ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಬಿಎಸ್ ಬೈಕ್ ಬಿಡುಗಡೆ

First Published 7, Sep 2018, 10:02 PM IST
Royal Enfield Himalayan ABS Launched In India
Highlights

ರಾಯಲ್ ಎನ್‌ಫೀಲ್ಡ್ ಬೈಕ್ ಇದೀಗ ಎಬಿಎಸ್ ತಂತ್ರಜ್ಞಾನ ಅಳವಡಿಸಿದ 2ನೇ ಬೈಕ್ ಬಿಡುಗಡೆ ಮಾಡಿದೆ. ಕ್ಲಾಸಿಕ್ ಸಿಗ್ನಲ್ಸ್ ಬೈಕ್ ಬಳಿಕ ಇದೀಗ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಕೂಡ ಎಬಿಎಸ್ ತಂತ್ರಜ್ಞಾನ ಹೊಂದಿದೆ. ಈ ನೂತನ ಬೈಕ್ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.
 

ಬೆಂಗಳೂರು(ಸೆ.07): ರಾಯಲ್ ಎನ್‌ಫೀಲ್ಡ್ ಇದೀಗ ನೂತನ ಹಿಮಾಲಯನ್ ಬೈಕ್ ಬಿಡುಗಡೆ ಮಾಡಿದೆ. ಎಬಿಎಎಸ್( ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್) ಟೆಕ್ನಾಲಜಿ ಹೊಂದಿರುವ ನೂತನ ಹಿಮಾಲಯನ್ ಎಬಿಎಸ್ ಬೈಕ್ ಸವಾರರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿದೆ.

ರಾಯನ್ ಎನ್‌ಫೀಲ್ಡ್ ಕ್ಲಾಸಿಕ್ ಸಿಗ್ನಲ್ಸ್ ಬೈಕ್ ಎಬಿಎಸ್ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿತ್ತು. ಇದೀಗ ಹಿಮಾಲಯನ್ ಕೂಡ ಎಬಿಎಸ್ ಟೆಕ್ನಾಲಜಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಹಿಮಾಲಯನ್ ಎಬಿಎಸ್ ಬೈಕ್ ಬೆಲೆ 1.79 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಎಬಿಎಸ್ ಇಲ್ಲದ ಹಿಮಾಲಯನ್ ಬೈಕ್‌ಗಿಂತ ನೂತನ ಎಬಿಎಸ್ ಹೊಂದಿರುವ ಹಿಮಾಲಯನ್ ಬೈಕ್‌ಗೆ 11,000 ರೂಪಾಯಿ ಹೆಚ್ಚಳವಾಗಿದೆ. ಇನ್ನು ನೂತನ ಹಿಮಾನಲಯನ್ ಸ್ಲೀಟ್ ವೇರಿಯೆಂಟ್ ಬೈಕ್‌ಗೆ 1.80 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ನೂತನ ಹಿಮಾಲಯನ್ ಬೈಕ್ 411 ಸಿಸಿ ಇಂಜಿನ್ ಹೊಂದಿದೆ. ಸಿಂಗಲ್ ಸಿಲಿಂಡರ್ ಹಾಗೂ ಏರ್ ಕೂಲ್ ಇಂಜಿನ್ ಹೊಂದಿರುವ ಹಿಮಾಲಯನ್ 24 ಬಿಹೆಚ್‌ಪಿ ಹಾಗೂ 23 ಎನ್ಎಂ ಟಾರ್ಕ್ಯೂ ಉತ್ವಾದಿಸಲಿದೆ.

ಇಂಜಿನ್, ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸದಾಗಿ ಎಬಿಎಸ್ ಅಳವಡಿಸೋ ಮೂಲಕ ರಾಯಲ್ ಎನ್‌ಫೀಲ್ಡ್ ಇತರ ಸ್ಪೋರ್ಟ್ಸ್ ಬೈಕ್‌ಗಳಿಗೆ ಪೈಪೋಟಿ ನೀಡಲು ರೆಡಿಯಾಗಿದೆ.

loader