ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್: ಸ್ಯಾಮ್‌ಸಂಗ್‌ನಿಂದ ಟ್ರೈ-ಫೋಲ್ಡ್ ಫೋನ್!

ಟ್ರಿಪಲ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಕೂಡ ಸ್ಪರ್ಧೆಗೆ ಇಳಿಯಲಿದೆ. ಆದರೆ, ಮೊಬೈಲ್ ಪ್ರಿಯರು ಈ ಫೋನಿಗಾಗಿ ಸ್ವಲ್ಪ ದಿನಗಳು ಕಾಯಬೇಕಾಗುತ್ತದೆ.

Samsung Tri Fold Smartphone Launch Delayed to 2026 sat

ಮೊಬೈಲ್ ವರ್ಲ್ಡ್: ಇದೀಗ ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಹುವಾವೇ (Huawei) ಮಾತ್ರ ಈಗ ಟ್ರೈ-ಫೋಲ್ಡ್ ಸ್ಮಾರ್ಟ್‌ಫೋನ್ ಹೊಂದಿದೆ. ಆದರೆ, ಇದೀಗ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌ ಕೂಡ ಟ್ರಿಪಲ್-ಫೋಲ್ಡಬಲ್ ಮೊಬೈಲ್ ಫೋನ್ ಮಾರುಕಟ್ಟೆಗೆ ಬಿಡಲು ಮುಂದಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಪ್ರಮುಖ ಸ್ಥಾನದಲ್ಲಿದೆ. ಆದರೆ, ವಿಶ್ವದ ಮೊದಲ ಟ್ರೈ-ಫೋಲ್ಡ್ ಫೋಲ್ಡಬಲ್ (ಮೂರು ಬಾರಿ ಮಡಚಬಹುದಾದ) ಫೋನ್‌ನೊಂದಿಗೆ ಹುವಾವೇ ಎಲ್ಲರನ್ನೂ ಅಚ್ಚರಿಗೊಳಿಸಿತು. ಹುವಾವೇನ ಟ್ರೈ-ಫೋಲ್ಡ್ ಮೇಟ್ ಎಕ್ಸ್‌ಟಿ ಅಲ್ಟಿಮೇಟ್‌ಗೆ ಪ್ರತಿ ಸ್ಪರ್ಧಿಯಾಗಿ ಸ್ಯಾಮ್‌ಸಂಗ್ ಕಂಪನಿ ಕೂಡ ತ್ರಿಬಲ್ ಫೋಲ್ಡೆಬಲ್ ಸ್ಮಾರ್ಟ್‌ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಆದರೆ, ಮೊಬೈಲ್ ಪ್ರಿಯರು ಈ ಸ್ಮಾರ್ಟ್‌ ಫೋನಿಗಾಗಿ 2026 ರವರೆಗೆ ಕಾಯಬೇಕಾಗುತ್ತದೆ ಎಂದು ಹೊಸ ವರದಿ ಹೇಳುತ್ತದೆ. ಮೂರು ಪರದೆಗಳನ್ನು ಹೊಂದಿರುವ ಸ್ಯಾಮ್‌ಸಂಗ್ ಫೋನಿನ ಬಗ್ಗೆ ವಿಶ್ಲೇಷಕ ರಾಸ್ ಯಂಗ್ ಅವರು ಕೆಲವೊಂದು ವಿಶೇಷ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಈ ಹಿಂದೆ ಸ್ಯಾಮ್‌ಸಂಗ್ ಕಂಪನಿಯ ಟ್ರೈ-ಫೋಲ್ಡ್ ಸ್ಮಾರ್ಟ್ ಫೋನ್ 2025 ರಲ್ಲಿ ಬಿಡುಗಡೆಯಾಗಲಿದೆ ಎಂದು ಹಿಂದಿನ ವರದಿಗಳು ಹೇಳಿದ್ದವು. ಆದರೆ, ಇದೀಗ ಗುಣಮಟ್ಟ ಫೋನ್ ಸಭಿವೃದ್ಧಿ ಮಾಡುತತಿರುವುದರಿಂದ ಕೆಲವು ತಾಂತ್ರಿಕ ಗುಣಮಟ್ಟದ ಪರೀಕ್ಷೆಗಳನ್ನು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಟ್ರೈ ಫೋಲ್ಟ್ ಸ್ಮಾರ್ಟ್ ಫೋನ್ ಅನ್ನು 2026ಕ್ಕೆ ಲಾಂಚ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 

ಇನ್ನು ವಿಶ್ವದ ಮೊದಲ ಟ್ರಿಪಲ್-ಸ್ಕ್ರೀನ್ ಫೋಲ್ಡಬಲ್ ಎಂಬ ಹೆಗ್ಗಳಿಕೆಯೊಂದಿಗೆ ಹುವಾವೇ ಮೇಟ್ ಎಕ್ಸ್‌ಟಿ ಅಲ್ಟಿಮೇಟ್ 2024 ರ ಸೆಪ್ಟೆಂಬರ್ 9 ರಂದು ಬಿಡುಗಡೆಯಾಯಿತು. ಚೀನಾದಲ್ಲಿ 19,999 ಯುವಾನ್‌ಗೆ (2,35,109.78 ಭಾರತೀಯ ರೂಪಾಯಿ) ಈ ಫೋನಿನ ಬೆಲೆ ಆರಂಭವಾಗುತ್ತದೆ. ಈ ದುಬಾರಿ ಬೆಲೆಯ ಹೊರತಾಗಿಯೂ, ಈ ಸ್ಮಾರ್ಟ್‌ ಫೋನ್‌ಗೆ ಭಾರಿ ಪ್ರಮಾಣದಲ್ಲಿ ಪ್ರಿ-ಬುಕಿಂಗ್‌ಗಳು ಬಂದಿವೆ. ಮೂರು ದಿನಗಳಲ್ಲಿ ಬರೋಬ್ಬರಿ 40 ಲಕ್ಷಕ್ಕೂ ಹೆಚ್ಚು ಪ್ರಿ-ಬುಕಿಂಗ್‌ಗಳು ಬಂದಿದ್ದವು.

ಹುವಾವೇ ಮೇಟ್ ಎಕ್ಸ್‌ಟಿ ಅಲ್ಟಿಮೇಟ್‌ನ ಇತರ ವೈಶಿಷ್ಟ್ಯಗಳು:

  • ಮೂರು ಪರದೆಗಳನ್ನು ಹೊಂದಿದೆ.
  • 50 ಎಂಪಿ ಮುಖ್ಯ ಕ್ಯಾಮೆರಾ.
  • 12 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ 5.5x ಆಪ್ಟಿಕಲ್ ಜೂಮ್‌ನೊಂದಿಗೆ 12 ಎಂಪಿ ಟೆಲಿಫೋಟೋ ಲೆನ್ಸ್ ಹೊಂದಿದೆ.
  • 8 ಎಂಪಿ ಸೆಲ್ಫಿ ಕ್ಯಾಮೆರಾ ಇದೆ.
  • 5,600 mAh ಬ್ಯಾಟರಿ ಒಳಗೊಂಡಿದೆ.
  • 6 ವ್ಯಾಟ್ಸ್ ಫಾಸ್ಟ್ ವೈರ್ಡ್ ಚಾರ್ಜರ್.
  • 50 ವ್ಯಾಟ್ಸ್ ವೈರ್‌ಲೆಸ್ ಚಾರ್ಜರ್.
Latest Videos
Follow Us:
Download App:
  • android
  • ios