ನವದೆಹಲಿ(ಸೆ.27): ವಿದೇಶದಲ್ಲಿ ಕಾರಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರೆ, ಭಾರತದಲ್ಲಿ ಮೈಲೇಜ್ ಹಾಗೂ ಕಡಿಮೆ ಬೆಲೆಗೆ ಮೊದಲ ಆದ್ಯತೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಕಾರು ಸುರಕ್ಷತೆಗೆ ಪ್ರಾಮುಖ್ಯತೆ ನೀಡಿದೆ. ಇಷ್ಟೇ ಅಲ್ಲ ಕಾರು ಮಾರಾಟಕ್ಕೂ ಮುನ್ನ ಕಾರಿನ ಸುರಕ್ಷತಾ ಫಲಿತಾಂಶದ ಕುರಿತು ಮಾಹಿತಿ ನೀಡಬೇಕು.

ಗ್ಲೋಬಲ್ NCAP ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಭಾರತದ ಹಲವು ಕಾರುಗಳು ಸಾಧರಣ ಅಂಕ ಪಡೆದಿದೆ. ಇತ್ತೀಚೆಗೆ ನಡೆದ ಗ್ಲೋಬಲ್ NCAP ಕಾರ್ ಕ್ರಾಶ್ ಟೆಸ್ಟ್‌ನಲ್ಲಿ ಫ್ರೆಂಚ್ ಕಾರು ತಯಾರಿಕಾ ರೆನಾಲ್ಟ್ ಸಂಸ್ಥೆಯ ಲಾಡ್ಜಿ ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಸಂಪೂರ್ಣ ವಿಫಲವಾಗಿದೆ.

ವಯಸ್ಕರ ಪ್ರಯಾಣ ಸುರಕ್ಷತಾ ಪರೀಕ್ಷೆಯಲ್ಲಿ ರೆನಾಲ್ಟ್ ಲಾಡ್ಜಿ ಶೂನ್ಯ ಸ್ಟಾರ್ ಪಡೆದಿದೆ. ಮಕ್ಕಳ ಪ್ರಯಾಣ ಸುರಕ್ಷತೆ ಟೆಸ್ಟ್‌ನಲ್ಲಿ 2 ಸ್ಟಾರ್ ಪಡೆದಿದೆ. 0 ಸ್ಟಾರ್ ಪಡೆದ ರೆನಾಲ್ಟ್ ಲಾಡ್ಜಿ ಕಾರನ್ನ ಫ್ರಾನ್ಸ್‌ನಲ್ಲಿ ನಿಷೇಧಿಸಲಾಗಿದೆ. ಆದರೆ ಭಾರತದಲ್ಲಿ ಯಾವುದೇ ಅಡೆ ತಡೆ ಇಲ್ಲದೆ ಮಾರಾಟವಾಗುತ್ತಿದೆ.