ಬೆಂಗಳೂರು :  ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಕುಟುಂಬಗಳಿಗೆ ಪೇಟಿಎಂ ಕಂಪನಿ 20 ಲಕ್ಷ ಕ್ಕೂ ಹೆಚ್ಚು ಬಳಕೆದಾರರಿಂದ ಸಂಗ್ರಹಿಸಿದ್ದ 47 ಕೋಟಿ ರು. ದೇಣಿಗೆ ಹಸ್ತಾಂತರಿಸಲಾಗಿದೆ ಎಂದು ಸಂಸ್ಥೆಯ ಸಿಒಒ ಕಿರಣ್‌ ವಸಿರೆಡ್ಡಿ ತಿಳಿಸಿದ್ದಾರೆ. 

ಸಿಆರ್‌ಪಿಎಫ್‌ ಯೋಧರ ಪತ್ನಿಯರ ಕಲ್ಯಾಣ ಸಂಘದೊಂದಿಗೆ (ಸಿಆರ್‌ಪಿಎಫ್‌ ವೈವ್‌್ಸ ವೆಲ್‌ಫೇರ್‌ ಅಸೋಸಿಯೇಷನ್‌) ಕೈಜೋಡಿಸಿದ ಪೇಟಿಎಂ, ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಗ್ರಾಹಕರಲ್ಲಿ ಮನವಿ ಮಾಡಿತ್ತು. 

ಸ್ಪಂದಿಸಿದ 20 ಲಕ್ಷಕ್ಕೂ ಹೆಚ್ಚು ಪೇಟಿಎಂ ಬಳಕೆದಾರರಿಂದ ಫೆ.15ರಿಂದ ಮಾ.10 ರ ವರೆಗೆ 47 ಕೋಟಿ ರು. ದೇಣಿಗೆ ಸಂಗ್ರಹವಾಗಿತ್ತು. ಸಂಗ್ರಹಿಸಿದ ಹಣವನ್ನು ಸಿಆರ್‌ಪಿಎಫ್‌ ಯೋಧರ ಪತ್ನಿಯರ ಕಲ್ಯಾಣ ಸಂಘದ ಅಧ್ಯಕ್ಷೆ ಮನು ಭಟ್ನಾಗರ್‌ ಅವರಿಗೆ ಹಸ್ತಾಂತರಿಸಲಾಯಿತು ಎಂದು ತಿಳಿಸಿದರು.