Asianet Suvarna News Asianet Suvarna News

ರೂ.500ರಲ್ಲಿ ಜಿಯೋ ಫೋನ್: ತಿಳಿದಿರಬೇಕಾದ 7 ವಿಷಯಗಳು

ರಿಲಾಯನ್ಸ್ ಜಿಯೋ ಬಹುನಿರೀಕ್ಷಿತ ಫೀಚರ್ ಫೋನ್ 4G VoLTEನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಹುಟ್ಟಿಸಲಿರುವ  ಫೋನ್ ಬಗ್ಗೆ ಮಾಹಿತಿ ಇಲ್ಲಿದೆ.

Reliance Jio set to announce Rs 500 phone 7 things to know
  • ಇದೇ ಬರುವ ಜು. 21ರಂದು ನಡೆಯಲಿರುವ ರಿಲಾಯನ್ಸ್’ನ ವಾರ್ಷಿಕ ಸಾಮಾನ್ಯ ಸಭೆ (AGM)ಯಲ್ಲಿ ಈ ಫೋನ್ ಬಿಡುಗಡೆಯ ಘೋಷಣೆಯಾಗುವ ಸಾಧ್ಯತೆಯಿದೆ

  • ಜುಲೈ ಅಂತ್ಯ ಹಾಗೂ ಆಗಸ್ಟ್ ಆರಂಭದ ವಾರಗಳಲ್ಲಿ ಫೋನ್’ಗಳ ರವಾನೆ/ಸಾಗಾಟ ಮಾಡಲಾಗುವುದು. ಆಗಸ್ಟ್ 15, ಸ್ವಾತಂತ್ರ್ಯ ದಿನದಂದು ದೇಶದಲ್ಲೆಡೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

  • ಈ ಫೋನ್’ಗಳಿಗೆ ಪ್ರೊಸೆಸರ್’ಗಳನ್ನು ಶಾಂಘೈಯಲ್ಲಿರುವ ಸ್ಪ್ರೆಡ್’ಟ್ರಮ್ ಕಮ್ಯೂನಿಕೇಶನ್ಸ್ ಕಂಪನಿಯು ತಯಾರಿಸಿದೆ. ಕಳೆದ 2 ವರ್ಷಗಳಿಂದ ರಿಲಾಯನ್ಸ್’ಗೆ ತಂತ್ರಜ್ಞಾನವನ್ನು ಒದಗಿಸುತ್ತಿರುವಈ ಕಂಪನಿ ಚಿಪ್ ನಿರ್ಮಾಣ ಕ್ಷೇತ್ರದಲ್ಲಿ ದೈತ್ಯ ಕಂಪನಿಗಳಾದಮೀಡಿಯಾ ಟೆಕ್ ಹಾಗೂ ಕಾಲ್ಕಾಮ್ ಕಂಪನಿಗಳಿಗೂ ಪೈಪೋಟಿ ನೀಡುತ್ತಿದೆ. ರಿಲಾಯನ್ಸ್’ನ LYF Flame 5 ಸ್ಮಾರ್ಟ್ ಫೋನ್’ಗಳಿಗೂ ಇದೇ ಕಂಪನಿಯು ತಂತ್ರಜ್ಞಾನ ಒದಗಿಸಿತ್ತು.

  • ಬಿಡುಗಡೆಯಾಗಲಿರುವ ಫೋನ್’ಗಳ ತಯಾರಿಕ ವೆಚ್ಚ ಹೆಚ್ಚಿದ್ದು, ಕಂಪನಿಯು ರೂ. 650- 975ವರೆಗೆ ಕಡಿತ ಮಾಡುತ್ತಿದೆ ಎನ್ನಲಾಗಿದೆ.

  • ಜಿಯೋ ಈಗಾಗಲೇ ರೂ.150/ ಪ್ರತಿ ತಿಂಗಳು ಪ್ಲಾನ್’ಗಳನ್ನು ಹೊಂದಿದ್ದು, ರೂ. 80-90ರ ಪ್ಲಾನ್’ಗಳನ್ನು ಬಿಡುಗಡೆ ಮಾಡುವ ಯೋಜನೆ ಇದೆಯೆಂದು ಹೇಳಲಾಗುತ್ತಿದೆ.

  • ಏಪ್ರಿಲ್ 2017ರ ಕೊನೆಗೆ ಜಿಯೋ 112.55 ಮಿಲಿಯನ್ ಚಂದಾದಾರರನ್ನು ಹೊಂದಿತ್ತು. ಹೊಸ ಫೋನ್ ಬಿಡುಗಡೆಯಿಣಂದ ಅದಿನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.

  • ದೇಶದಲ್ಲಿ 4G VoLTE ನೆಟ್ವರ್ಕ್ ಹೊಂದಿದ ಏಕೈಕ ಕಂಪನಿ ರಿಲಾಯನ್ಸ್ ಜಿಯೋ ಆಗಿದೆ.

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios