ಇತ್ತೀಚೆಗೆ ಟೆಲಿಕಾಂ ಕಂಪೆನಿಗಳೆಲ್ಲಾ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸುವ ನಿಟ್ಟಿನಲ್ಲಿ ಗ್ರಾಹಕರಿಗೆ ಉಚಿತ ಕರೆ ಹಾಗೂ ಡೇಟಾ ಸೌಲಭ್ಯ ನೀಡಲು ಪೈಪೋಟಿಗೆ ಬಿದ್ದಿವೆ. ಇದಕ್ಕೆ ಕಳೆದ ಆಗಸ್ಟ್'ನಲ್ಲಿ ಲಾಂಚ್ ಆದ ರಿಲಾಯನ್ಸ್'ಗಿಂತ ಉತ್ತಮ ಉದಾಹರಣೆ ಬೇರೊಂದಿಲ್ಲ. ತನ್ನ ವೆಲ್ ಕಂ ಆಫರ್'ನಿಂದ ಇಡೀ ಟೆಲಿಕಾಂ ಕ್ಷೇತ್ರದಲ್ಲೇ ಬಿರುಗಾಳಿ ಎಬ್ಬಿಸಿದ್ದ ಜಿಯೋ ಗ್ರಾಹಕರ ಪ್ರೀತಿಗೆ ಪಾತ್ರವಾಗಿತ್ತು. ಆದರೆ ಸದ್ಯದಲ್ಲೇ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡಲಿರುವ ಮತ್ತೊಂದು ಕಂಪೆನಿ ಜಿಯೋಗೆ ಶಾಕ್ ಕೊಡಲು ಮುಂದಾಗಿದೆ.
ನವದೆಹಲಿ(ಮಾ.29): ಇತ್ತೀಚೆಗೆ ಟೆಲಿಕಾಂ ಕಂಪೆನಿಗಳೆಲ್ಲಾ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸುವ ನಿಟ್ಟಿನಲ್ಲಿ ಗ್ರಾಹಕರಿಗೆ ಉಚಿತ ಕರೆ ಹಾಗೂ ಡೇಟಾ ಸೌಲಭ್ಯ ನೀಡಲು ಪೈಪೋಟಿಗೆ ಬಿದ್ದಿವೆ. ಇದಕ್ಕೆ ಕಳೆದ ಆಗಸ್ಟ್'ನಲ್ಲಿ ಲಾಂಚ್ ಆದ ರಿಲಾಯನ್ಸ್'ಗಿಂತ ಉತ್ತಮ ಉದಾಹರಣೆ ಬೇರೊಂದಿಲ್ಲ. ತನ್ನ ವೆಲ್ ಕಂ ಆಫರ್'ನಿಂದ ಇಡೀ ಟೆಲಿಕಾಂ ಕ್ಷೇತ್ರದಲ್ಲೇ ಬಿರುಗಾಳಿ ಎಬ್ಬಿಸಿದ್ದ ಜಿಯೋ ಗ್ರಾಹಕರ ಪ್ರೀತಿಗೆ ಪಾತ್ರವಾಗಿತ್ತು. ಆದರೆ ಸದ್ಯದಲ್ಲೇ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡಲಿರುವ ಮತ್ತೊಂದು ಕಂಪೆನಿ ಜಿಯೋಗೆ ಶಾಕ್ ಕೊಡಲು ಮುಂದಾಗಿದೆ.
ಕೆನಡಾ ಮೂಲದ ಮೊಬೈಲ್ ಹ್ಯಾಂಡ್'ಸೆಟ್ ತಯಾರಕ ಕಂಪೆನಿ ಡೇಟಾವಿಂಡ್(Datawind) 200 ರೂಪಾಯಿಗೆ ವರ್ಷವಿಡೀ ಇಂಟರ್ನೆಟ್ ಸೇವೆ ನೀಡುವ ಸಾಧ್ಯತೆಗಳಿವೆ. ವರ್ಷಕ್ಕೆ 200 ರೂಪಾಯಿಯಾದರೆ, ತಿಂಗಳಿಗೆ 17 ರೂಪಾಯಿಯಂತೆ ನೀವು ಇಂಟರ್ನೆಟ್ ಡೇಟಾ ಬಳಸಬಹುದಾಗಿದೆ.
ಈ ಕುರಿತಾಗಿ ಮಾತನಾಡಿರುವ ಈ ಕಂಪೆನಿಯ ಅಧ್ಯಕ್ಷ ಹಾಗೂ ಕಾರ್ಯಕಾರಿ ಅಧಿಕಾರಿ ಸುನೀತ್ ಸಿಂಹ ತುಲಿ 'ಕಂಪೆನಿಯು ತನ್ನ ಗ್ರಾಹಕರಿಗೆ ತಿಂಗಳೊಂಕ್ಕೆ 20 ರೂಪಾಯಿ ಇಲ್ಲವೇ ಅದಕ್ಕೂ ಕಡಿಮೆ ದರದಲ್ಲಿ ಇಂಟರ್ನೆಟ್ ಸೇವೆ ನೀಡುವ ಉದ್ದೇಶ ಹೊಂದಿದೆ. ಇದಕ್ಕಾಗಿ ಕಂಪೆನಿ ತನ್ನ ದೂರಸಂಚಾರ ವ್ಯವಹಾರಕ್ಕಾಗಿ 100 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಹಾಗೂ ಈ ಮೊತ್ತವನ್ನು ಲೈಸೆನ್ಸ್ ಪಡೆದ ಬಳಿಕದ ಮೊದಲ 6 ತಿಂಗಳಲ್ಲಿ ಕಂಪೆನಿ ಹೂಡಿಕೆ ಮಾಡಲಿದೆ' ಎಂದು ತಿಳಿಸಿದ್ದಾರೆ.
ಕಡಿಮೆ ವೆಚ್ಚದ ಸ್ಮಾರ್ಟ್'ಫೋನ್ ಮತ್ತು ಟ್ಯಾಬ್ಲೆಟ್ ತಯಾರಿಸುವ ಈ ಕಂಪೆನಿ ದೇಶವಿಡೀ ವರ್ಚುವಲ್ ನೆಟ್'ವರ್ಕ್ ಸೇವೆಗಳನ್ನು ನೀಡಲು ಪರವಾನಿಗೆ ನೀಡುವಂತೆ ಮನವಿ ಮಾಡಿಕೊಂಡಿದೆ. ಈ ಪರವಾನಿಗೆ ಪಡೆದ ಬಳಿಕವಷ್ಟೇ ಕಂಪೆನಿ ಡೇಟಾ ಸೌಲಭ್ಯ ಹಾಗೂ ಮೊಬೈಲ್ ಟೆಲಿಫೋನ್ ಸೇವೆಗಳನ್ನು ನೀಡಲು ಅರ್ಹವಾಗಿರುತ್ತದೆ. ಆದರೆ ಸದ್ಯ ಸೇವೆ ಸಲ್ಲಿಸುವತ್ತಿರುವ ಟೆಲಿಕಾಂ ಕಂಪೆನಿಯ ಒಪ್ಪಂದ ಮಾಡಿಕೊಂಡ ಬಳಿಕವಷ್ಟೇ ಇಂತಹುದ್ದೊಂದು ಆಫರ್ ನೀಡಲು ಕಂಪೆನಿಗೆ ಸಾಧ್ಯವಾಗುತ್ತದೆಯಂತೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಮಾರ್ಚ್ 31ರ ಬಳಿಕ ಜಿಯೋ ನೀಡುತ್ತಿರುವ ವೆಲ್ ಕಂ ಆಫರ್ ಕೊನೆಗೊಳ್ಳಲಿದ್ದು, ಬಳಿಕ ಇದೇ ಸೌಲಭ್ಯ ಬೇಕಾದಲ್ಲಿ ಪ್ರಧಾನ ಸದಸ್ಯತ್ವ ಪಡೆದು ತಿಂಗಳೊಂದಕ್ಕೆ 303 ಅಥವಾ 499 ರೂಪಾಯಿ ರಿಚಾರ್ಜ್ ಮಾಡಬೇಕಾಗುತ್ತದೆ. ಆದರೆ ಈ ಹೊಸ ಕಂಪೆನಿ ಪರವಾನಿಗೆ ಪಡೆದು ಅಸ್ಥಿತ್ವಕ್ಕೆ ಬಂದರೆ ತಿಂಗಳೊಂದಕ್ಕೆ ಸುಮಾರು 17 ರೂಪಾಯಿಗೆ ಡೇಟಾ ಸಿಗಲಿದೆ. ಹೀಗಿರುವಾಗ ಗ್ರಾಹಕರು ಈ ಹೊಸ ಕಂಪೆನಿಯ ಗ್ರಾಹಕರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಹೊಸ ಕಂಪೆನಿ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಬಿರುಗಾಳಿ ಎಬ್ಬಿಸುವುದಂತೂ ಖಚಿತ.
ಕೃಪೆ: NDTv
