Asianet Suvarna News Asianet Suvarna News

ಜಿಯೋ ಎಫೆಕ್ಟ್: ವೊಡಾಫೋನ್'ನಿಂದ 4ಜಿ ಡೇಟಾ ಆಫರ್, ಅನ್'ಲಿಮಿಟೆಡ್ ಕಾಲ್ ಕೇವಲ 19 ರೂಪಾಯಿಗೆ

ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆಯೇ ತನ್ನ ವೆಲ್'ಕಂ ಆಫರ್ ಮೂಲಕ ಬಿರುಗಾಳಿ ಎಬ್ಬಿಸಿದ್ದ ಇತರ ಕಂಪೆನಿಗಳ ತಲೆನೋವಿಗೆ ಕಾರಣವಾಗಿತ್ತು. ಆದರೆ ಇನ್ನೂ ಜಿಯೋ ಪ್ರಭಾವ ಕಡಿಮೆಯಾಗಿಲ್ಲ, ಈಗಲೂ ಇತರ ಕಂಪೆನಿಗಳಿಗೆ ಜಿಯೋ ಕಠಿಣ ಸ್ಪರ್ಧೆ ನೀಡುತ್ತಿದೆ. ಇದೇ ಕಾರಣದಿಂದ ಇದೀಗ ವೊಡಾಫೋನ್ ತನ್ನ ಪ್ರೀಪೈಡ್ ಗ್ರಾಹಕರಿಗಾಗಿ ಅನ್'ಲಿಮಿಟೆಡ್ ವಾಯ್ಸ್ ಕಾಲಿಂಗ್ ಹಾಗೂ ಹಾಗೂ ಮೊಬೈಲ್ ಡೇಟಾ ಸೌಲಭ್ಯ ನೀಡನುವಾಗಿದೆ. ವೊಡಾಫೋನ್'ನ ಈ ಆಫರ್ ಒಂದು ದಿನಕ್ಕೆ ಕೇವಲ 19 ರೂಪಾಯಿಯಿಂದ ಆರಂಭವಾಗುತ್ತದೆ.

reliance jio effect vodafone offers 4g data unlimited calls rs 19 a day
  • Facebook
  • Twitter
  • Whatsapp

ನವದೆಹಲಿ(ಮೇ.26): ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆಯೇ ತನ್ನ ವೆಲ್'ಕಂ ಆಫರ್ ಮೂಲಕ ಬಿರುಗಾಳಿ ಎಬ್ಬಿಸಿದ್ದ ಇತರ ಕಂಪೆನಿಗಳ ತಲೆನೋವಿಗೆ ಕಾರಣವಾಗಿತ್ತು. ಆದರೆ ಇನ್ನೂ ಜಿಯೋ ಪ್ರಭಾವ ಕಡಿಮೆಯಾಗಿಲ್ಲ, ಈಗಲೂ ಇತರ ಕಂಪೆನಿಗಳಿಗೆ ಜಿಯೋ ಕಠಿಣ ಸ್ಪರ್ಧೆ ನೀಡುತ್ತಿದೆ. ಇದೇ ಕಾರಣದಿಂದ ಇದೀಗ ವೊಡಾಫೋನ್ ತನ್ನ ಪ್ರೀಪೈಡ್ ಗ್ರಾಹಕರಿಗಾಗಿ ಅನ್'ಲಿಮಿಟೆಡ್ ವಾಯ್ಸ್ ಕಾಲಿಂಗ್ ಹಾಗೂ ಹಾಗೂ ಮೊಬೈಲ್ ಡೇಟಾ ಸೌಲಭ್ಯ ನೀಡನುವಾಗಿದೆ. ವೊಡಾಫೋನ್'ನ ಈ ಆಫರ್ ಒಂದು ದಿನಕ್ಕೆ ಕೇವಲ 19 ರೂಪಾಯಿಯಿಂದ ಆರಂಭವಾಗುತ್ತದೆ.

ವೊಡಾಫೋನ್ ಸೂಪರ್ ಡೇ ಪ್ಲಾನ್ ಅನ್ವಯ ಒಂದು ದಿನಕ್ಕೆ 19 ರೂಪಾಯಿಗೆ ಗ್ರಾಹಕರು ವೊಡಾಫೋನ್ ಟು ವೊಡಾಫೋನ್ ಅನ್'ಲಿಮಿಟೆಡ್ ಸ್ಥಳೀಯ ಹಾಗೂ ಎಸ್'ಟಿಡಿ ಕರೆಗಳನ್ನು ಮಾಡಬಹುದಾಗಿದೆ. ಇದರೊಂದಿಗೆ 100MB 4ಜಿ ಡೇಟಾ ಕೂಡಾ ಸಿಗಲಿದೆ.

ವೊಡಾಫೋನ್ ಸೂಪರ್ ವೀಕ್ ಪ್ಲಾನ್ ಕೂಡಾ ಲಭ್ಯವಿದ್ದು, ಕೇವಲ 49 ರೂಪಾಯಿಗೆ ಏಳು ದಿನಗಳ ಕಾಲ ವೊಡಾಫೋನ್ ಟು ವೊಡಾಫೋನ್ ಅನ್'ಲಿಮಿಟೆಡ್ ಸ್ಥಳೀಯ ಹಾಗೂ ಎಸ್'ಟಿಡಿ ಕರೆಗಳನ್ನು ಮಾಡಬಹುದಾಗಿದೆ. ಇದರೊಂದಿಗೆ 250MB 4ಜಿ ಡೇಟಾ ಕೂಡಾ ಸಿಗಲಿದೆ.

ಮೂರನೇ 4ಜಿ ಪ್ಲಾನ್ 49 ರೂಪಾಯಿಯದ್ದಾಗಿದ್ದು, ಏಳು ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ ವೊಡಾಫೋನ್ ಟು ವೊಡಾಫೋನ್ ಅನ್'ಲಿಮಿಟೆಡ್ ಸ್ಥಳೀಯ ಹಾಗೂ ಎಸ್'ಟಿಡಿ ಕರೆಗಳನ್ನು ಮಾಡುವುದರೊಂದಿಗೆ, 100 ನಿಮಿಷ ಿತರ ನೆಟ್ವರ್ಕ್'ಗಳಿಗೆ ಕಾಲ್ ಮಾಡುವ ಸೌಲಭ್ಯವೂ ಇರುತ್ತದೆ.  

Follow Us:
Download App:
  • android
  • ios