ಜಿಯೋದ ಫೀಚರ್ ಫೋನ್‌ಗಳು ಫೇಸ್‌ಬುಕ್, ವಾಟ್ಸಪ್ ಸೇರಿದಂತೆ ಜನಪ್ರಿಯ ಆ್ಯಪ್‌ಗಳಿಗೆ ಸಹಕರಿಸುವುದಿಲ್ಲ

ಮುಂಬೈ(ಅ.30): ಗ್ರಾಹಕರಿಂದ ಭಾರೀ ಬೇಡಿಕೆ ಗಳಿಸಿದ ಹೊರತಾಗಿಯೂ 1500 ರು. ಮುಂಗಡ ಠೇವಣಿಯ ಉಚಿತ ಜಿಯೋ ಫೀಚರ್ ಫೋನ್ ಉತ್ಪಾದನೆಯನ್ನು ರಿಲಯನ್ಸ್ ಜಿಯೋ ಸ್ಥಗಿತಗೊಳಿಸಿದೆ. ಅದರ ಬದಲು ಏರ್‌ಟೆಲ್ ಮತ್ತು ವೋಡಾಫೋನ್‌ಗಳಿಗೆ ಸಡ್ಡು ಹೊಡೆಯಲು ಆ್ಯಂಡ್ರಾಯಿಡ್ ಆಧರಿತ ಮೊಬೈಲ್ ಬಿಡುಗಡೆಗೆ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಜಿಯೋದ ಫೀಚರ್ ಫೋನ್‌ಗಳು ಫೇಸ್‌ಬುಕ್, ವಾಟ್ಸಪ್ ಸೇರಿದಂತೆ ಜನಪ್ರಿಯ ಆ್ಯಪ್‌ಗಳಿಗೆ ಸಹಕರಿಸುವುದಿಲ್ಲ. ಆದರೆ ಪ್ರತಿಸ್ಪರ್ಧಿ ಕಂಪನಿಗಳ ಮೊಬೈಲ್‌ಗಳಲ್ಲಿ ಈ ಸೇವೆ ಇದೆ. ಹೀಗಾಗಿ ಅಂಥದ್ದೇ ಮೊಬೈಲ್ ಬಿಡುಗಡೆಗೆ ಜಿಯೋ ಮುಂದಾಗಿದೆ ಎನ್ನಲಾಗಿದೆ.