ಜಿಯೋದಿಂದ ಸೂಪರ್ ಹೊಸ ಆಫರ್

Reliance Jio offers JioFi Exchange Offer for Rs 999 with cashback
Highlights

ಹಳೆಯ ಡಿವೈಸ್ ನೀಡಿದ್ದಕ್ಕೆ ಪ್ರತಿಯಾಗಿ ಗ್ರಾಹಕರು ತಮ್ಮ ಮೈಜಿಯೋ ಖಾತೆಯಲ್ಲಿ 2200 ರೂ. ಮೌಲ್ಯದ ಕ್ಯಾಶ್ ಬ್ಯಾಕ್ ವೋಚರ್ ಪಡೆಯಲಿದ್ದಾರೆ. ಈ ಕ್ಯಾಶ್ ಬ್ಯಾಕ್  50 ರೂ.ಗಳ 44 ವೋಚರ್'ಗಳ ರೂಪದಲ್ಲಿರಲಿದೆ. ಇದು ಮೈ ಜಿಯೋ ಖಾತೆಯಲ್ಲಿ ಭವಿಷ್ಯದಲ್ಲಿ ನಡೆಸುವ 198 ರೂ. ಅಥವಾ 299 ರೂ.ಗಳ ರಿಚಾರ್ಜ್'ಗಳಿಗೆ ಮಾತ್ರ ಮಾನ್ಯವಾಗಿರುತ್ತದೆ.

ರಿಲಯನ್ಸ್  ಜಿಯೋ ಇದೀಗ ಜಿಯೋಫೈಗೆ ಹೊಸ ವಿನಿಮಯ ಆಫರ್ ಅನ್ನು ತಂದಿದೆ. ಗ್ರಾಹಕರು ತಮ್ಮ ಹಳೆಯ ಡಾಂಗಲ್ ಅಥವಾ ಹಳೆಯ ಮಾಡೆಮ್/ವೈಫೈ ರೂಟರ್  ಅನ್ನು ಹೊಸ ಜಿಯೋಫೈನೊಂದಿಗೆ 999 ರು.ಗೆ ವಿನಿಮಯ ಮಾಡಿಕೊಳ್ಳಬಹುದು. ಈ ಆಫರ್  ವಿನಿಮಯದಲ್ಲಿ 2200 ರು.ನ ವಿಶೇಷ ಕ್ಯಾಶ್ ಬ್ಯಾಕ್ ಪಡೆಯಬಹುದು. ಈ ಆಫರ್ ಜಿಯೋ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಹಳೆಯ ಜಿಯೋ ಮಾಡೆಮ್ ಅನ್ನು ನೀಡಿ 999 ರೂ.ಗೆ ಹೊಸ ಜಿಯೋಫೈ ಖರೀದಿಸಬಹು ದು. ಈ ಆಫರ್'ನಲ್ಲಿ 198 ರು. ಅಥವಾ 299 ರು.ನ ಮೊದಲ ರಿಚಾರ್ಜ್ ಹಾಗೂ ಜಿಯೋ ಪ್ರೈಮ್ ಸದಸ್ಯತ್ವದೊಂದಿಗೆ ಹೊಸ ಜಿಯೋ ಸಿಮ್ಅನ್ನು ಆಕ್ಟಿವೇಟ್ ಮಾಡಬೇಕಾಗುತ್ತದೆ.

ಹೊಸ ಜಿಯೋ ಸಿಮ್  ಆಕ್ಟಿವೇಟ್  ಆದ 15 ದಿನಗಳೊಳಗೆ ರಿಟೈಲರ್/ಮಳಿಗೆಗೆ ಹಳೆಯ ಡಾಂಗಲ್ ಅನ್ನು ಮರಳಿಸಬಹುದು. ಹಳೆಯ ಡಿವೈಸ್ ನೀಡಿದ್ದಕ್ಕೆ ಪ್ರತಿಯಾಗಿ ಗ್ರಾಹಕರು ತಮ್ಮ ಮೈಜಿಯೋ ಖಾತೆಯಲ್ಲಿ 2200 ರೂ. ಮೌಲ್ಯದ ಕ್ಯಾಶ್ ಬ್ಯಾಕ್ ವೋಚರ್ ಪಡೆಯಲಿದ್ದಾರೆ. ಈ ಕ್ಯಾಶ್ ಬ್ಯಾಕ್  50 ರೂ.ಗಳ 44 ವೋಚರ್'ಗಳ ರೂಪದಲ್ಲಿರಲಿದೆ. ಇದು ಮೈ ಜಿಯೋ ಖಾತೆಯಲ್ಲಿ ಭವಿಷ್ಯದಲ್ಲಿ ನಡೆಸುವ 198 ರೂ. ಅಥವಾ 299 ರೂ.ಗಳ ರಿಚಾರ್ಜ್'ಗಳಿಗೆ ಮಾತ್ರ ಮಾನ್ಯವಾಗಿರುತ್ತದೆ.

loader