ಜಿಯೋದಿಂದ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ – 2,200 ರು. ಕ್ಯಾಶ್’ಬ್ಯಾಕ್..!

First Published 17, Feb 2018, 9:59 AM IST
Reliance Jio Football offer
Highlights

ಭರ್ಜರಿ ಆಫರ್’ಗಳ ಸುರಿಮಳೆಯನ್ನು ಸುರಿಸಿ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡ ರಿಲಾಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಭರ್ಜರಿಯಾದ ಆಫರ್ ನೀಡಿದೆ.  

ಮುಂಬೈ : ಭರ್ಜರಿ ಆಫರ್’ಗಳ ಸುರಿಮಳೆಯನ್ನು ಸುರಿಸಿ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡ ರಿಲಾಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಭರ್ಜರಿಯಾದ ಆಫರ್ ನೀಡಿದೆ.  

ಇದೀಗ  ಆಫರ್’ಗೆ ಜಿಯೋ ಫುಟ್ಬಾಲ್ ಆಫರ್ ಎಂದು ಹೆಸರಿಟ್ಟಿದೆ. ಇದರಲ್ಲಿ ಯಾವ ಗ್ರಾಹಕರು ತಮ್ಮ ಜಿಯೋ ನೆಟ್ವರ್ಕ್’ನಲ್ಲಿ 198 ಅಥವಾ 299 ರು. ರಿಚಾರ್ಜ್ ಮಾಡಿಸಿಕೊಂಡು 4ಜಿ ಡಿವೈಸ್ ಆಕ್ಟಿವೇಟ್ ಮಾಡಿಕೊಂಡವರಿಗೆ 2,200 ಕ್ಯಾಶ್ ಬ್ಯಾಕ್ ಆಫರ್ ನೀಡಿದೆ.  ಆದರೆ ಪ್ರೀಪೇಯ್ಡ್ ಗ್ರಾಹಕರು 2018 ಮಾರ್ಚ್ 31ರೊಳಗೆ ರಿಚಾರ್ಜ್ ಮಾಡಿಸಿಕೊಳ್ಳಬೇಕು.

ಈ ಆಫರ್  ಕ್ಸಿಯೋಮಿ, ಸ್ಯಾಮ್’ಸಂಗ್,  ಮೊಟೊ, ಆಸುಸ್, ಹುವಾಯ್, ಪ್ಯಾನಸೋನಿಕ್, ಎಲ್ಜಿ, ನೋಕಿಯಾ, ಮೈಕ್ರೋಮ್ಯಾಕ್ಸ್ ಸೇರಿದಂತೆ ಇತರೆ ಫೋನ್’ಗಳಲ್ಲಿ ಲಭ್ಯವಾಗಲಿದೆ. ಮೊದಲು 198 ಅಥವಾ 299 ಯಶಸ್ವಿ ರಿಚಾರ್ಜ್’ಗೆ 44 ವೋಚರ್ಸ್ ಪ್ಲಾನಲ್ಲಿ  ಮೈ ಜಿಯೋ ಆಪ್’ಗೆ 50 ರು. ಕ್ರೆಡಿಟ್ ಆಗಲಿದೆ.

loader