ರಿಲಾಯನ್ಸ್ ಜಿಯೋದಿಂದ ಮತ್ತೊಂದು ಭರ್ಜರಿ ಆಫರ್

technology | Friday, April 6th, 2018
Suvarna Web Desk
Highlights

ದಿನದಿಂದ ದಿನಕ್ಕೆ ಹೊಸ ಹೊಸ ರೀತಿಯ ಆಫರ್’ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿರುವ ರಿಲಾಯನ್ಸ್ ಜಿಯೋ ಇದೀಗ ಮತ್ತೊಂದು ಸ್ಪಷಲ್ ಆಫರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ.

ಮುಂಬೈ : ದಿನದಿಂದ ದಿನಕ್ಕೆ ಹೊಸ ಹೊಸ ರೀತಿಯ ಆಫರ್’ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿರುವ ರಿಲಾಯನ್ಸ್ ಜಿಯೋ ಇದೀಗ ಮತ್ತೊಂದು ಸ್ಪಷಲ್ ಆಫರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ.

ಮಾರ್ಚ್ 31ಕ್ಕೆ ಜಿಯೋ ಮೆಂಬರ್’ಶಿಪ್ ಮುಗಿದ ನಂತರವು ಕೆಲವೊಂದು ಹೊಸ ಪ್ಲಾನ್’ಗಳನ್ನು ಘೋಷಿಸಿ ಮತ್ತೆ ಮೆಂಬರ್’ಶಿಪ್ ಮುಂದುವರಿಸಿಲು ಅವಕಾಶ ನೀಡಲಾಗಿತ್ತು. ಇದೀಗ ಮತ್ತೊಂದು ಭರ್ಜರಿ ಆಫರ್’ನ್ನು ರಿಲಾಯನ್ಸ್ ಜಿಯೋ ಘೋಷಿಸಿದೆ.  251 ರು. ರಿಚಾರ್ಜ್ ಮಾಡಿಸಿದಾಗ 102 ಜಿಬಿ  ಡೇಟಾ 51 ದಿನಗಳ ವ್ಯಾಟಲಿಡಿಟಿಯೊಂದಿಗೆ ಈ ಆಫರ್ ನೀಡಲಾಗಿದೆ.

ಇದನ್ನು ಕ್ರಿಕೆಟ್ ಸೆಷನ್ ಪ್ಯಾಕ್ ಎಂದು ಕರೆಯಲಾಗಿದೆ. ಈ ಹೊಸ ಫರ್ ಬಗ್ಗೆ ರಿಲಾಯನ್ಸ್ ಜಿಯೋ ಘೋಷಣೆಯನ್ನೂ ಹೊರಡಿಸಿದೆ.

Comments 0
Add Comment