ಮುಂಬೈ(ಸೆ.15): ರಾಯಲ್ ಎನ್‌ಫೀಲ್ಡ್ ಬೈಕ್ ಅಂದರೆ ಎಲ್ಲರಿಗೂ ಇಷ್ಟ. ಸದ್ಯ ಭಾರತದಲ್ಲಿ ಗರಿಷ್ಠ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಕಾಣಸಿಗುತ್ತವೆ. ಇದೀಗ ಹೊಸ ಬೈಕ್ ಖರೀದಿಸಿ ಅದನ್ನ ಕಸ್ಟಮೈಸ್ ಮಾಡಿ ರೋಡಿಗಿಳಿಸುತ್ತಿದ್ದಾರೆ.

ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಕಸ್ಟಮೈಸಡ್ ಡೀಲರ್ ಮುಂಬೈನ ಹಲ್ದಂಕರ್ ಕಸ್ಟಂಸ್ ಇದೀಗ ರಾಯಲ್ ಕ್ಲಾಸಿಕ್ 350 ಬೈಕನ್ನ ಕಸ್ಟಮೈಸ್ ಮಾಡಿ ಬುರಾಕ್ ಕ್ರೂಸರ್ ಅನ್ನೋ ಹೆಸರಿನ ಮೂಲಕ ಬಿಡುಗಡೆ ಮಾಡಿದೆ.

ಇಂಜಿನ್ ಹಾಗೂ ಫ್ರೇಮ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆಕರ್ಷಣೆ ತಕ್ಕಂತೆ ಬೈಕ್ ಚಕ್ರಗಳನ್ನ ಬದಲಿಸಲಾಗಿದೆ. ಇಂಧನ ಟ್ಯಾಂಕ್ ವಿನ್ಯಾಸ ಹಾಗೂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

ವಿಶೇಷ ಅಂದರೆ ಬ್ಲೂಟೂಥ್ ಹಾಗೂ ಸ್ಪೀಕರ್ ಕೂಡ ಅಳವಡಿಸಲಾಗಿದೆ. ಜೊತೆಗೆ ಇದರ ವಿನ್ಯಾಸ ದೂರ ಪ್ರಯಾಣಕ್ಕೆ ಅನೂಕಲಕರ ಮಾಡಿದೆ. ಬುರಾಕ್ ಕ್ರೂಸರ್ ಬೈಕ್‌ನಲ್ಲಿ ಪ್ರಯಾಣ ಮಾಡಿದರೆ ಅಯಾಸವಾಗುವುದಿಲ್ಲ ಎಂದು ಹಲ್ದಂಕರ್ ಕಸ್ಟಂಸ್ ಹೇಳಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲ್ದಂಕರ್ ಕಸ್ಟಂಸ್ ಬೈಕ್‌ಗಳ ಕಸ್ಟಮೈಸ್ ಮಾಡಿಕೊಡುತ್ತೆ. ಇದೀಗ ರಾಯಲ್ ಎನ್‌ಫೀಲ್ಡ್ 350 ಕ್ಲಾಸಿಕ್ ಬೈಕ್ ಕೂಡ ಇದೇ ರೀತಿ ಕಸ್ಟಮೈಸ್ ಮಾಡಲಾಗಿದೆ.