Asianet Suvarna News Asianet Suvarna News

ಭಾರಿ ವೈರಲ್ ಆಗುತ್ತಿದೆ ಕಿಕಿ ಚಾಲೆಂಜ್-ಪೊಲೀಸರ ಎಚ್ಚರಿಕೆ!

ಕಿಕಿ ಚಾಲೆಂಜ್ ಇದೀಗ ಭಾರಿ ವೈರಲ್ ಆಗುತ್ತಿದೆ. ಕಿಕಿ ಚಾಲೆಂಜ್ ಜನಪ್ರೀಯವಾಗುತ್ತಿದ್ದಂತೆ, ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಏನಿದು ಕಿಕಿ ಚಾಲೆಂಜ್? ಈ ಚಾಲೆಂಜ್ ಕುರಿತು ಪೊಲೀಸರು ಎಚ್ಚರಿಕೆ ನೀಡಿದ್ದು ಯಾಕ? ಇಲ್ಲಿದೆ.

Police issue warning over peforming Kiki challenge

ಮಂಬೈ(ಜು.26): ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್ ನೀಡೋದು, ಚಾಲೆಂಜ್ ಸ್ವೀಕರಿಸೋದು ಈಗ ಟ್ರೆಂಡ್ ಆಗಿದೆ. ಫಿಟ್ನೆಸ್ ಚಾಲೆಂಜ್, ಐಸ್ ಬಕೆಟ್ ಚಾಲೆಂಜ್ ಸೇರಿದಂತೆ ಹಲವು ಚಾಲೆಂಜ್‌ಗಳು ಭಾರಿ ಜನಪ್ರೀಯವಾಗಿದೆ. ಇದೀಗ ಕಿಕಿ ಚಾಲೆಂಜ್ ಅಥವಾ ಮೈ ಫೀಲಿಂಗ್ಸ್ ಅನ್ನೋ ಚಾಲೆಂಜ್ ಭಾರಿ ವೈರಲ್ ಆಗಿದೆ. 

ಕಿಕಿ ಚಾಲೆಂಜ್ ವೈರಲ್ ಆಗುತ್ತಿದ್ದಂತೆ ಪೊಲೀಸರ ತಲೆನೋವು ಹೆಚ್ಚಾಗಿದೆ. ಹೀಗಾಗಿ ಕಿಕಿ ಚಾಲೆಂಜ್ ಸ್ವೀಕರಿಸುವ ಹಾಗೂ ಚಾಲೆಂಜ್ ನೀಡುವರಿಗೆ ಪೊಲೀಸರು ಎಚ್ಚರಿಸಿದ್ದಾರೆ. ದುಬೈ, ಕೆನಾಡ ಸೇರಿದಂತೆ ಹಲವು ದೇಶಗಳಲ್ಲಿ ಕಿಕಿ ಚಾಲೆಂಜ್ ಮಾಡಿದ ಹಲವರನ್ನು ಈಗಾಗಲೇ ಬಂಧಿಸಲಾಗಿದೆ. 

 

 

ಕಿಕಿ ಚಾಲೆಂಜ್ ಅಪಾಯಕಾರಿ ಚಾಲೆಂಜ್. ಚಲಿಸುತ್ತಿರುವ ಕಾರಿನಿಂದ ಇಳಿದು ಡ್ಯಾನ್ಸ್ ಮಾಡುತ್ತಾ ಸಾಗಬೇಕು. ಡ್ಯಾನ್ಸ್ ಜೊತೆಗೆ ಕಾರು ಕೂಡ ಚಲಿಸುತ್ತಿರುತ್ತೆ. ಹೀಗಾಗಿ ಅಪಾಯ ಸಂಭವಿಸೋ ಸಾಧ್ಯತೆ ಹೆಚ್ಚು. ಇದಕ್ಕಾಗಿ ಪೊಲೀಸರು ದಾರಿಯಲ್ಲಿ ಕಿಕಿ ಚಾಲೆಂಜ್ ಮಾಡಿದವರನ್ನ ಬಂಧಿಸಲು ನಿರ್ಧರಿಸಿದ್ದಾರೆ.

 

 

ಮುಂಬೈ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕಿಕಿ ಚಾಲೆಂಜ್ ಮಾಡುವರಿಗೆ ಎಚ್ಚರಿಗೆ ನೀಡಿದೆ. ಇದು ನಿಮಗೆ ಮಾತ್ರವಲ್ಲ, ಇತರ ಪ್ರಾಣಕ್ಕೂ ಅಪಾಯ ಎಂದು ಮುಂಬೈ ಪೊಲೀಸರು ವೀಡಿಯೋ ಟ್ವೀಟ್ ಮಾಡಿದ್ದಾರೆ. 

 

 

ಭಾರತದಲ್ಲೂ ಕಿಕಿ ಚಾಲೆಂಜ್ ವೈರಲ್ ಆಗುತ್ತಿದೆ.  ಹೀಗಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.  ಇಷ್ಟೇ ಅಲ್ಲ ದಾರಿಯಲ್ಲಿ ಕಿಕಿ ಚಾಲೆಂಜ್ ಮಾಡಿ ಇತರರ ಪ್ರಾಣಕ್ಕೂ ಅಪಾಯ ತರುವವರನ್ನ ಬಂಧಿಸಲಾಗುವುದು ಎಂದು ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


 

Follow Us:
Download App:
  • android
  • ios