ನೂತನ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್9,ಪ್ಲಸ್ ಕೊಂಡರೆ ಕ್ಯಾಶ್ ಬ್ಯಾಕ್, ನೂರಾರು ಜಿಬಿ ಡಾಟಾ ಆಫರ್

First Published 6, Mar 2018, 6:21 PM IST
Samsung Galaxy S9 Double Data offer and more
Highlights

ಈ ಫೋನ್ ಮಿಡ್'ನೈಟ್ ಬ್ಲ್ಯಾಕ್, ಕೋರಲ್ ಬ್ಲೂ ಹಾಗೂ ಲಿಲಾಕ್ ಪರ್ಪಲ್ ಕಲರ್'ಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಎಸ್9 ಪ್ಲಸ್ ಮೊಬೈಲ್  ರಿಲಯನ್ಸ್ ಡಿಜಿಟಲ್, ಸ್ಯಾಮ್ಸಂಗ್ ಮಳಿಗೆಗಳಲ್ಲಿ ಕೂಡ ದೊರೆಯಲಿದೆ.

ಮುಂಬೈ(ಮಾ.06): ಸ್ಯಾಮ್ಸಂಗ್ ಕಂಪನಿ ಭಾರತದಲ್ಲಿ ಗ್ಯಾಲಕ್ಸಿ ಎಸ್9, ಎಸ್9ಪ್ಲಸ್ ಬಿಡುಗಡೆಗೊಳಿಸಿದ್ದು ಈ ಮೊಬೈಲ್'ಅನ್ನು ಖರೀದಿಸಿದರೆ ಕ್ಯಾಶ್'ಬ್ಯಾಕ್ ಆಫರ್'ನೊಂದಿಗೆ ನುರಾರು ಜಿಬಿ ಡಾಟಾ ಆಫರ್ ಕೂಡ ದೊರೆಯಲಿದೆ.

ಮಾರುಕಟ್ಟೆಗೆ ಮಾರ್ಚ್ 16ರಂದು ಮಾರಾಟಕ್ಕೆ ಲಭ್ಯವಿದ್ದು ಕಂಪನಿಯು ಏರ್'ಟೆಲ್, ಹೆಚ್'ಡಿಎಫ್'ಸಿ ಬ್ಯಾಂಕ್, ಪೇಟಿಂ ಮಾಲ್, ಇತರೆ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಬೆಲೆ, ಲಭ್ಯವಿರುವ ಸ್ಥಳಗಳು

ಎಸ್ 9 ಬೆಲೆ 57,900(64 ಜಿಬಿ) ಹಾಗೂ 65,900(256ಜಿಬಿ), ಎಸ್9 ಪ್ಲಸ್ 64,900(64ಜಿಬಿ), 72,900(256ಜಿಬಿ). ಈ ಮೊಬೈಲ್'ಗಳು ಇಸ್ಟೋರ್, ಪ್ಲಿಪ್'ಕಾರ್ಟ್ ಹಾಗೂ ಆಯ್ದ ಮಳಿಗೆಗಳಲ್ಲಿ ದೊರೆಯಲಿದೆ. ಈ ಫೋನ್ ಮಿಡ್'ನೈಟ್ ಬ್ಲ್ಯಾಕ್, ಕೋರಲ್ ಬ್ಲೂ ಹಾಗೂ ಲಿಲಾಕ್ ಪರ್ಪಲ್ ಕಲರ್'ಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಎಸ್9 ಪ್ಲಸ್ ಮೊಬೈಲ್  ರಿಲಯನ್ಸ್ ಡಿಜಿಟಲ್, ಸ್ಯಾಮ್ಸಂಗ್ ಮಳಿಗೆಗಳಲ್ಲಿ ಕೂಡ ದೊರೆಯಲಿದೆ.

ಕ್ಯಾಶ್ ಬ್ಯಾಕ್ ಆಫರ್

ಪೇಟೆಂ ಮಾಲ್'ಗಳಲ್ಲಿ ಎಸ್9, ಎಸ್9 ಪ್ಲಸ್ ಕ್ಯೂಆರ್ ಕೋಡ್'ಗಳಲ್ಲಿ 6 ಸಾವಿರ ಕ್ಯಾಶ್'ಬ್ಯಾಕ್ ಆಫರ್ ಇದೆ. ಹೆಚ್'ಡಿಎಫ್'ಸಿ ಬ್ಯಾಂಕ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್'ಗಳಲ್ಲಿ ಇಎಂಐ'ಗೆ ಯಾವುದೇ ಬಡ್ಡಿ ದರ ವಿಧಿಸಲಾಗುವುದಿಲ್ಲ.

ಡಾಟಾ ಆಫರ್

ಎಸ್9 ಹಾಗೂ ಎಸ್9 ಪ್ಲಸ್ ಮೊಬೈಲ್ ಖರೀದಿಸಿದರೆ 499 ರೂ.ಪ್ಲ್ಯಾನ್'ನಲ್ಲಿ 80 ಜಿಬಿ ಡಾಟಾ, ಅನಿಯಮಿತ ಕರೆ ಸೇರಿದಂತೆ ಹಲವು ಸೌಲಭ್ಯಗಳು ದೊರಯಲಿದೆ. ಅದೇ ರೀತಿ 799 ರೂಗೆ 120 ಜಿಬಿ ಅನಿಯಮಿತ ಕರೆ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗಲಿದೆ. ಹಾಗೆಯೇ 199 ರೂ.ಗೆ ನಿತ್ಯ 1.4 ಜಿಬಿ ಡಾಟಾ ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿದೆ. ಮೊಬೈಲ್ ಕೊಂಡರೆ ಜಿಯೋದಲ್ಲಿ 4999 ರೂ.ಆಫರ್'ಗೆ ನಿತ್ಯ ಹಲವು ಸೌಲಭ್ಯಗಳೊಂದಿಗೆ ನಿತ್ಯ ಒಂದು 4ಜಿಬಿ ಡಾಟಾ ಒಂದು ವರ್ಷದವರೆಗೂ ದೊರೆಯಲಿದೆ.

loader