Asianet Suvarna News Asianet Suvarna News

ನಿಮ್ಮ ಮೊಬೈಲ್, ಕಂಪ್ಯೂಟರ್ ಪರದೆ ಮೇಲೆ ಪ್ರೈಸ್ ಗೆದ್ದಿದ್ದೀರಿ ಎಂದು ತೋರಿಸ್ತಾ ಇದೆಯಾ? ಹಾಗಾದ್ರೆ ಇದನ್ನು ಓದಿ

ಆಂಡ್ರಾಯ್ಡ್ ಮೊಬೈಲ್, ಕಂಪ್ಯೂಟರ್ ಬಳಕೆ ಮಾಡುವಾಗ ನೀವು ಬಹುಮಾನ ಗೆದ್ದಿದ್ದೀರಿ, ನಿಮ್ಮ ಹೆಸರನ್ನು ನಮೂದಿಸಿ ಬಹುಮಾನವನ್ನು ಪಡೆದುಕೊಳ್ಳಿ ಎನ್ನುವಂತಹ ಸಂದೇಶಗಳು ಪರದೆಯ ಮೇಲೆ ಕಾಣಿಸಿಕೊಳ್ಳುವುದು ಇತ್ತೀಚಿಗೆ ಹೆಚ್ಚಾಗಿದೆ. ಇದೂ ಅಲ್ಲದೇ ಒಂದು ಹಂತ ಮುಂದೆ ಸಾಗಿ ಗ್ರಾಹಕರ ನಂಬರ್‌ಗಳಿಗೆ ಕರೆ ಮಾಡಿ ನಿಮ್ಮ ನಂಬರ್ ಲಕ್ಷ  ರುಪಾಯಿಗಳ ಬಹುಮಾನಕ್ಕೆ ಆಯ್ಕೆಯಾಗಿದೆ. ನೀವು ಪ್ರೋಸೆಸಿಂಗ್ ಚಾರ್ಚ್ ಎಂದು ಇಂತಿಷ್ಟು ತುಂಬಿಸಬೇಕು ಎನ್ನುವಂತಹ ಕರೆಗಳು ಸಾಕಷ್ಟು ಬರುತ್ತಿವೆ.

Reason behind praise offer

ಪ್ರಾರಂಭದಲ್ಲಿ ಇದೆಲ್ಲ ಗೌಣ ಎಂದುಕೊಂಡರೂ ಇಂದು ದೊಡ್ಡ ಮಟ್ಟಕ್ಕೆ ಬೆಳೆದು ಅಮಾಯಕರು ಹೆಚ್ಚಿನ ಪ್ರಮಾಣದಲ್ಲಿ ಮೋಸ ಹೋದ ಘಟನೆಗಳು ಸಾಕಷ್ಟು ದಾಖಲಾದ ಹಿನ್ನೆಲೆಯಲ್ಲಿ ಬ್ರೌಸಿಂಗ್ ತಾಣಗಳಾದ ಗೂಗಲ್ ಕ್ರೋಮ್, ಡೆಸ್ಕ್‌ಟಾಪ್ ಮತ್ತು ಆಂಡ್ರಾಯ್ಡ್‌ಗಳು ಇಂತಹ ಸೈಬರ್ ಕ್ರೈಂಗಳು, ವಂಚಿಸುವ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿವೆ. ಅದಕ್ಕೆ ಇನ್ನೂ ಒಂದಷ್ಟು  ಸಮಯ ಬೇಕಾಗುತ್ತದೆ ಎಂದೂ ಅವು  ಹೇಳಿಕೊಂಡಿವೆ.  ಹಾಗಾಗಿ  ಅಲ್ಲಿಯವರೆಗೆ  ಗ್ರಾಹಕರು ಎಚ್ಚರಿಕೆಯಿಂದ  ಇರಬೇಕು. 

ಹೀಗೆ ಮಾಡಿ 

ಖಚಿತ ಬಹುಮಾನ, ನೀವು ಬಹುಮಾನಕ್ಕೆ ಆಯ್ಕೆಯಾಗಿದ್ದೀರಿ ಎನ್ನುವಂತಹ ಪೋಸ್ಟ್‌ಗಳ ಮೇಲೆ ಕ್ಲಿಕ್ ಮಾಡದೇ ಬ್ರೌಸಿಂಗ್ ಅಂತ್ಯಗೊಳಿಸುವುದು ಉತ್ತಮ.
 
ಒಂದು ವೇಳೆ ಪರದೆಯ ಮೇಲೆ ಬಂದ ಫೇಕ್ ಮಾಹಿತಿ ಆಧರಿಸಿ ಮುಂದುವರಿದರೆ ಕಂಪ್ಯೂಟರ್ ಅಥವಾ ಮೊಬೈಲ್‌ಗೆ ವೈರಸ್ ದಾಳಿಯಾಗಬಹುದಾದ ಸಾಧ್ಯತೆ ದಟ್ಟವಾಗಿರುತ್ತದೆ. ಆ್ಯಂಟಿ ವೈರಸ್ ಸಾಫ್ಟ್‌ವೇರ್ ಬಳಕೆ ಮಾಡಿ.

ಇನ್ನುಳಿದಂತೆ ಇದರಿಂದ ಫೇಸ್ ಬುಕ್, ಕಾಂಟ್ಯಾಕ್ಟ್, ಬ್ಯಾಂಕ್ ಅಕೌಂಟ್‌ಗಳ  ಮೇಲೂ ದಾಳಿ ಮಾಡಲು ಅವಕಾಶವಾಗಬಹುದು. ಹಾಗಾಗಿ, ನಿಮಗೆ ಈ  ರೀತಿಯ ಬಹುಮಾನ ಮತ್ತು ಶುಭಾಶಯ ಸಂದೇಶ ಬಂದಾಗ ಕಂಪ್ಯೂಟರ್ ಅಥವಾ
ಮೊಬೈಲ್‌ನ ಬ್ರೌಸರ್ ಅಪ್ಲಿಕೇಷನ್ ಅಂತ್ಯಗೊಳಿಸುವುದು ಸೂಕ್ತ.

Follow Us:
Download App:
  • android
  • ios