ ಇಂಧನ ಸಂಶೋಧನೆ ಇದೀಗ ಅಂತಿಮ ಘಟ್ಟದಲ್ಲಿದೆ. ಪ್ರಾಯೋಗಿಕವಾಗಿ ಪರೀಕ್ಷೆಗಳು ನಡೆಸಬೇಕಿದೆ. ಇನ್ನು ಕೆಲ ವರ್ಷಗಳಲ್ಲಿ ಸಂಶೋಧನೆ ಪೂರ್ಣವಾಗಲಿದೆ ಎಂದಿದ್ದಾರೆ.
