ಬೆಂಗಳೂರು(ಮೇ.29):  ಭಾರತದ ಜನಪ್ರೀಯ ಮೋಟಾರ್ ಬೈಕ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಅಗ್ರಸ್ಥಾನದಲ್ಲಿದೆ.  ಯುವಕರ ನೆಚ್ಚಿನ ಬೈಕ್ ಆಗಿ ಗುರುತಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್, ನೂತನ ಬೈಕ್ ಪೆಗಾಸಸ್ ಕ್ಲಾಸಿಕ್ 500 ಬೈಕ್ ಬಿಡುಗಡೆ ಮಾಡಿ ಭಾರಿ ಸದ್ದು ಮಾಡಿತ್ತು. 

ಪೆಗಾಸಸ್ 500 ಕ್ಲಾಸಿಕ್ ಮಾಡೆಲ್ ಬಿಡುಗಡೆ ಮಾಡಿದ್ದ ರಾಯಲ್ ಎನ್‌ಫೀಲ್ಡ್ ಇದೀಗ ಪೆಗಾಸಸ್ ಕ್ಲಾಸಿಕ್ 350 ಮಾಡೆಲ್ ಬಿಡುಗಡೆ ಮಾಡುತ್ತಿದೆ.  ಎರಡನೇ ಮಹಾಯುದ್ದದಲ್ಲಿ ಹೋರಾಡಿದ ಬ್ರಿಟೀಷ್ ಯೋಧರಿಗೆ ಅರ್ಪಿಸಿರುವ ಈ ಪೆಗಾಸಸ್ ಎಡಿಶನ್ ಹಲವು ವಿಶೇಷತೆಗಳನ್ನ ಒಳಗೊಂಡಿದೆ.

ಕ್ಲಾಸಿಕ್ 500 ಪೆಗಾಸಸ್ ಎಡಿಶನ್ ಬೈಕ್  ಭಾರತದಲ್ಲಿ 250 ಹಾಗೂ ಇತರ ದೇಶಗಳಲ್ಲಿ ಒಟ್ಟು 1000 ಬೈಕ್ ಮಾರಾಟಕ್ಕೆ ಲಭ್ಯವಿತ್ತು. ಇದರಲ್ಲಿ ಬುಕ್ಕಿಂಗ್ ಅನೌನ್ಸ್ ಆಗಿದ್ದೇ ತಡ ಭಾರತದ 250 ಬೈಕ್‌ಗಳು ಕೇವಲ 178 ಸೆಕೆಂಡುಗಳಲ್ಲಿ ಮಾರಾಟವಾಗಿ ದಾಖಲೆ ಬರೆದದಿತ್ತು. 

ಭಾರಿ ಜನಮನ್ನಣೆ ಪಡೆದ ಪೆಗಾಸಸ್ 500 ಕ್ಲಾಸಿಕ್ ಬೈಕ್ ಇದೀಗ ಕ್ಲಾಸಿಕ್ 350 ಪೆಗಾಸಸ್ ವರ್ಶನ್ ಬಿಡುಗಡೆಯಾಗುತ್ತಿದೆ. ಇದು ಕೂಡ ನಿಗಧಿತ ಬೈಕ್‌ಗಳು ಮಾತ್ರ ಮಾರಾಟಕ್ಕೆ ಲಭ್ಯವಿದೆ.

ನೂತನ ಕ್ಲಾಸಿಕ್ 350 ಪೆಗಾಸಸ್ ಬೈಕ್ ಬೆಲೆ 1.39 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಆದರೆ ಈ ಕ್ಲಾಸಿಕ್ 350 ಪೆಗಾಸಸ್ ಬೈಕ್ ಎಬಿಎಸ್ ಸೌಲಭ್ಯ ಹೊಂದಿರುವುದಿಲ್ಲ. ಆಗಸ್ಟ್ 28 ರಂದು ಈ ನೂತನ ಬೈಕ್ ಭಾರತದಲ್ಲಿ ಬಿಡುಗಡೆಗೊಳ್ಳಲಿದೆ.