ಫೇಸ್ ಬುಕ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ

First Published 19, May 2018, 1:53 PM IST
Socially responsible funds dump or rethink Facebook over data privacy
Highlights

ಫೇಸ್ ಬುಕ್ ನಿಂದ ಅನೇಕರ ಖಾಸಗಿ ಡಾಟಾ ಸೊರಿಕೆಯಾದ ಹಿನ್ನೆಲೆಯಲ್ಲಿ ಇದೀಗ ಫೇಸ್ ಬುಕ್ ನ ಶೇರುಗಳನ್ನು ಅನೇಕ ಕಂಪನಿಗಳು ಹಿಂಪಡೆಯಲು ನಿರ್ಧಾರ ಮಾಡಿವೆ. ಇದರಿಂದ  ಮಾರ್ಕ್ ಜುಕರ್ ಬರ್ಗ್ ನೇತೃತ್ವದ ಫೇಸ್ ಬುಕ್ ಗೆ ಮತ್ತೊಮ್ಮೆ ಹಿನ್ನಡೆ ಎದುರಾದಂತಾಗಿದೆ.

ವಾಷಿಂಗ್ಟನ್ [ಮೇ 19] : ಫೇಸ್ ಬುಕ್ ನಿಂದ ಅನೇಕರ ಖಾಸಗಿ ಡಾಟಾ ಸೊರಿಕೆಯಾದ ಹಿನ್ನೆಲೆಯಲ್ಲಿ ಇದೀಗ ಫೇಸ್ ಬುಕ್‌ನಲ್ಲಿ ಹೂಡಿಕೆ ಮಾಡಿದ ತಮ್ಮ ಶೇರುಗಳನ್ನು ಅನೇಕ ಕಂಪನಿಗಳು ಹಿಂಪಡೆಯಲು ನಿರ್ಧಾರ ಮಾಡಿವೆ. ಇದರಿಂದ ಇದೀಗ ಫೇಸ್‌ಬುಕ್ ಗೆ ಮತ್ತೊಮ್ಮೆ ಹಿನ್ನಡೆ ಎದುರಾದಂತಾಗಿದೆ.  

ತಮ್ಮ ಕಂಪನಿಗಳ ಸುರಕ್ಷಿತತೆಯ ದೃಷ್ಟಿಯಿಂದ  ತಮ್ಮ ಶೇರುಗಳನ್ನು ವಾಪಸ್ ಪಡೆಯಲು ತೀರ್ಮಾನಿಸಿವೆ. ಅಲ್ಲದೇ  ಫೇಸ್‌ಬುಕ್ ಯಾವುದೇ ರೀತಿಯಾದ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿವೆ. 

2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆದ ಸಂದರ್ಭದಲ್ಲಿ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ ಜನರ ಫೇಸ್‌ಬುಕ್ ಡಾಟಾಗಳನ್ನು ಬಳಸಿಕೊಂಡು ಚುನಾವಣೆ ಮೇಲೆ ಪ್ರಭಾವ ಬೀರಿತ್ತು ಎನ್ನುವ ಆರೋಪವಿದೆ.  ಇದೀಗ ಫೇಸ್‌ಬುಕ್ ಜನರ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಾಡಲಿಲ್ಲ ಎಂದು ಕಂಪನಿಗಳು ಈ ತೀರ್ಮಾನ ಕೈಗೊಂಡಿವೆ.  

ದಿವಾಳಿಯತ್ತ ಕೆಂಬ್ರಿಜ್ ಅನಾಲಿಟಿಕಾ :  ಕೇಂಬ್ರಿಜ್ ಅನಾಲಿಟಿಕಾ ಕಂಪನಿ ಅಮೆರಿಕದ ಕೋರ್ಟ್‌ನಲ್ಲಿ ದಿವಾಳಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದೆ. ಕಳೆದ ತಿಂಗಳೇ ಕಂಪನಿಯು ತನ್ನ ವ್ಯವಹಾರವನ್ನು ಜಗತ್ತಿನಾದ್ಯಂತ ನಿಲ್ಲಿಸುವುದಾಗಿಯೂ, ಹೇಳಿತ್ತು. ಅದರಂತೆ ಈಗ ಅಮೆರಿಕದಲ್ಲಿ ದಿವಾಳಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಕೆ ಮಾಡಿದೆ. 

loader