Asianet Suvarna News Asianet Suvarna News

ಫೇಸ್’ಬುಕ್ ಬಳಕೆ ಬಿಟ್ಟರೆ ಹೆಚ್ಚು ಸಂತೋಷವಾಗಿರಬಹುದು..!

ಫೇಸ್ ಬಳಕೆಯನ್ನು ಬಿಟ್ಟಲ್ಲಿ ನೀವು ಹೆಚ್ಚು ಸಂತೋಷವಾಗಿರಬಹುದು ಎನ್ನುವ ಅಂಶ ಇದೀಗ ಹೊರಹಾಕಿದೆ

Quitting Facebook Makes People Happier

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಫೇಸ್’ಬುಕ್ ಸೇರಿದಂತೆ ಅನೇಕ ಟೆಕ್ನಾಲಜಿಗಳಿಗೆ ಜನರು ಅಡಿಕ್ಟ್ ಆಗಿರುವುದನ್ನು ನಾವು ಕಾಣುತ್ತೇವೆ. ಇದರಿಂದ ಮನುಷ್ಯನ ಮೇಲೆ ಸಕಾರಾತ್ಮಕವಾದ ಪರಿಣಾಮಕ್ಕಿಂತ ಕೆಲ ಟೆಕ್ನಾಲಜಿಯಿಂದ ನಕಾರಾತ್ಮಕವಾದ ಪರಿಣಾಮಗಳೇ ಅತ್ಯಂತ ಹೆಚ್ಚಿನ ಪ್ರಮಾಣದ್ದಾಗಿರುತ್ತದೆ.

ಇದೀಗ ನಡೆದ ಸಂಶೋಧನೆಯೊಂದು ಹೊಸ ವಿಚಾರವನ್ನು ಬಿಚ್ಚಿಟ್ಟಿದೆ. ಅದರಲ್ಲಿ ಫೇಸ್ ಬಳಕೆಯನ್ನು ಬಿಟ್ಟಲ್ಲಿ ನೀವು ಹೆಚ್ಚು ಸಂತೋಷವಾಗಿರಬಹುದು ಎನ್ನುವ ಅಂಶ ಇದೀಗ ಹೊರಹಾಕಿದೆ.ಡೆನ್ಮಾರ್ಕ್ ಸೇರಿದಂತೆ ಕೆಲ ದೇಶಗಳಲ್ಲಿ ಈ ಬಗ್ಗೆ ಸಂಶೋಧನೆಯೊಂದನ್ನು ನಡೆಸಲಾಗಿದ್ದು, ಇದರಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಹೆಚ್ಚಿನ ಪ್ರಮಾಣದಲ್ಲಿ ಜನರು ಫೇಸ್ ಬುಕ್’ನಿಂದ ಹೊರ ಬಂದಾಗ ಹೆಚ್ಚು ಸಂತೋಷ ದೊರಕಿದೆ ಎಂದು ಜನರು ಹೇಳಿದ್ದಾರೆ. ಕೆಲ ದಿನಗಳ ಕಾಲ ಫೇಸ್ ಬುಕ್ ಬಳಕೆಯನ್ನು ಬಿಡುವಂತೆ ಹೇಳಿದ್ದು, ನಂತರ ಅವರನ್ನು ಪುನಃ ಪ್ರಶ್ನಿಸಿದಾಗ  ಉತ್ತರ ಬಂದಿದೆ.  

Follow Us:
Download App:
  • android
  • ios