ಬೆಂಗಳೂರು(ಆ.12): ದುಬಾರಿ ಕಾರುಗಳು, ಲಕ್ಸರಿ ಲೈಫ್ ಬೆಂಗಳೂರಿಗೆ ಹೊಸದಲ್ಲ. ಅದೆಷ್ಟೇ ದುಬಾರಿ ಬೆಲೆಯ ಕಾರು ಬೆಂಗಳೂರಿನ ರಸ್ತೆಯಲ್ಲಿ ಕಾಣಸಿಗುತ್ತವೆ. ಇದೀಗ ಭಾರತದ ಮೊದಲ ಪೊರ್ಶೆ 911ಜಿಟಿ2 RS ಕಾರು ಬೆಂಗಳೂರಿಗೆ ಕಾಲಿಟ್ಟಿದೆ.

ಪೊರ್ಶೆ ಕಾರು ಇತ್ತೀಚಗಷ್ಟೆ ಭಾರತದಲ್ಲಿ ಬಿಡುಗಡೆಯಾಗಿತ್ತು. ಮೊದಲ ಕಾರನ್ನ ಬೆಂಗಳೂರಿನ ಭೂಪೇಶ್ ರೆಡ್ಡಿ ಖರೀದಿಸಿದ್ದಾರೆ. ಈ ಮೂಲಕ ಪೊರ್ಶೆ 911ಜಿಟಿ2 RS ಕಾರು ಖರೀದಿಸಿದ ಭಾರತದ ಮೊದಲಿಗೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

 

ಪೊರ್ಶೆ 911ಜಿಟಿ2 RS ಕಾರಿನ ಬೆಲೆ 3.88 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). 3.8 ಲೀಟರ್ ಫ್ಲ್ಯಾಟ್ 6 ಇಂಜಿನ್ ಕಾರು 700 ಬಿಹೆಚ್‌ಪಿ ಹಾಗೂ 750 ಎನ್‌ಎಮ್ ಟಾರ್ಕ್ಯೂ ಉತ್ಪಾದಿಸಲಿದೆ. 

ನೂತನ ಪೊರ್ಶೆ 911ಜಿಟಿ2 RS ಕಾರಿನ ಗರಿಷ್ಠ ವೇಗ ಪ್ರತಿ ಗಂಟೆಗೆ 340 ಕೀಮಿ. 0 ಯಿಂದ 100 ಕೀಮಿ ತಲುಪಲು ಪೊರ್ಶೆ 911ಜಿಟಿ2 RS ಕಾರು ತೆಗೆದುಕೊಂಡ ಸಮಯ ಕೇವಲ 2.8 ಸೆಕೆಂಡ್‌ಗಳು ಮಾತ್ರ. ಈ ಮೂಲಕ ಅತೀ ವೇಗದ ಕಾರು ಅನ್ನೋ ಹೆಗ್ಗಳಿಕೆಗೂ ಪೊರ್ಶೆ 911ಜಿಟಿ2 RS ಪಾತ್ರವಾಗಿದೆ.