ಪೊಲೀಸರು ಬೈಕ್ ಅಡ್ಡ ಹಾಕಿದ ತಕ್ಷಣವೇ ನಿಮ್ಮ ಕೇಳೋ ಪ್ರಶ್ನೆಗಳನ್ನ ನೀವೊಮ್ಮೆ ನೆನಪಿಸಿಕೊಳ್ಳಿ.  ಲೈಸೆನ್ಸ್ ಎಲ್ಲಿ , ಇನ್ಶೂರೆನ್ಸ್ ಕೊಡಿ ಸೇರಿದಂತೆ ಹಲವು ದಾಖಲೆಗಳನ್ನ ಕೇಳ್ತಾರೆ. ಆದರೆ ಇದೇ ಮೊದಲ ಬಾರಿ ಪೊಲೀಸರು ಬೈಕ್ ಅಡ್ಡ ಹಾಕಿ ದಾಖಲೆ ಬಿಟ್ಟು ಬೇರೇ ಪ್ರಶ್ನೆ ಕೇಳಿದ್ದಾರೆ. ಅಷ್ಟಕ್ಕೂ ಪೊಲೀಸರು ಕೇಳಿದ ಪ್ರಶ್ನೆಗಳು ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ.

ನವದೆಹಲಿ(ಆ.02): ಬೈಕ್‌ನಲ್ಲಿ ರೈಡರ್‌ಗಳನ್ನ ಅಡ್ಡ ಹಾಕುವ ಪೊಲೀಸರು ದಾಖಲೆ ಕೇಳೋದು ಸಾಮಾನ್ಯ. ಕೇಳದ ದಾಖಲೆಗಳು ನೀಡಿದರೆ ನಿಮ್ಮ ಪ್ರಯಾಣ ಸುಖಕರ. ಆದರೆ ರೆಕಾರ್ಡ್ ಮಿಸ್ ಆದರೆ ದಂಡ ಕಟ್ಟದೆ ಮುಂದೆ ಹೋಗುವಂತಿಲ್ಲ. ಪೊಲೀಸರು ಅಡ್ಡ ಹಾಕಿದ ಮೇಲೆ ಕೇಳೋ ಮೊದಲ ಪ್ರಶ್ನೆ ಲೈಸೆನ್ಸ್. ಎರಡನೆಯದ್ದು ಇನ್ಶೂರೆನ್ಸ್. ಆದರೆ ದೆಹಲಿ ಸಮೀಪದಲ್ಲಿ ಮಾತ್ರ ಬೈಕ್ ಅಡ್ಡ ಹಾಕಿದ ಪೊಲೀಸರು ದಾಖಲೆ ಮಾತ್ರ ಕೇಳಲೇ ಇಲ್ಲ. 

ದೆಹಲಿ- ಶ್ರೀನಗರಕ್ಕೆ ತೆರಳು ರಾಷ್ಟ್ರೀಯ ಹೆದ್ದಾರಿಯ ಚೆಕ್‌ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ. ರೈಡರ್ ಬನೇಲಿ ಟಿಎನ್‌ಟಿ 300 ಬೈಕ್ ಏರಿ ದೆಹಲಿಯತ್ತ ಮುಖಮಾಡಿದ್ದ. ಚೆಕ್‌ಪೋಸ್ಟ್ ಬಳಿ ಅಡ್ಡಗಟ್ಟಿದ ಪೊಲೀಸರು, ದಾಖಲೆ ಬದಲು ಸೂಪರ್ ಬೈಕ್ ಕುರಿತು ಹಲವು ಪ್ರಶ್ನೆ ಕೇಳಿದರು.

ನಾಲ್ಕು ಪೊಲೀಸರು ಬೈಕ್ ಸುತ್ತುವರಿದು ಸಂಪೂರ್ಣವಾಗಿ ಸೂಪರ್ ಬೈಕ್ ಪರಿಶೀಲಿಸಿದರು. ಬೆಲೆ ಎಷ್ಟು, ಮೈಲೇಜ್, ಇಂಜಿನ್ ಸಿಸಿ ಸೇರಿದಂತೆ ಹತ್ತು ಹಲವು ಪ್ರಶ್ನೆ ಕೇಳಿ ಮಾಹಿತಿ ಕಲೆಹಾಕಿದರು. ಬನೇಲಿ ಟಿಎನ್‌ಟಿ 300 ಬೈಕ್ ಭಾರತದಲ್ಲಿರೋ ಪವರ್‌ಫುಲ್‌ಗಳಲ್ಲೊಂದು. ಇದರ ಬೆಲೆ 4 ಲಕ್ಷ ರೂಪಾಯಿ(ಎಕ್ಸ್ ಶೋರೂಂ). 300 ಸಿಸಿ ಇಂಜಿನ್ ಹೊಂದಿರೋ ಈ ಬೈಕ್, 6 ಸ್ಪೀಡ್ ಗೇರ್ ಹೊಂದಿದೆ. 

ಸೂಪರ್ ಬೈಕ್ ಕುರಿತು ಮಾಹಿತಿ ಕೇಳಿದ ಪೊಲೀಸರು, ರೈಡರ್‌ನಿಂದ ಯಾವುದೇ ದಾಖಲೆ ಕೇಳಲಿಲ್ಲ. ಹೈವೇನಲ್ಲಿ ಪೊಲೀಸರು ಈ ರೀತಿ ಸೂಪರ್ ಬೈಕ್‌ಗಳನ್ನ ನಿಲ್ಲಿಸಿ ಅದರ ಮಾಹಿತಿ ಕಲೆಹಾಕಿರೋ ಉದಾಹರಣೆಗಳಿವೆ. ಆದರೆ ಯಾವುದೇ ದಾಖಲೆ ಕೇಳದೇ ಬಿಟ್ಟಿರೋದು ತೀರಾ ಕಡಿಮೆ.