ಹೊಸ ಲುಕ್, ಆಕರ್ಷಣೀಯ ಕಲರ್, ಹಾಗು ಹೆಚ್ಚು ಬಲಿಷ್ಠ. ಹೀಗೆ ಹಲವು ವೈಶಿಷ್ಠಗಳನ್ನೊಳಗೊಂಡಿರುವ  ರಾಯಲ್ ಎನ್‌ಫೀಲ್ಡ್ ನೂತನ ಕ್ಲಾಸಿಕ್ 500 ಪೆಗಾಸಸ್ ಮೋಟರ್ ಬೈಕ್‌ ಭಾರತೀಯ ಮಾರುಕಟ್ಟೆ ಲಗ್ಗೆ ಇಡಲು ರೆಡಿಯಾಗಿದೆ.

ಬೆಂಗಳೂರು(ಮೇ.29):  ಭಾರತದ ಜನಪ್ರೀಯ ಮೋಟಾರ್ ಬೈಕ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಅಗ್ರಸ್ಥಾನದಲ್ಲಿದೆ. ಇದೀಗ ಯುವಕರ ನೆಚ್ಚಿನ ಬೈಕ್ ಆಗಿ ಗುರುತಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ನೂತನ ಬೈಕ್ ಮಾರುಕಟ್ಟೆಗೆ ಬಿಟ್ಟಿದೆ. ಇದುವೇ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್. ಎರಡನೇ ಮಹಾಯುದ್ದದಲ್ಲಿ ಹೋರಾಡಿದ ಬ್ರಿಟೀಷ್ ಯೋಧರಿಗೆ ಅರ್ಪಿಸಿರುವ ಈ ಪೆಗಾಸಸ್ ಎಡಿಶನ್ ಹಲವು ವಿಶೇಷತೆಗಳನ್ನ ಒಳಗೊಂಡಿದೆ.


 ನೂತನ ಕ್ಲಾಸಿಕ್ 500 ಪೆಗಾಸಸ್ ಎಡಿಶನ್ ಕೇವಲ 1000 ಬೈಕ್‌ಗಳನ್ನ ರಾಯಲ್ ಎನ್‌ಫೀಲ್ಡ್ ಉತ್ಪಾದಿಸಿದೆ. ಅದರಲ್ಲೂ ಭಾರತದಲ್ಲಿ ಕೇವಲ 250 ಬೈಕ್‌ಗಳನ್ನ ಮಾರಾಟ ಮಾಡಲು ರಾಯಲ್ ಎನ್‌ಫೀಲ್ಡ್ ನಿರ್ಧರಿಸಿದೆ.

ರಾಯಲ್ ಎನ್‌ಫೀಲ್ಡ್ ನೂತನ ಕ್ಲಾಸಿಕ್ 500 ಪೆಗಾಸಸ್ ಮೋಟರ್ ಬೈಕ್‌ ವಿಶೇಷತೆ:

  • ಎರಡನೇ ಮಹಾಯುದ್ಧದಲ್ಲಿ ಸಂದರ್ಭದಲ್ಲಿ ಬ್ರಿಟೀಷ್ ಸೈನಿಕರಿಗಾಗಿ ಬಳಸಲಾದ ರಾಯನ್ ಎನ್‌ಫೀಲ್ಡ್ WD/125 ಬೈಕ್‌ನಿಂದ ಸ್ಪೂರ್ತಿ ಪಡೆದು ನೂತನ ಪೆಗಾಸಸ್ ಬೈಕ್ ನಿರ್ಮಿಸಲಾಗಿದೆ.
  • ಪೆಗಾಸಸ್ ಬೈಕ್ ಟ್ಯಾಂಕ್ ಮೇಲೆ ಎರಡನೇ ಮಹಾಯುದ್ದದ ವೇಳೆ ಪ್ಯಾರಾಚೂಟ್ ರೆಜಿಮೆಂಟ್ ಸೈನಿಕರ ನಂಬರ್ ನಮೂದಿಸಲಾಗಿದೆ.
  • ಮಿಲಿಟರಿ ಶೈಲಿಯಲ್ಲಿ ನಿರ್ಮಿಸಿರುವ ಪೆಗಾಸಸ್ ಬೈಕ್ ಎರಡು ಬಣ್ಣಗಳಾದ ಕಂದು ಹಾಗು ಕಡು ಹಸಿರು ಬಣ್ಣಗಳಲ್ಲಿ ಲಭ್ಯವಿದೆ
  • ಹೆಡ್‌ಲ್ಯಾಂಪ್, ಹ್ಯಾಂಡಲ್ ಬಾರ್, ರಿಮ್, ಹಾಗು ಸೈಲೆನ್ಸರ್‌ಗಳಿಗೆ ಕಪ್ಪು ಬಣ್ಣ ನೀಡೋ ಮೂಲಕ ರೆಟ್ರೋ ಸ್ಟೈಲ್‌ನಲ್ಲಿ ತಯಾರಿಸಲಾಗಿದೆ.
  • 499 ಸಿಸಿ ಇಂಜಿನ್, ಸಿಂಗಲ್ ಸಿಲಿಂಡರ್, 27.2 ಬಿಹೆಚ್‌ಪಿ ಪವರ್ ಹಾಗೂ 5 ಗೇರ್‌ಗಳನ್ನ ಹೊಂದಿದೆ
  • ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಪೆಗಾಸಸ್ ಬೆಲೆ 2 ಲಕ್ಷ ರೂಪಾಯಿ (ಎಕ್ಸ್ ಶೋ ರೂಮ್)